ಗದಗ : ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಬಂಧಿಸುವಲ್ಲಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಇಬ್ಬರು ಆರೋಪಿಗಳಿಂದ 60,000 / ಮೌಲ್ಯದ 2 ಬೈಕ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಗದಗ : ಕಳೆದ ಹಲವು ದಿನಗಳಿಂದ ಜಿಲ್ಲೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಬಂಧಿಸುವಲ್ಲಿ ಬೆಟಗೇರಿ ಬಡಾವಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ದಿನಾಂಕ : 12/11/2024 ರಂದು ಗದಗ ಹೊಸ ಬಸ್ ನಿಲ್ದಾಣದ ಹತ್ತಿರ ಆರೋಪಿತರಾದ ಶಿರಹಟ್ಟಿ ತಾಲೂಕಿನ ಸಾ : ಬೆಳ್ಳಟ್ಟಿ ನೆಹರು ನಗರ ಸರ್ಕಾರಿ ಆಸ್ಪತ್ರೆಯ ಹತ್ತಿರ ನಿವಾಸಿ ದ್ಯಾಮಣ್ಣ ಮುತ್ತು ತಂದೆ ಶಶಿಧರ ಮುರದಷ್ಟನ್ನವರ,(41)
ಶಿರಹಟ್ಟಿ ತಾಲೂಕಿನ ಸಾ : ಬೆಳ್ಳಟ್ಟಿ ಭೋವಿ ಓಣಿ ನಿವಾಸಿ ಭೀಮಸಿ ತಂದೆ ಮಲ್ಲಪ್ಪ ಶಿರಹಟ್ಟಿ,( 37 )
ಬಂಧಿತ ಆರೋಪಿಗಳು. ಬಂಧಿತ ಇಬ್ಬರು ಆರೋಪಿಗಳಿಂದ ಅರವತ್ತು ಸಾವಿರದ ಮೌಲ್ಯದ 2 ಬೈಕ್‍ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಘಟನೆ: ಬೇಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ದೂರು ದಾಖಲಾಗಿತ್ತು. 81/2024 ಕಲಂ : 303 ಐಪಿಸಿ (2) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಟಗೇರಿ ಬಡಾವಣೆ ಠಾಣೆ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾದರು. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರೀ ಧೀರಜ್, ಚಿ. ಸಿಂಧೆ ಸಿಪಿಐ ಬೆಟಗೇರಿ ವೃತ್ತ ಗದಗ ರವರ ನೇತೃತ್ವದಲ್ಲಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ. ಮಾರುತಿ, ಎಸ್. ಜೋಗದಂಡಕರ, ಪಿ.ಎಸ್.ಐ. [ಕಾ.ವ.ಸು. ], ಶ್ರೀ. ಜೆ.ಎಚ್.ಅಳಗುಂಡಿ ಎ.ಎಸ್.ಐ ಹಾಗೂ ಸಿಬ್ಬಂದಿಯವರಾದ ಪಿ.ಎಚ್.ದೊಡಮನಿ , ಅಶೋಕ ಗದಗ , ಎಸ್.ಎಚ್.ಕಮತರ ಮಹೇಶ ಹೂಗಾರ,ಅವರನ್ನು ಒಳಗೊಂಡ ತಂಡ ಬೈಕ್ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಭೇದಿಸಿದ ಬೆಟಗೇರಿ ಬಡಾವಣೆ ಠಾಣೆಯ ಪೋಲಿಸರ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಸ್ . ನೇಮಗೌಡ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.