ಗದಗ ೧೦ : ರೋಟರಿ ಗದಗ ಸೆಂಟ್ರಲ್ ಇವರು ಇತ್ತೀಚಿಗೆ ಆಯೋಜಿಸಿದ ರೋಟರಿ ಉತ್ಸವ-೨೪ ಕಾರ್ಯಕ್ರಮವು ಗದಗ ಡಾ. ಎಸ್.ವಿ. ತೋಟಗಂಟಿಮಠ ನರ್ಸಿಂಗ್ ಕಾಲೇಜಿನಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ರೋಟರಿ ಸಿಂಗಿAಗ್ ಸ್ಟಾರ್ ಆಫ್ ಗದಗ ಸ್ಪರ್ಧೆ ನಡೆಸಿ ಪ್ರತಿಭಾವಂತ ಗಾಯಕರನ್ನು ಆಯ್ಕೆಮಾಡಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಯಿತು. ಅಲ್ಲದೇ ರೋಟರಿ ಡ್ಯಾನ್ಸಿಂಗ್ ಸ್ಟಾರ್ ಆಫ್ ಗದಗ ಕಾರ್ಯಕ್ರಮವನ್ನು ಕೂಡಾ ಆಯೋಜಿಸಿ ಅದರಲ್ಲಿ ಆಯ್ಕೆಯಾದ ವಿಜೇತರಿಗೆ ಬಹುಮಾನ ಪಾರಿತೋಷಕಗಳನ್ನು ವಿತರಿಸಲಾಯಿತು. ಪಾರಿತೋಷಕ ವಿತರಣೆಯನ್ನು ರೋಟರಿ ಅಧ್ಯಕ್ಷರಾದ ವಿಜಯಕುಮಾರ ಹಿರೇಮಠ ಹಾಗೂ ಕಾರ್ಯದರ್ಶಿಗಳಾದ ಡಾ. ಸಂತೋಷ ತೋಟಗಂಟಿಮಠ ಮತ್ತು ಪಾಸ್ಟ್ ಸಹಾಯಕ ಗವರ್ನರ್ ಶರಣಬಸಪ್ಪ ಗುಡಿಮನಿಯರನ್ನು ಒಳಗೊಂಡAತೆ ಮಾಡಿದರು. ರೋಟರಿ ಗದಗ ಸೆಂಟ್ರಲ್ ಹಾಗೂ ಡಾ. ಎಸ್.ವಿ. ತೋಟಗಂಟಿಮಠ ನರ್ಸಿಂಗ್ ಕಾಲೇಜಿನ ಸಹಯೋಗತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಅತಿಥಿಯಾಗಿ ಆಗಮಿಸಿದ ಪಾಸ್ಟ್ ಸಹಾಯಕ ಗವರ್ನರ್ ಶರಣಬಸಪ್ಪ ಗುಡಿಮನಿ ಮಾತನಾಡಿ ಕ್ರಿಯಾತ್ಮಕ ಚಿಂತನೆ ಹಾಗೂ ಸೃಜನಶೀಲ ಮನೋಭಾವನೆಯನ್ನು ಬೆಳೆಸುವ ಈ ಕಾರ್ಯಕ್ರಮಗಳು ನಿಜಕ್ಕಾಗಿ ಸಮಾಜದ ಸಾಮರಸ್ಯಯನ್ನು ಎತ್ತಿ ಹಿಡಿಯುತ್ತವೆ ಎಂದು ಅಭಿಪ್ರಾಯಪಟ್ಟರು. ಇನ್ನು ಗ್ರುಪ್ ಡ್ಯಾನ್ಸ್ನಲ್ಲಿ ಡ್ಯಾನ್ಸಿಂಗ್ ಸ್ಟಾರ್ ಆಫ್ ಗದಗ ಪ್ರಥಮ ಬಹುಮಾನ ಚೈತನ್ಯಾ ಡ್ಯಾನ್ಸ್ ಅಕಾಡೆಮಿ, ದ್ವಿತೀಯ ಬಹುಮಾನ ಮಹೇಶ ಹೊಸಳ್ಳಿ ಹಾಗೂ ತಂಡದವರಿಗೆ, ಮೂರನೇ ಬಹುಮಾನ ಹರ್ಷಿತಾ ಮತ್ತು ಜ್ಯೋತಿ ಇವರಿಗೆ ನೀಡಲಾಯಿತು. ಡ್ಯಾನ್ಸಿಂಗ್ ಸೋಲೋ ಕಾರ್ಯಕ್ರಮದಲ್ಲಿ ಚೈತನ್ಯಾ ಡ್ಯಾನ್ಸ್ ಅಕಾಡೆಮಿಯ ನಮ್ರತಾ ಮೊದಲ ಬಹುಮಾನ, ಎರಡನೇ ಬಹುಮಾನ ಶ್ರೀಕಾಂತ ದೊಡ್ಡೂರ ಹಾಗೂ ನಿಕಿತಾ, ಮೂರನೇ ಬಹುಮಾನ ವೇದಾ ಹಿರೇಮಠ ಇವರಿಗೆ ನೀಡಲಾಯಿತು. ಹಾಡಿನ ಸ್ಪರ್ಧೆಯಲ್ಲಿ ಸಿಂಗಿAಗ್ ಸ್ಟಾರ್ ಆಫ್ ಗದಗ ಮೊದಲನೇ ಬಹುಮಾನ ಮನೋಜವಮ್ ರೇವಣಕರ, ಎರಡನೇ ಬಹುಮಾನ ವೀರಯ್ಯ ಹೊಸಮಠ ಹಾಗೂ ಎಸ್.ವಿ.ಟಿ. ಕಾಲೇಜಿನ ಶಿಕ್ಷಕರಾದ ಜೋಯಸನ್ ಬಂಡಿ, ಮೂರನೇ ಬಹುಮಾನ ಶ್ರೀಮತಿ ಪದ್ಮಾ ಕಬಾಡಿ ಹಾಗೂ ಸಮಾಧಾನಕರ ಬಹುಮಾನವನ್ನು ಶಿಕ್ಷಕಿಯರಾದ ಸುಧಾ ಲಮಾಣಿ ಇವರಿಗೆ ನೀಡಲಾಯಿತು.
ಸದರಿ ಕಾರ್ಯಕ್ರಮದಲ್ಲಿ ರೋಟರಿ ಗದಗ ಸೆಂಟ್ರಲ್ ಖಜಾಂಚಿ ಸುನೀಲ ಕಬಾಡಿ, ಸದಸ್ಯರಾದ ಸಂದೀಪ ಕಂಬಳಿ ಹಾಗೂ ಡಾ. ಎಸ್.ವಿ. ತೋಟಗಂಟಿಮಠ ನರ್ಸಿಂಗ್ ಕಾಲೇಜಿನ ಕಾರ್ಯದರ್ಶಿ ಶ್ರೀ ಆನಂದ ತೋಟಗಂಟಿಮಠ ಹಾಗೆಯೇ ಕಾಲೇಜಿನ ಸಿಬ್ಬಂದಿ ವರ್ಗದವರಾದ ವಿನಯ ಕುಪಸತ ಹಾಗೂ ಶ್ರೀಮತಿ ರಾಧಾ ಬೂದಿಹಾಳ ಇವರು ಕಾರ್ಯಕ್ರಮದಲ್ಲಿ ಹಾಜರಿದ್ದರು.