ಗದಗ ಜುಲೈ 11: ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿ.ಪಂ.ಸಿಇಒ ಎಸ್ ಭರತ್ ಇವರ ಅಧ್ಯಕ್ಷತೆಯಲ್ಲಿ ಗುರುವಾರ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಜಿ.ಪಂ.ಸಿಇಓ ಭರತ್ ಎಸ್ ಅವರು ಮಾತನಾಡಿ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ರೋಗವನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಗ್ರಾಮಮಟ್ಟದಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಛರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ವೈಯಕ್ತಿಕ ಶೌಚಾಲಯ ನಿರ್ಮಾಣದ ವಿಷಯವಾಗಿ ಅವಶ್ಯಕತೆಯನುಸಾರ ವೈಯಕ್ತಿಕ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣ ಮಾಡಲು ಕಾರ್ಯಾದೇಶ ವಿತರಿಸಿ ತುರ್ತಾಗಿ ಪ್ರಗತಿ ಸಾಧಿಸುವಂತೆ ಸೂಚಿಸಿದರು.
ಈಗಾಗಲೇ ತಿಳಿದಿರುವಂತೆ ಗ್ರಾಮದಲ್ಲಿ ಮೂಲ ಸಮಸ್ಯೆಗಳಲ್ಲಿ ಒಂದಾದ ಕೊಳಚೆ ನೀರು ನಿರ್ವಹಣೆಯ ವಿಷಯವಾಗಿ ಹಲವಾರು ಸವಾಲುಗಳು ತಲೆದೂರುತ್ತಿದ್ದು ತುರ್ತಾಗಿ ಬೂದು ನೀರು ನಿರ್ವಹಣೆಯ ಕಾಮಗಾರಿಗಳನ್ನು ಪ್ರಾರಂಭಿಸಿ ಮುಕ್ತಾಯಗೊಳಿಸಲು ಕ್ರಮ ವಹಿಸಬೇಕೆಂದರು.
ಸ್ವಚ್ಛ ಭಾರತ್ ಮಿಷನ್ : ವೈಯಕ್ತಿಕ ಶೌಚಾಲಯ:- ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ಗುತಿಸಿರುವ ವೈಯಕ್ತಿಕ ಫಲಾನುಭವಿಗಳಿಗೆ ಕಾಮಗಾರಿ ಆದೇಶವನ್ನು ನೀಡಿ ಕೂಡಲೇ ಶೌಚಾಲಯವನ್ನು ನಿರ್ಮಾಣ ಮಾಡಿಕೋಲಳುವಂತೆ ಪ್ರೇರೇಪಿಸುವುದು.
ಘನತ್ಯಾಜ್ಯ ವಿಲೇವಾರಿ ಘಟಗಳ ಸ್ಥಾಪನೆ: ಗ್ರಾಮಗಳಲ್ಲಿ ಮನೆ-ಮನೆಗಳಿಂದ ಸಂಗ್ರಹಿಸಬೇಕಿರು ಹಸಿ ಮತ್ತು ವಣ ಕಸಗಳನ್ನು ವಿಂಗಡಣೆ ಮಾಡಿ ಸಮಗ್ರವಾಗಿ ನಿರ್ವಹಣೆ ಮಾಡುವ ಬಗ್ಗೆ ಎಲ್ಲಾ ಪಂಚಾಯತಿಗಳ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳು ಹೆಚ್ಚಿನ ಗಮನಹರಿಸುವುದು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
ಮಹಿಳಾ ಭಾಗವಹಿಸುವಿಕೆ ಪ್ರಮಾಣ ಹೆಚ್ಚಳ:- ಆಯುಕ್ತಾಲಯ ನಿರ್ದೇಶನದಂತೆ ಕಡ್ಡಾಯವಾಗಿ ಕನಿಷ್ಠ 60% ರಷ್ಷು ಪ್ರಗತಿ ಸಾಧಿಸಬೇಕಿದ್ದು ಪ್ರಸ್ಥುತ ಜಿಲ್ಲೆಯ ಪ್ರಗತಿಯು ಶೇಕಡಾ 49.24 ರಷ್ಟಿದ್ದು ಈಬಗ್ಗೆ ಹೆಚ್ಚಿನ ಮುತುವರ್ಜಿವಹಿಸಿ ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಪ್ರಗತಿ ಸಾಧಿಸಲು ಸೂಚಿಸಿದರು.

ಕಾಮಗಾರಿಗಳ ಮುಕ್ತಾಯ ವರದಿ ಸಲ್ಲಿಸುವ ಬಗ್ಗೆ:-ಜಿಲ್ಲೆಯಲ್ಲಿ ಕಳೇದೆರಡು ವರ್ಷಗಳಿಂದ ಮುಕ್ತಾಯಗೊಳಿಸದೇ ಬಾಕಿ ಉಳಿದಿರುವ ಸುಮಾರು ಕಾಮಗಾರಿಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಮುಕ್ತಾಯಗೋಳಿಸದೇ ಇರುವುದು ಕಂಡುಬಂದಿದ್ದು ಸಂಭಂಧಿಸಿದ ಅಧಿಕಾರಿ/ಸಿಬ್ಬಂದಿಗಳು ಈಬಗ್ಗೆ ತುರ್ತಾಗಿ ಕಾಮಗಾರಿವಾರು ಮತ್ತೊಮ್ಮೆ ಪರಿಶೀಲಿಸಿ ಮುಕ್ತಾಯಗೊಳಿಸುವುದು.
ಸಾಮಾಜಿಕ ಲೆಕ್ಕ ಪರಿಶೋಧನೆ ಅಡಾಕ್ ಸಭೆ ಆಯೋಜನೆ & ವಸೂಲಾತಿ ಬಗ್ಗೆರಾಜ್ಯಮಟ್ಟದಲ್ಲಿಈ ವಿಷಯವಾಗಿ ಆಗಿಂದ್ದಾಗ್ಗೆ ಪ್ರಗತಿ ಪರಿಶೀಲನೆ ಕೈಗೊಳ್ಳುತ್ತಿದ್ದು ತಾಲ್ಲೂಕು ಮಟ್ಟದಲ್ಲಿ ನಿಯಮಾನುಸಾರ ವೇಳಾಪಟ್ಟಿಯಂತೆ ಅಡಾಕ್ ಸಭೆಗಳನ್ನು ಆಯೋಜಿಸುವುದು ಹಾಗೂ ಜಿಲ್ಲೆಯಲ್ಲಿ ದಾಖಲಾಗಿರುವ ಸಾಮಾಜೀಕ ಲೆಕ್ಕ ಪರಿಶೋಧನಾ ದೂರುಗಳನ್ನು ವಸೂಲಾತಿ ಮಾಡಿ ಇತ್ಯರ್ಥಪಡಿಸುವುದು.
ಹೌಸಿಂಗ್ ಯೋಜನೆ
ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯತಿಗಳಲ್ಲಿ ಸದರಿ ಯೋಜನೆಯಡಿ ಮನೆ ನಿರ್ಮಾಣ ಸೌಲಭ್ಯ ಪಡೆದಿರುವ ಫಲಾನುಭವಿಗಳು ಮನೆ ನಿರ್ಮಾಣ ಮಾಡಿಕೊಳ್ಳಲು ಕಾರ್ಯಾದೇಶ ವಿತರಿಸಿದ್ದರು ಕೆಲವರು ಪ್ರಾರಂಭ ಮಾಡದೇ ಹಾಗೆ ಇರುವುದು ಕಂಡುಬಂದಿರುತ್ತದೆ ಅಂತಹ ಫಲಾನುಭವಿಗಳಿಗೆ ಖುದ್ದಾಗಿ ಮನೆ ಮನೆ ಭೇಟಿ ಮಾಡುವ ಮೂಲಕ ಶೀಘ್ರವೆ ಪ್ರಾರಂಭಿಸಿ ಪ್ರಗತಿ ಸಾಧಿಸಲು ತಿಳಿಸಲು ಕ್ರಮವಹಿಸುವಂತೆ ಸೂಚಿಸಿದರು.

ಪಂಚಾಯತ್ ರಾಜ್ ವಿಷಯಗಳು
ಆಸ್ತಿ ತೆರಿಗೆ ವಸೂಲಾತಿ : ಗ್ರಾಮ ಪಂಚಾಯತಿಯಲ್ಲಿ ನಿರಿಕ್ಷಿತ ಮಟ್ಟದಲ್ಲಿ ತರಿಗೆ ಸಂಗ್ರಹಣೆ ಆಗುತ್ತಿಲ್ಲದ ಕಾರಣ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಖುದ್ದಾಗಿ ಗಮನಹರಿಸಿ ಅಂತಹ ಗ್ರಾಮ ಪಂಚಾಯತಿಗಳಿಗೆ ಭೇಟಿಮಾಡುವುದು, ಸಿಬ್ಬಂದಿಗಳ ಸಮಸ್ಯೆ ಇರುವಲ್ಲಿ ಸರ್ಕಾರದ ನಿರ್ದೇಶನದಂತೆ ಸ್ವ-ಸಹಾಯ ಸಂಘದ ಸದಸ್ಯರಿಂದ ವಸೂಲು ಮಾಡಿಸಲು ಕ್ರಮವಹಿಸುವಂತೆ ಸೂಚಿಸಿದರು.

ಆಸ್ತಿ ಸಮೀಕ್ಷೆ: ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಸರ್ವೆ ಮಾಡಿಸಲು ಸೂಚಿಸಲಾಗಿತ್ತು ಅದರಂತೆ ಆಸ್ತಿ ಸರ್ವೆ ಮಾಡಲು ಬಾಕಿ ಇರುವವರು ಕೂಡಲೇ ಪ್ರಗತಿ ಸಾಧಿಸುವುದು.
ಬಯೋಮೆಟ್ರಿಕ್ ಹಾಜರಾತಿ ಬಗ್ಗೆ:-ಎಲ್ಲಾ ವರ್ಗದ ಅಧಿಕಾರಿಗಳ ಪ್ರತಿ ದಿವಸ ಹಾಜರಾತಿಯನ್ನು ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸುತ್ತಿದ್ದು ಕಡ್ಡಾಯವಾಗಿ ಕಛೇರಿಗಳಿಗೆ ತೆರಳಿ ಸಾರ್ವಜನಿಕರಿಗೆ ಗ್ರಾಮ ಪಂಚಾಯತಿಲ್ಲಿ ಲಭ್ಯವಿರುವಂತೆ ಕಾರ್ಯನಿರ್ವಹಿಸಲು ತಿಳಿಸಿದರು.
ಗ್ರಾಮ ಆರೋಗ್ಯ ಅಭಿಯಾನ
ಸಭೆಯಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಪಂಚಾಯತಿ ರವರು ಮತ್ತು ಎಲ್ಲಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಿಬ್ಬಂದಿಗಳು,ಎಲ್ಲಾ ಗ್ರಾಮ ಪಂಚಾಯಿತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ, ತಾಲ್ಲೂಕು ಮಟ್ಟದ ಎಲ್ಲಾ ಯೋಜನೆಗಳ ಸಿಬ್ಬಂದಿಗಳು ಹಾಜರಿದ್ದರು.