ಗದಗ: ಗದಗ ನಗರದ ದಾಸರ ಓಣಿಯಲ್ಲಿ ಬುದ್ಧಿ ಹೇಳಿದ್ದಕ್ಕೆ ಮಗನೊಬ್ಬ ಹೆತ್ತ ತಾಯಿಯನ್ನೇ ಹತ್ಯೆಗೈದಿರುವ ಘೋರ ಘಟನೆ ನಡೆದಿದೆ.
ಶಾರದಮ್ಮ ಅಗಡಿ (85) ಕೊಲೆಯಾದ ಮಹಿಳೆ. ಮಾನಸಿಕ ಅಸ್ವಸ್ಥ ಮಗ ಸಿದ್ಧಲಿಂಗ ಎಂಬಾತ ತಾಯಿಯನ್ನೇ ಕೊಂದು ಸಹೋದರಿಯರಿಗೆ ಕರೆ ಮಾಡಿ ಹೇಳಿದ್ದಾನೆ.
ಸಿದ್ಧಲಿಂಗ ಪಕ್ಕದ ಮನೆಯವರ ಜೊತೆ ಜಗಳವಾಡಿದ್ದ. ಈ ವೇಳೆ ಮಗ ಮಾನಸಿಕ ಅಸ್ವಸ್ಥ ಆತನನ್ನು ಬಿಟ್ಟುಬಿಡಿ ಎಂದು ಜಗಳ ಬಿಡಿಸಿದ್ದ ತಾಯಿ, ಮಗನನ್ನು ಕರೆದು ಬುದ್ಧಿ ಹೇಳಿದ್ದರು. ಇದಕ್ಕೆ ತಾಯಿ ಮಲಗಿದ್ದ ವೇಳೆ ಆಕೆಯನ್ನು ಹತ್ಯೆಗೈದ ಸಿದ್ಧಲಿಂಗ ಬಳಿಕ ಸಹೋದರಿಯರಿಗೆ ಕರೆ ಮಾಡಿದ್ದಾನೆ.
ತಾಯಿ ಸತ್ತು ಹೋಗಿದ್ದಾರೆ ಎಂದು ಹೇಳಿದ್ದಾನೆ. ಆದರೆ ಸಹೋದರನ ಬುದ್ಧಿ ಸರಿಯಿಲ್ಲ ಎಂದು ನಂಬದ ಸಹೋದರಿಯರು ನಿರ್ಲಕ್ಷ್ಯ ಮಾಡಿ ಸುಮ್ಮನಾಗಿದ್ದಾರೆ. ವಿಷಯ ತಿಳಿದು ನೆರೆಮನೆಯವರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಗದಗ ಶಹರ ಠಾಣೆ ಪೊಲೀಸರು ಪರಿಶೀಲಿಸಿದಾಗ ಮಹಿಳೆ ಸಾವನ್ನಪ್ಪಿರುವುದು ದೃಢವಾಗಿದೆ. ಬಳಿಕ ಸಹೋದರಿಯರಿಗೆ ಪೊಲೀಸರೇ ವಿಷಯ ಹೇಳುತ್ತಿದ್ದಂತೆ ಶಾಕ್ ಆಗಿ ಓಡೋಡಿ ಬಂದಿದ್ದಾರೆ.