ಗದಗ: ಜುಲೈ 2: ಕರ್ನಾಟಕ ಲೋಕಾಯುಕ್ತ ಗದಗ ಕಚೇರಿಯ ಪೊಲೀಸ್ ಅಧಿಕಾರಿಗಳು ಜುಲೈ 9 ರ ಬುಧವಾರದಂದು ಬೆಳಿಗ್ಗೆ 10.30 ಗಂಟೆಯಿAದ ಮಧ್ಯಾಹ್ನ 1 ಗಂಟೆಯವರೆಗೆ ತಹಶೀಲ್ದಾರ ಕಚೇರಿ ಸಭಾಭವನ ನರಗುಂದದಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸದರಿ ದಿನಾಂಕದAದು ಸಾರ್ವಜನಿಕರಿಂದ ದೂರು/ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.