Friday, January 24, 2025
Google search engine
Homeಅಪಘಾತಅಣ್ಣಿಗೇರಿ : ಸಿಮೆಂಟ್ ಲಾರಿ ಡಿಕ್ಕಿ, ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು ಇಬ್ಬರಿಗೆ ಗಂಭೀರ...

ಅಣ್ಣಿಗೇರಿ : ಸಿಮೆಂಟ್ ಲಾರಿ ಡಿಕ್ಕಿ, ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು ಇಬ್ಬರಿಗೆ ಗಂಭೀರ ಗಾಯ !

ಅಣ್ಣಿಗೇರಿ/ಗದಗ : ಸಿಮೆಂಟ್ ಲಾರಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರನೊಬ್ಬ ಸ್ಥಳದಲ್ಲೇ ಸಾವನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ  ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಬುಧವಾರ ಮಧ್ಯಾಹ್ನ  2 ಗಂಟೆಗೆ ಸಂಭವಿಸಿದೆ

ಸಿಮೆಂಟ್ ಲಾರಿ ಹುಬ್ಬಳ್ಳಿಯಿಂದ  ಅಣ್ಣಿಗೇರಿ ಪಟ್ಟಣದ ಒಳ ರಸ್ತೆ  ಹೋಗುವ ತಿರುವಿನಲ್ಲಿ (ಹೊಸಪೇಟೆ ಓಣಿ)  67 ರ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಗದಗ ಜಿಲ್ಲೆಯ ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದ ನಿವಾಸಿ ಗೂಳಪ್ಪ ತಂದೆ ಉಮೇಶಪ್ಪ ಉಮ್ಮಣ್ಣವರ ವಯಾ (38)  ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಎಂದು ತಿಳಿದು ಬಂದಿದೆ. ಅಂತ್ಯಸಂಸ್ಕಾರ ಮುಗಿಸಿಕೊಂಡು ಅಡವಿಸೋಮಾಪೂರ ಗೆ ಬರುವಾಗ ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ತಾಯಿ , ಹೆಂಡತಿ  ಇಬ್ಬರಿಗೆ.ಗಂಬೀರ ಗಾಯಗಳಾಗಿವೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.ಈ ಕುರಿತು ಅಣ್ಣಿಗೇರಿ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news