ಗದಗ ನ 14 : ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳ ದಿನಾಚರಣೆ ಅಂಗವಾಗಿ ಧ್ರುವಕುಮಾರ ಐ. ಮೆಣಸಿನಕಾಯಿ ಪ್ರಾಂಶುಪಾಲರು ನೀಡುವ “ಕ್ರೈಸ್ ವಿದ್ಯಾಸಿರಿ 2024-25 ರ ರಾಜ್ಯಪ್ರಶಸ್ತಿ”ಯನ್ನು ನೀಡಲಾಯಿತು.
ಅಬ್ಬಿಗೇರಿಯು ಆಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಅಂಗವಾಗಿ ಶ್ರೀ ರಾಮಣ್ಣ ಹಾ. ಪೂಜಾರವರಿಗೆ “ಕ್ರೈಸ್ ವಿದ್ಯಾಸಿರಿ 2024-25ರ ರಾಜ್ಯಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಶ್ರೀ ರಾಮಣ್ಣ ಹಾ. ಪೂಜಾರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಒಡೆಯರ ಮಲ್ಲಾಪೂರ ತಾ. ಲಕ್ಷ್ಮೇಶ್ವರ ಜಿ. ಗದಗ ವಸತಿ ಶಾಲೆಯಲ್ಲಿ ಅಧ್ಯಯನ ಮಾಡಿ, ಬಿ.ಇ. ಪದವಿ ಪಡೆದು ಸರಳತೆಯ ಸಾಕಾರಮೂರ್ತಿ, ಮಾತೃಹೃದಯದ ಧೀಮಂತ ವ್ಯಕ್ತಿಯಾಗಿ ವನ್ಯಜೀವಿಗಳ ಸಂರಕ್ಷಣೆ ಮತ್ತು ಪರಿಸರ ರಕ್ಷಣೆಯ ಉದ್ದೇಶದಿಂದ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ, ಕೃಷಿಕರ ಆಶಾಕಿರಣನಾಗಿ ಸಮಾಜದಲ್ಲಿ ಮಾದರಿಯ ನಾಗರಿಕನಾಗಿ ಹಲವಾರು ಪ್ರಶಸ್ತಿಗಳನ್ನು ತಮ್ಮ ಮಡಿಲಿಗೆ ಸ್ವೀಕರಿಸಿಕೊಂಡ ನಿಮಗೆ “ಕ್ರೈಸ್ ವಿದ್ಯಾಸಿರಿ 2024-25ರ ರಾಜ್ಯಪ್ರಶಸ್ತಿ”ಯನ್ನು ಶ್ರೀ ಧ್ರುವಕುಮಾರ ಬ. ಮೆಣಸಿನಕಾಯಿ ಪ್ರಾಂಶುಪಾಲರು ನೀಡುವ ಈ ಪ್ರಶಸ್ತಿಯನ್ನು ನವಂಬರ್ 14 ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಧ್ರುವಕುಮಾರ ಬ. ಮೆಣಸಿನಕಾಯಿ ವೀರಣ್ಣ ಅಂಗಡಿ ಹಾಗೂ ಆಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ,ಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.