ಗದಗ : ವ್ಯಕ್ತಿ ಕಾಣೆಯಾದ ಬಗ್ಗೆ : ಬೆಟಗೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಬೆಟಗೇರಿ ಪೊಲೀಸ ಠಾಣೆ ಗುನ್ನಾ ನಂ. 16/2025 ಕಲಂ: ಮನುಷ್ಯ ಕಾಣೆ
ಈ ಪ್ರಕರಣದಲ್ಲಿಯ ಪಿರ್ಯಾಧಿದಾರಳಾದ ದೇವಕ್ಕ ಕೋಂ ಹುಚ್ಚಪ್ಪ ಪೂಜಾರ, ವಯಸ್ಸು: 42 ವರ್ಷ, ಜಾತಿ: ಹಿಂದೂ ಮಾದರ. ಉದ್ಯೋಗ: ಕೂಲಿ ಕೆಲಸ, ಸಾ||ನಾಗಸಮುದ್ರ, ತಾ॥ಜಿ॥ಗದಗ ಇವಳ ಗಂಡ ಹುಚ್ಚಪ್ಪ ತಂದೆ ದುಂಡಪ್ಪ ಪೂಜಾರ. ವಯಸ್ಸು: 48 ವರ್ಷ, ಜಾತಿ: ಹಿಂದೂ ಮಾದರ, ಉದ್ಯೋಗ: ಗೌಂಡಿ ಕೆಲಸ, ಸಾ॥ ನಾಗಸಮುದ್ರ, ತಾಜಿ। ಗದಗ ಇವನು ವೀಪರಿತವಾಗಿ ಸರಾಯಿಯನ್ನು ಕುಡಿಯುವ ಚಟವನ್ನು ಹೊಂದಿದ್ದು ಯಾವಾಗಲೂ ಸರಾಯಿಯನ್ನು ನಿಷೆಯಲ್ಲಿರುತ್ತಿದ್ದನು.
ಸದರಿಯವನು ದಿನಾಂಕ: 09/02/2025 ರಂದು ಮುಂಜಾನೆ: 11-30 ಗಂಟೆಯ ಸುಮಾರಿಗೆ ನಾಗಸಮುದ್ರ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಬೆಟಗೇರಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದು, ಕಾಣೆಯಾದ ತನ್ನ ಗಂಡನಿಗೆ ಫಿರ್ಯಾದಿದಾರಳು ಮತ್ತು ಅವರ ಮನೆಯವರು ಇಲ್ಲಿಯವರೆಗೆ ಹುಡುಕಾಡಿ ಅವನು ಸಿಗದಿದ್ದರಿಂದ ಈ ದಿವಸ ತಡವಾಗಿ ಠಾಣೆಗೆ ಬಂದು ಕಾಣಿಯಾದ ತನ್ನ ಗಂಡನಿಗೆ ಹುಡುಕಿ ಕೊಡುವಂತೆ ದಸ್ತರ ಅಖಿತ ಪಿರ್ಯಾಧಿಯನ್ನು ಕೊಟ್ಟಿದ್ದನ್ನು ಸ್ವೀಕರಿಸಿಕೊಂಡು ಬೆಟಗೇರಿ ಪೊಲೀಸ್ ಠಾಣಾ ಗುನ್ನಾ ನಂಬರ್: 16/2025 ಕಲಂ: ಮನುಷ್ಯ ಕಾಣಿ ನೇದ್ದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾಣೆಯಾದ ಮನುಷ್ಯನ ಚಹರೆ ಕೆಳಗಿನಂತೆ ಇರುತ್ತದೆ.
ಹೆಸರು: ಹುಚ್ಚಪ್ಪ ತಂದೆ ದುಂಡಪ್ಪ ಪೂಜಾರ,
ವಯಸ್ಸು: 48 ವರ್ಷ, ಜಾತಿ: ಹಿಂದೂ ಮಾದರ, ಉದ್ಯೋಗ: ಗೌಂಡಿ ಕೆಲಸ,ಎತ್ತರ: 5 ಪೂಟ್ 5 ಇಂಚು ಸಾ|| ನಾಗಸಮುದ್ರ, ತಾಜಿ॥ ಗದಗ.
ಬೆಹೆರೆ: ಸಾಧಾರಣವಾದ ಮೈಕಟ್ಟು, ದುಂಡ ಮುಖ, ಕಪ್ಪು ಮೈ ಬಣ್ಣ, ಚಪ್ಪಟೆ ಮೂಗು, ಕಪ್ಪು ಕಣ್ಣು. ತಲೆಯಲ್ಲಿ ಬಿಳಿ ಕೂದಲು. ಮುಂದಿನ 4 ಹಲ್ಲುಗಳು ಊದುರಿರುತ್ತವೆ. ಬಲಗೈಯಲ್ಲಿ “ದೇವಿ ಹುಚ್ಚಪ್ಪ” ಅಂತಾ ಹಚ್ಚೆ ಇರುತ್ತದೆ. ಬಲಕುತ್ತಿಗೆಯ ಮೇಲೆ ಹಳೆಯ ಮಾದ ಗಾಯದ ಕಲೆ ಇರುತ್ತದೆ. ಬಲಗಾಲು ಕುಂಟುತ್ತಾನೆ.
ಉಡುಪು: ಮನೆಯಿಂದ ಹೋಗುವಾಗ ಬಿಳಿ ಮತ್ತು ನೀಲಿ ಬಣ್ಣ ಮಿಶ್ರಿತ ಚೆಕ್ಸ್ ಶರ್ಟ್, ನೀಲಿ ಬಣ್ಣದ ಚೆಕ್ಸ್ ಲಪಾಟಿ(ಲುಂಗಿ) ತೆಲೆಗೆ ಕಂದು ಬಣ್ಣದ ಉಣ್ಣೆ ಟೊಪ್ಪಿಗೆ ಧರಿಸಿರುತ್ತಾನೆ.
ಭಾಷೆ: ಕನ್ನಡ ಬಾಷೆ ಮಾತನಾಡುತ್ತಾನೆ.
ಮೇಲೆ ಕಾಣಿಸಿದ ಫೋಟೋದಲ್ಲಿರುವ ಚಹರೆಯುಳ್ಳ ಮನುಷ್ಯನು ಕಂಡು ಬಂದಲ್ಲಿ ಈ ಕೆಳಗಿನ ವಿಳಾಸಕ್ಕೆ ತಿಳಿಸಲು ಕೋರಲಾಗಿದೆ. ಬೆಟಗೇರಿ ಪೊಲೀಸ್ ಠಾಣೆ: 08372-246333. ಪಿ.ಎಸ್.ಐ. ಬೆಟಗೇರಿ ಪೊಲೀಸ್ ಠಾಣೆ9480804449betagerigdg@ksp.gov.indcgdg@ksp.gov.in