ಗದಗ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ

ಗದಗ  ಮಾರ್ಚ.12 : ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾದ ಗುನ್ನಾ ನಂಬರ: 12/2025 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಕಾಣೆಯಾದ ಮಹಿಳೆ ಸೋಫಿಯಾ ತಂದೆ ಮಲ್ಲಿಕಸಾಬ ರೋಣದ ವಯಾ: 18 ವರ್ಷ 08 ತಿಂಗಳ ಉದ್ಯೋಗ ಮನೆಗೆಲಸ ಸಾ: ನರೇಗಲ್ಲ ತಾ: ಗಜೇಂದ್ರಗಡ ಇವಳು ದಿನಾಂಕ 02/03/2025 ರಂದು ರಾತ್ರಿ 11:00 ಘಂಟೆಯಿAದ ದಿನಾಂಕ 03/03/2025 ರಂದು ಬೆಳಗ್ಗೆ 04:30 ಗಂಟೆಯ ನಡುವಿನ ಅವಧಿಯಲ್ಲಿ ನರೇಗಲ್ಲ ಪಟ್ಟಣದ ತನ್ನ ತಂದೆಯ ಮನೆಯಿಂದ ಹೋದವಳು ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಈ ಬಗ್ಗೆ ನರೇಗಲ್ಲ ಪೊಲೀಸ್ ಠಾಣೆಯಲ್ಲಿ ದಿನಾಂಕ 07/03/2025 ರಂದು ಪ್ರಕರಣ ದಾಖಲಾಗಿರುತ್ತದೆ.

 ಕಾಣೆಯಾದ ಮಹಿಳೆಯ ಚಹರೆಪಟ್ಟಿಯ ವಿವರ

ಹೆಸರು ; ಸೋಫಿಯಾ ತಂದೆ ಮಲ್ಲಿಕಸಾಬ, ವಯಸ್ಸು;18ವರ್ಷ08ತಿಂಗಳು,ಎತ್ತರ;05ಫೂಟ್, ಜಾತಿ;ಮುಸ್ಲೀಂ, ಉದ್ಯೋಗ ;ಮನೆಗೆಲಸ, ಶಿಕ್ಷಣ 10ನೇ ತರಗತಿ

ಚಹರೆ : ಮೈಯಿಂದ ಸಾಧಾರಣ, ಕೆಂಪು ಮೈಬಣ್ಣ, ಕೋಲುಮುಖ, ತಲೆಯಲ್ಲಿ ಕಪ್ಪು ಕೂದಲು ಹೊಂದಿರುತ್ತಾಳೆ.

ಧರಿಸಿದ ಬಟ್ಟೆಗಳು : ತಿಳಿ ಹಸಿರು ಬಣ್ಣದ ಚೂಡಿದಾರ, ಕಪ್ಪು ಬಣ್ಣದ ಬುರ್ಕಾ ಧರಿಸಿರುತ್ತಾಳೆ.

ಮಾತನಾಡುವ ಭಾಷೆ : ಕನ್ನಡ ಹಾಗೂ ಉರ್ದು ಭಾಷೆ ಮಾತನಾಡುತ್ತಾಳೆ.

ಸದರಿ ಕಾಣೆಯಾದ ಮಹಿಳೆಗೆ ಪತ್ತೆ ಮಾಡುವ ಕುರಿತು ಕಾಣೆಯಾದ ಮಹಿಳೆಯ ಭಾವಚಿತ್ರವನ್ನು, ಅವಳ ವಿವರಗಳನ್ನು ಹಾಗೂ ಪೊಲಿಸ್ ಪ್ರಕಟಣೆಯನ್ನು ಲಗತ್ತಿಸಿರುತ್ತದೆ. ಸದರಿ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪಿಎಸ್‌ಐ ನರೇಗಲ್ ಪೊಲೀಸ್ ಠಾಣೆ ಮೊಬೈಲ್ ನಂಬರ: 08381-268233 / 9480804454, ಸಿಪಿಐ ರೋಣ ಮೊಬೈಲ ನಂ: 9480804434, ಗದಗ ಪೊಲೀಸ್ ಕಂಟ್ರೋಲ್ ರೂಂ ಮೊಬೈಲ ನಂ: 9480804400 ನೇದ್ದಕ್ಕೆ ಸಂಪರ್ಕಿಸಬಹುದಾಗಿದೆ

Leave a Reply

Your email address will not be published. Required fields are marked *