ಗದಗ ೨೧: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ವಕ್ಫ ಮಂಡಳಿ ಬೆಂಗಳೂರು ವತಿಯಿಂದ ಗದಗ ಜಿಲ್ಲೆಯ ಆಯ್ದ ವಕ್ಫ ಸಂಸ್ಥೆಗಳಿಗೆ ಮೃತ ದೇಹವನ್ನು ಶೇಖರಿಸಲು ಮತ್ತು ಸುಗಮವಾಗಿ ಸಾಗಿಸಲು ಅನುಕೂಲವಾಗುವ ಸದುದ್ದೇಶದಿಂದ ಸುಸಜ್ಜಿತ ಮಾಡ್ಯುಲರ್ ಫ್ರೀಜರ್ ಬ್ಯಾಕ್ಸ್ ವಿತರಣೆ ಕಾರ್ಯಕ್ರಮವನ್ನು ಜಾಕೀರ ಹುಸೇನ ಶಾದಿಮಹಲ್‌ನಲ್ಲಿ ಜರುಗಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಜಿ.ಎಮ್ ದಂಡಿನ್ ಅಧ್ಯಕ್ಷರು ಜಿಲ್ಲಾ ವಕ್ಫ ಸಲಹಾ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾನ್ಯ ಶ್ರೀ ಜಿ.ಎಸ್.ಪಾಟೀಲ್ ಶಾಸಕರು ರೋಣ-ಗಜೇಂದ್ರಗಡ ವಹಿಸಿಕೊಂಡಿದ್ದರು ಅತಿಥಿಗಳಾಗಿ ಮಾನ್ಯ ಶ್ರೀ ಡಿ.ಆರ್. ಪಾಟಿಲ್ ಮಾಜಿ ಶಾಸಕರು, ಶ್ರೀ ಅಕ್ಷರಸಾಬ ಬಬರ್ಚಿ ಅಧ್ಯಕ್ಷರು ನಗರಾಭೀವೃದ್ಧಿ ಕೋಶ ಗದಗ, ಶ್ರೀ ಕೃಷ್ಣಗೌಡ ಪಾಟೀಲ್ ಯುವ ನಾಯಕರು ಕಾಂಗ್ರೆಸ್ ಸಮಿತಿ ಭಾಗವಹಿಸಿದ್ದರು
ಮಾನ್ಯ ಶ್ರೀ ಜಿ.ಎಸ್.ಪಾಟಿಲ್ ಶಾಸಕರು ರೋಣ-ಗಜೆಂದ್ರಗಡರವರು ಜಿಲ್ಲೆಯ ಪಲಾನುಭವಿ ವಕ್ಫ ಸಂಸ್ಥೆಗಳಿಗೆ ಮಾಡ್ಯುಲರ್ ಫ್ರೀಜರ್ ಬ್ಯಾಕ್ಸ ವಿತರಿಸಿ, ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅದರ ಸಮರ್ಪಕ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.