ಗದಗ ಮಾರ್ಚ.11: ಕರ್ನಾಟಕ ಲೋಕಾಯುಕ್ತ, ಬೆಂಗಳೂರು ರವರ ನಿರ್ದೇಶನದಂತೆ ಕರ್ನಾಟಕ ಲೋಕಾಯುಕ್ತ, ಗದಗ ಕಛೇರಿಯ ಪೊಲೀಸ್ ಅಧಿಕಾರಿಗಳು ಮಾರ್ಚ 15 ರಂದು ಶನಿವಾರದಂದು ಬೆಳಿಗ್ಗೆ 10.30 ಗಂಟೆಯಿAದ ಮಧ್ಯಾಹ್ನ 1.00 ಗಂಟೆಯ ವರೆಗೆ “ತಹಶೀಲ್ದಾರ ಕಛೇರಿ ಸಭಾ ಭವನ ಮುಂಡರಗಿಯಲ್ಲಿ” ಲೋಕಾಯುಕ್ತ ಜನ ಸಂಪರ್ಕ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಸದರಿ ದಿನಾಂಕದAದು ಸಾರ್ವಜನಿಕರಿಂದ ದೂರು/ಅಹವಾಲುಗಳನ್ನು ಸ್ವೀಕರಿಸಲಾಗುವುದು.
ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು, ಅಹವಾಲುಗಳನ್ನು ಹಾಗೂ ತಮ್ಮ ಸರಕಾರಿ ಕೆಲಸಗಳಿಗೆ ಸಂಬAಧಿಸಿದAತೆ ಯಾವುದೇ ಸರಕಾರಿ ಕಛೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿರುವ ಬಗ್ಗೆ ಲಿಖಿತ ದೂರನ್ನು ದಾಖಲಿಸುವ ಬಗ್ಗೆ, ಸರಕಾರಿ ಅಧಿಕಾರಿಗಳು ಸರಕಾರದ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಉದ್ದೇಶ ಪೂರ್ವಕ ತಾರತಮ್ಯ ಮಾಡುತ್ತಿರುವ ಬಗ್ಗೆ ಲಿಖಿತ ದೂರನ್ನು ದಾಖಲಿಸುವ ಬಗ್ಗೆ, ಸರಕಾರದ ಯೋಜನೆಗಳ ಅನುಷ್ಟಾನದಲ್ಲಿ ಅನಗತ್ಯ ವಿಳಂಬ, ಕಳಪೆ ಕಾಮಗಾರಿ ನಡೆಸಿ ಹಣ ದುರುಪಯೋಗಪಡಿಸಿದ ದೂರುಗಳ ಬಗ್ಗೆ ಲಿಖಿತ ದೂರನ್ನು ದಾಖಲಿಸುವ ಬಗ್ಗೆ, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದೊಳಗೆ ಮಾಡಿಕೊಡದೆ, ಅಕ್ರಮ ಸಂಭಾವನೆ (ಲಂಚದ ಹಣ)ಯ ಸಲುವಾಗಿ ಅನಗತ್ಯ ವಿಳಂಬ ಮಾಡುತ್ತಿದ್ದರೆ ಲಿಖಿತ ದೂರವನ್ನು ದಾಖಲಿಸುವ ಬಗ್ಗೆ. ಯಾವುದೇ ಸರಕಾರಿ ಅಧಿಕಾರಿಯು ತಾನು ಕರ್ತವ್ಯ ನಿರ್ವಹಿಸಲು ನಿಯೋಜಿಸಿದ ಕರ್ತವ್ಯವನ್ನು ನಿರ್ವಹಿಸುವಲ್ಲಿ ದುರಾಡಳಿತ ಪ್ರದರ್ಶಿಸುವಂತಹ ಅಧಿಕಾರಿಗಳ ಮೇಲೆ ಲಿಖಿತ ದೂರನ್ನು ದಾಖಲಿಸುವ ಬಗ್ಗೆ. ಪ್ರಪತ್ರ 1 ಮತ್ತು 2 ರಲ್ಲಿ ಅಫಿಡೆವಿಟ್‌ನೊಂದಿಗೆ ಅಗತ್ಯ ದಾಖಲಾತಿಗಳೊಂದಿಗೆ ಲಿಖಿತ ದೂರನ್ನು ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಲೋಕಾಯುಕ ಆರಕ್ಷಕ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.