ಗದಗ ಅಗಸ್ಟ 29 : ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ತಾಲೂಕು ಕಾನೂನು ಸೇವಾ ಸಮಿತಿ, ನರಗುಂದ, ಹಾಗೂ ಕರ್ನಾಟಕ ಲೋಕಾಯುಕ್ತ ಹಾಗೂ ಕಂದಾಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನರಗುಂದ ತಹಶೀಲ್ದಾರ ಕಚೇರಿಯಲ್ಲಿ ಸಾರ್ವಜನಿಕರಿಗೆ ಹಾಗೂ ತಾಲೂಕು ಅಧಿಕಾರಿಗಳಿಗೆ ಕಾನೂನು ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ, ತಹಶೀಲ್ದಾರ ಶ್ರೀಶೈಲ ತಳವಾರ, ಲೋಕಾಯುಕ್ತ ಪೊಲೀಸ ಇನ್ಸ್ಪೆಕ್ಟರ್ ರವಿ ಪುರುಷೋತ್ತಮ , ವಕೀಲರಾದ ಎಂ.ಡಿ.ಕುಲಕರ್ಣಿ, ಮತ್ತಿತರರು ಇದ್ದರು. ( ಫೋಟೋ ಲಗತ್ತಿಸಿದೆ )