ಹೊಸ ಸದಸ್ಯರಿಗೆ ಆದೇಶ ಪ್ರತಿ ವಿತರಣಾ ಕಾರ್ಯಕ್ರಮ
ಗದಗ ೦೧: ದಿನಾಂಕ ೦೧/೧೧/೨೦೨೪ ಶುಕ್ರವಾರ ೬೯ನೇ ರಾಜ್ಯೋತ್ಸವ ನಿಮಿತ್ಯ ಡಾ. ಪಂಡಿತ ಪುಟ್ಟರಾಜ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಂ ಪಿ ಮುಳುಗುಂದ ಇವರ ನೇತೃತ್ವದಲ್ಲಿ ಗದಗ ನಗರದ ಗುಜ್ಜರಬಸ್ತಿ ರೋಡನಲ್ಲಿ ಇರುವ ಕಾರ್ಯಾಲಯದಲ್ಲಿ ಶ್ರೀ ಭುವನೇಶ್ವರಿ ಮಾತೆಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಯಿತು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು ಶ್ರೀಗಂಧದ ಬೀಡು ಶಾಂತಿ, ನೆಮ್ಮದಿ, ಹಸಿರು ಬಣ್ಣಗಳಿಂದ, ಕೊಂಗೊಳಿಸುವ ಗಿರಿ ಶಿಖರಗಳ ಬೀಡು ಅಗ್ರಗಣಿ ಸಂಪತ್ತು ಹೊಂದಿರುವ ಸಿರಿನಾಡು ಕರ್ನಾಟಕ, ದೇಶದಲ್ಲಿ ಮಾದರಿಯ ರಾಜ್ಯವಾಗಿರುವುದು ನಮ್ಮೆಲ್ಲರ ಹೆಮ್ಮೆ ಇಂತಹ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯ ಎಂದು ಸಂಸ್ಥಾಪಕ ಅಧ್ಯಕ್ಷರು ತಮ್ಮ ಅನಿಸಿಕೆಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಅಶೋಕ ಬಶೆಟ್ಟಿಯವರು, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ಶ್ರೀ ದಾವಲಸಾಬ ನಾಗನೂರ, ಹಿರಿಯರಾದ ಹಾಜಿಅಲಿ ಎಚ್ ಕೊಪ್ಪಳ, ಸಂಘದ ಪದಾಧಿಕಾರಿಗಳಾದ ಶ್ರೀ ಪ್ರಭಾಕರ ಜುಟ್ಲಾದ, ಶ್ರೀ ಚಾಂದಸಾಬ ಬೂದ್ಲೆಖಾನ, ಶ್ರೀ ಶಂಕ್ರಪ್ಪ ಮಹಂತ ಶೆಟ್ರು, ಶ್ರೀಮತಿ ರೇಖಾ ಬೆಂತೂರ ಶ್ರೀಮತಿ ಕವಿತಾ ಗುಡೂದೂರ ಶ್ರೀಮತಿ ರೇಣುಕಾ ನಾಗಾವಿ ಮತ್ತು ಅನೇಕ ಶಾಲಾ ಮಕ್ಕಳು ಮತ್ತು ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಇದೇ ಸಂದರ್ಭದಲ್ಲಿ ಸಂಘಕ್ಕೆ ಹೊಸ ಸದಸ್ಯರಾಗಿ ಶ್ರೀ ವೆಂಕಟೇಶ ಈರಪ್ಪ ಜಡಿ ಇವರು ಆದೇಶ ಪಡೆದುಕೊಂಡು ಸೇರ್ಪಡೆಗೊಂಡರು ಕಾರ್ಯಕ್ರಮವನ್ನು ಹಾಜಿಅಲಿ ಎಚ್ ಕೊಪ್ಪಳ ಇವರು ನೆರವೇರಿಸಿದರು.