ಗದಗ : ರೈತರ ಹೊಟ್ಟು, ಮೇವಿನ ಬಣವೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು..!

ಗದಗ : ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಕಿಡಿಗೇಡಿಗಳು ರೈತರ ಮೇವಿನ ಬಣವಿ, ಹೊಟ್ಟಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಊರ ಹೊರವಲಯದ ಬಯಲು ಪ್ರದೇಶದಲ್ಲಿ ಗ್ರಾಮಸ್ಥರು ಒಂದೇ ಕಡೆ 40ಕ್ಕೂ ಹೆಚ್ಚು ಮೇವಿನ ಬಣವಿ, ಹೊಟ್ಟು ರಾಶಿ ಕೂಡಿ ಹಾಕಿದ್ದರು.

ಇದ್ದಕ್ಕಿದ್ದಂತೆ ಮೇವಿನ ಬಣವಿಗೆ ಬೆಂಕಿ ಹೊತ್ತಿಕೊಂಡಿದೆ. ರೈತರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ 40ಕ್ಕೂ ಹೆಚ್ಚು ಮೇವಿನ ಬಣವಿ, ಕೃಷಿ ಸಲಕರಣೆಗಳು ಬೆಂಕಿಗಾಹುತಿಯಾಗಿದ್ದವು.

ರೈತರು ತಮ್ಮ ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ಮೇವಿನ ಬಣವಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಯಾ‌ರೋ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಮೇವು ಬೆಂಕಿಗಾಹುತಿಯಾಗಿದ್ದು, ಜಾನುವಾರುಗಳ ಪಾಡೇನು ಎಂದು ರೈತರು ಕಂಗಾಲಾಗಿದ್ದಾರೆ.

Leave a Reply

Your email address will not be published. Required fields are marked *