Sunday, March 23, 2025
Google search engine
Homeಉದ್ಯೋಗಗದಗ : ದುಷ್ಟರ ಸಂಹಾರಕ ಶಿಷ್ಟರ ಸಂರಕ್ಷಕ ಶ್ರೀ ಕೃಷ್ಣ ಜನ್ಮಾಷ್ಟಮಿ

ಗದಗ : ದುಷ್ಟರ ಸಂಹಾರಕ ಶಿಷ್ಟರ ಸಂರಕ್ಷಕ ಶ್ರೀ ಕೃಷ್ಣ ಜನ್ಮಾಷ್ಟಮಿ

ಗದಗ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ದಿನಾಂಕ ೨೬/೦೮/೨೦೨೪ ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು ಅಂದು ಪಾಲಕರು ತಮ್ಮ ಮಕ್ಕಳನ್ನು ಕೃಷ್ಣ ಮತ್ತು ರಾಧೆಯರ ಛದ್ಮವೇಷದಲ್ಲಿ ವಾಯ್. ಎನ್. ಚಿಕ್ಕಟ್ಟಿ ಪೂರ್ವಪ್ರಾಥಮಿಕ ಶಾಲೆಗೆ ಕರೆದುಕೊಂಡು ಬಂದಿದ್ದರು ಆ ಮಕ್ಕಳ ಮುಖದಲ್ಲಿರುವ ಮುಗ್ದತೆ ಮತ್ತು ಸಂತೋಷವನ್ನು ಹಾಗೂ ಮಕ್ಕಳು ಧರಿಸಿರುವ ವೇಷ ಭೂಷಣವನ್ನು ನೋಡಿದಾಗ ಸ್ವತಃ ಶ್ರೀಕೃಷ್ಣ ಮತ್ತು ರಾಧೆಯರೆ ಧರೆಗೆ ಬಂದAತೆ ಭಾಸವಾಗುತ್ತಿತ್ತು. ಶ್ರೀಕೃಷ್ಣ ಜನ್ಮಾಷ್ಟಮಿಗೆ ಆಗಮಿಸಿದ ಡಾ|| ಕೆ. ಎಸ್. ಪರಡ್ಡಿ, ನಿವೃತ್ತ ಪ್ರಾಧ್ಯಾಪಕರು, ಬಿ. ಜಿ. ಎಮ್. ಆಯುರ್ವೇದಿಕ ಕಾಲೇಜ. ಶ್ರೀ ಉಮೇಶಗೌಡ ಪಾಟೀಲ, ಪೋಲಿಸ್ ಇನಸ್ಪೇಕ್ಟರ್, ಎಸ್. ಪಿ. ಕಛೇರಿ ಗದಗ, ಶ್ರೀ. ವಿ. ಎಮ್. ಮುಂದಿನಮನಿ, ನಿವೃತ್ತ ಗ್ರಂಥಪಾಲಕರು, ಶ್ರೀ ಸುರೇಶ ಬಸವರಾಜ ಅಂಗಡಿ, ಮಾರುತಿ ಬುಕ್ ಸೆಂಟರ್ ಗದಗ ಮತ್ತು ಸಂಸ್ಥೆಯ ಅಧ್ಯಕ್ಷರಾದ ಪ್ರೋ. ಎಸ್. ವಾಯ್. ಚಿಕ್ಕಟ್ಟಿ ಗಣ್ಯಮಾನ್ಯರೆಲ್ಲರೂ ಜಾಥಾಗೆ ಚಾಲನೆ ನೀಡಿದರು. ಅದರೊಂದಿಗೆ ವಿನಯ್ ಚಿಕ್ಕಟ್ಟಿ IಅSಇ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ವಾದ್ಯಮೇಳಗಳನ್ನು ನುಡಿಸುತ್ತ ಜಾಥಾಗೆ ಇನ್ನಷ್ಟು ಮೆರಗು ತುಂಬಿದರು.

ಜಾಥಾವು ವಾಯ್. ಎನ್. ಚಿಕ್ಕಟ್ಟಿ ಶಾಲೆಯಿಂದ ಪ್ರಾರಂಭವಾಗಿ ಸ್ಟೇಶನ್ ರಸ್ತೆ ಮಾರ್ಗವಾಗಿ ಗಾಂಧೀಜಿ ವೃತ್ತದಿಂದ ಮುಂದೆ ಕೆ.ಸಿ. ರಾಣಿ ರಸ್ತೆಯ ಮೂಲಕ ಸಾಗುತ್ತ ಶಾಲೆಗೆ ತಲುಪಿತು. ಮಾರ್ಗಮಧ್ಯದಲ್ಲಿ ನೆರೆದಿರುವ ಜನರೆಲ್ಲರೂ ಮಕ್ಕಳ ವೇಷಭೂಷಣವನ್ನು ನೋಡುತ್ತ ಮೂಕವಿಸ್ಮಿತರಾಗಿ ತಮ್ಮ ಕಣ್ಮನಗಳನ್ನು ತುಂಬಿಕೊAಡರು.

ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಗೋಕಲಾಷ್ಟಮಿ ಎಂದು ಕೃಷ್ಣನು ಜನಿಸಿದ ದಿನವನ್ನು ಚಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯುಲ್ಲಿ ಸಿಂಹ ಮಾಸದ ರೋಹಿಣಿ ನಕ್ಷತ್ರದ ದಿನ ವೈಭವದಿಂದ ಆಚರಿಸಲಾಗುತ್ತದೆ.

ಆಷ್ಟಮಿಯ ಮಧ್ಯರಾತ್ರಿ ಕಾರಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಮಥುರಾ ಕೃಷ್ಣನ ಜನ್ಮಸ್ಥಳ ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರ ಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ ಅಲ್ಲಿ ನಂದನ ರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ ಯಶೋಧೆ ಅವನನ್ನು ಸಾಕಿ ಬೆಳಸಿದ ತಾಯಿ. ಈಗಿನ ಉತ್ತರ ಪ್ರದೇಶದ ಮಥುರಾ ನಗರವು ಯಾದವ ಕುಲದ ರಾಜಧಾನಿಯಾಗಿತ್ತು.

ಕಂಸ ತಂದೆ ಉಗ್ರಸೇನರನ್ನು ಬಂಧನದಲ್ಲಿಟ್ಟು ತಾನು ರಾಜನಾಗಿದ್ದನು. ನಂತರ ತನ್ನ ಪ್ರೀತಿ ಪಾತ್ರಳಾದ ತಂಗಿ ದೇವಕಿಗೆ ಮದುವೆ ಮಾಡುತ್ತಾನೆ. ಅಣ್ಣ ಕಂಸನು ದೇವಕಿ ವಸುದೇವರ ಮದುವೆಯಾದ ಮೇಲೆ ಅವರನ್ನು ಗಂಡನ ಮನೆಗೆ ಕರೆದೊಯ್ಯುತ್ತಿದ್ದಾಗ ಅವನಿಗೆ ಒಂದು ಅಶರೀರವಾಣಿ ಕೇಳಿಸಿತು. ಅದರ ಪ್ರಕಾರ ದೇವಕಿಯ ಎಂಟನೆಯ ಮಗುವು ಕಂಸನ ವಧೆ ಮಾಡುತ್ತದೆ. ಇದನ್ನು ಕೇಳಿದ ಕಂಸನು ದೇವಕಿಯನ್ನು ಆ ತಕ್ಷಣವೇ ಕೊಲ್ಲಲು ಹೊರಟನು. ಆಗ ವಸುದೇವನು ಅವನನ್ನು ತಡೆದು ಪ್ರತಿ ಮಗುವನ್ನು ಹುಟ್ಟಿದ ತಕ್ಷಣ ಕಂಸನ ಮಡಿಯಲ್ಲಿ ಅರ್ಪಿಸುವುದು ಎಂದು ಹೇಳಿದನು. ಅವರನ್ನು ಬಂಧಿಸಿ ಅವರಿಗೆ ಹುಟ್ಟಿದ ಏಳೂ ಮಕ್ಕಳನ್ನು ಕೊಂದನು. ಎಂಟನೆ ಮಗು ಕೃಷ್ಣನನ್ನು ಅವನಿಗೆ ತಿಳಿಯದ ಹಾಗೆ ಯಮುನಾ ನದಿ ದಾಟಿ ಗೋಕುಲಕ್ಕೆ ಕರೆದುಕೊಂಡು ಹೋದನು.

ಅಲ್ಲಿ ಆಗ ತಾನೆ ಹುಟ್ಟಿದ ಯಶೋಧೆಯ ಮಗಳನ್ನು ಇಲ್ಲಿಗೆ ತಂದನು. ಆದರೆ ಕಂಸ ಅವಳನ್ನು ಕೊಲ್ಲಲು ಬಂದಾಗ ಅವಳು ವಿಷ್ಣುವಿನ ಸಹಾಯಕ್ಕೆ ಯೋಗ ಮಾಯಾರೂಪಕ್ಕೆ ಬದಲಾಗಿ ಅವನ ಸಾವಿನ ಬಗ್ಗೆ ಅರಿಯಬೇಕೆಂದು ಹೇಳಿ ಮಾಯವಾದಳು. ಕೃಷ್ಣ ಗೋಕುಲ ಹಾಗೂ ವೃಂದಾವನದಲ್ಲಿ ಬಲರಾಮನ ಜೊತೆ ಬೆಳೆದು ಕೊನೆಗೆ ಮಥುರಾಗೆ ಬಂದು ಕಂಸನನ್ನು ಕೊಂದನು.

ಜಾಥಾದಲ್ಲಿ ಪ್ರಾಂಶುಪಾಲರಾದ ಶ್ರೀ ವಿನಯ ಎಸ್. ಚಿಕ್ಕಟ್ಟಿ, ಪ್ರಾಚಾರ್ಯರಾದ ಶ್ರೀ ಬಿಪಿನ್ ಎಸ್. ಚಿಕ್ಕಟ್ಟಿ, ಶ್ರೀಮತಿ ಸ್ಪೂರ್ತಿ ವಿನಯ್ ಚಿಕ್ಕಟ್ಟಿ, ಉಪ ಪ್ರಾಚಾರ್ಯಾರಾದ, ಶ್ರೀಮತಿ ಶೋಭಾ ಸ್ಥಾವರಮಠ, ಉಪಮುಖ್ಯೋಪಾಧ್ಯಾಯರಾದ ಶ್ರೀಮತಿ ರಿಯಾನಾ ಮುಲ್ಲಾ ಮತ್ತು ವಾಯ್. ಎನ್. ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಶೋಭಾ ಭಟ್, ವಿನಯ್ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಪುಷ್ಪಲತಾ ಎಮ್. ಬೆಲೇರಿ, ಎಸ್. ವಾಯ್. ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಅನುಶ್ರೀ ಎ. ವಸ್ತçದ ಶಿಕ್ಷಕ/ಕಿ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಜಾಥಾದಲ್ಲಿ ಪಾಲ್ಗೊಂಡಿದ್ದರು.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ ಗದಗ : ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಗದಗ : ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್ ಗದಗ : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಪ್ರಕರಣ : ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ  ಗದಗ : ಅಪಘಾತ: ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌! ಗದಗ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ ಗದಗ : ಮಾರ್ಚ 15 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಗದಗ : ರೈತರ ಹೊಟ್ಟು, ಮೇವಿನ ಬಣವೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು..! ಮಾಜಿ ಪೈಲ್ವಾನರ್ ಮಾಸಾಶನ ಹೆಚ್ಚಳಕ್ಕೆ ಸ್ವಾಗತ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ: ನ್ಯೂಝಿಲೆಂಡ್ ವಿರುದ್ಧ ಭರ್ಜರಿ ಗೆಲುವು