ಗದಗ : ವಿದ್ಯಾದಾನ ಸಮಿತಿ ಬಾಲಕರ ಪ.ಪೂ.ಕಾಲೇಜು, ಗದಗ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ

ಗದಗ-೧೦ : ವಿದ್ಯಾದಾನ ಸಮಿತಿ ಬಾಲಕರ ಪದವಿಪೂರ್ವ ಕಾಲೇಜಿನ ೨೦೨೪-೨೫ನೆಯ ಸಾಲಿಗಾಗಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಮತದಾನದ ಮೂಲಕ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ, ಮಹಿಳಾ ಪ್ರಧಾನ ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಮಹಿಳಾ ಸಹ ಕಾರ್ಯದರ್ಶಿ ಹಾಗೂ ಇನ್ನೂ ಇತರ ವಿಭಾಗಗಳ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಬ್ರಹ್ಮತೇಜ ಬಿ. ಪೀಚಿ, ಸಹ ಕಾರ್ಯದರ್ಶಿಯಾಗಿ ವಿನಾಯಕ ತಾರಿಕೊಪ್ಪ, ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಮಹಿಳಾ ಕ್ರೀಡಾ ಕಾರ್ಯದರ್ಶಿಯಾಗಿ ಲಕ್ಷಿö್ಮÃದೇವಿ ವಾಯ್. ಹೊಸಳ್ಳಿ, ಮಹಿಳಾ ಸಹ ಕಾರ್ಯದರ್ಶಿ ಹಾಗೂ ಮಹಿಳಾ ಸಹ ಕ್ರೀಡಾ ಕಾರ್ಯದರ್ಶಿಯಾಗಿ ನಗೀನಾ ಜಿ. ಕದರಳ್ಳಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವೀರೇಶ ಎಸ್. ಗೌಡ್ರ, ಸಾಂಸ್ಕೃತಿಕ ಸಹ ಕಾರ್ಯದರ್ಶಿಯಾಗಿ ಶ್ರವಣಕುಮಾರ ಎಸ್. ಶಿರಹಟ್ಟಿ, ಮಹಿಳಾ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರವಾಸ, ಪರಿಸರ, ಆರೋಗ್ಯ ಮಹಿಳಾ ಕಾರ್ಯದರ್ಶಿಯಾಗಿ ಗೌರಮ್ಮ ಎನ್. ಹೊಸಳ್ಳಿ, ಮಹಿಳಾ ಸಾಂಸ್ಕೃತಿಕ ಸಹ ಕಾರ್ಯದರ್ಶಿಯಾಗಿ ಪ್ರವಾಸ, ಆರೋಗ್ಯ, ಪರಿಸರ ಮಹಿಳಾ ಸಹ ಕಾರ್ಯದರ್ಶಿಯಾಗಿ ಲಲಿತಾ ಎಸ್. ಕುಂಬಾರ, ಕ್ರೀಡಾ ಕಾರ್ಯದರ್ಶಿಯಾಗಿ ಅಭಿಷೇಕ ಬಿ. ಮಾದರ, ಕ್ರೀಡಾ ಸಹ ಕಾರ್ಯದರ್ಶಿಯಾಗಿ ಮದನ ಬಿ. ಗೌಡನಾಯ್ಕರ ಪ್ರವಾಸ, ಪರಿಸರ ಹಾಗೂ ಆರೋಗ್ಯ ಸಹ ಕಾರ್ಯದರ್ಶಿಯಾಗಿ ಲೋಹಿತ್, ಎನ್. ಬಾರಕೇರ, ಪ್ರವಾಸ, ಪರಿಸರ ಹಾಗೂ ಆರೊಗ್ಯ ಸಹ ಕಾರ್ಯದರ್ಶಿಯಾಗಿ ಅಜ್ಜಯ್ಯ ಎಸ್. ಕುಲಕರ್ಣಿ ಹಾಗೂ ಕ್ರೀಡಾ ಸಹಾಯಕ ಕಾರ್ಯದರ್ಶಿಯಾಗಿ ಆಕಾಶ ಬಿ. ಹಂಚಿನಾಳ ಆಯ್ಕೆಯಾಗಿದ್ದಾರೆ.

ಚುನಾವಣೆಯ ಪ್ರಕ್ರಿಯೆಯು ಮೊದಲು ವಿದ್ಯಾರ್ಥಿ ವಿದ್ಯಾರ್ಥಿನಿಯರು ಚುನಾವಣೆಗೆ ನಾಮಪತ್ರ ಸಲ್ಲಿಸುವದರೊಂದಿಗೆ ಪ್ರಾರಂಭವಾಗಿ ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯುವುದು, ಆದ್ಯತೆಯ ಮೇರೆಗೆ ಚಿನ್ಹೆಗಳ ಹಂಚಿಕೆ, ನಂತರದಲ್ಲಿ ವರ್ಗವಾರು ಕ್ರಮಸಂಖ್ಯೆ, ಹೆಸರು, ಭಾವಚಿತ್ರ ಹಾಗೂ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ಚಿನ್ಹೆ ಒಳಗೊಂಡ ಮತ ಪತ್ರಗಳ ಮುಖಾಂತರ ಮತದಾನದ ಮೂಲಕ ವರ್ಗ ಪ್ರತಿನಿಧಿ ಹಾಗೂ ಮಹಿಳಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಮತಗಟ್ಟೆಯ ವಿವಿಧ ಚುನಾವಣೆಯ ಅಧಿಕಾರಿಗಳಾಗಿ ವಿದ್ಯಾರ್ಥಿಗಳೇ ಕಾರ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು.

ಮುಖ್ಯ ಚುನಾವಣಾ ಅಧಿಕಾರಿಗಳಾಗಿ ರಾಜ್ಯಶಾಸ್ತçದ ಹಿರಿಯ ಉಪನ್ಯಾಸಕರಾದ ಎಸ್.ಆಯ್.ಮೇಟಿ, ಸಹ ಚುನಾವಣಾ ಅಧಿಕಾರಿಗಳಾಗಿ ಆಂಗ್ಲ ಭಾಷೆಯ ಉಪನ್ಯಾಸಕರಾದ ಕಿಶೋರಬಾಬು ಜೆ. ನಾಗರಕಟ್ಟಿ, ಮೇಲುಸ್ತುವಾರಿ ಅಧಿಕಾರಿಗಳಾಗಿ ಜೆ.ಡಿ.ಸಂಶಿ, ಮಂಜುಳಾ ಗಿರಿಯಪ್ಪಗೌಡ್ರ, ಹೆಚ್.ಬಿ. ಕಾಳೆ, ಪಿ.ಜೆ.ನಾಯ್ಕ, ದ್ವಿತೀಯ ದರ್ಜೆ ಸಹಾಯಕ ವಿನಾಯಕ ಬಿ. ಹಂಚಾಟಿ, ಕಛೇರಿ ಸಹಾಯಕ ಶರಣಪ್ಪ ಸೋನಕೊಪ್ಪ ದಕ್ಷವಾಗಿ ಕಾರ್ಯವನ್ನು ನಿರ್ವಹಿಸುವುದರ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಿದರು.

ವಿವಿಧ ಕಾರ್ಯದರ್ಶಿಗಳ ಆಯ್ಕೆಯ ಪ್ರಕ್ರಿಯೆಯ ನಂತರ ಕಾಲೇಜಿನ ಪ್ರಾಚಾರ್ಯರಾದ ಎಂ.ಸಿ.ಕಟ್ಟಿಮನಿ ವರ್ಷದುದ್ದಕ್ಕೂ ನಡೆಯುವ ಕಾರ್ಯಕ್ರಮಗಳು ಕಾರ್ಯದರ್ಶಿಗಳ ಜವಾಬ್ದಾರಿ ಹಾಗೂ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದರು ಚುನಾವಣೆ ಸುಗಮವಾಗಿ ನಡೆಯಲು ಸಹಾಯ, ಸಹಕಾರ ನೀಡಿದ ಉಪನ್ಯಾಸಕರಿಗೆ ಕಛೇರಿ ಸಿಬ್ಬಂದಿಯವರಿಗೆ ಕೃತಜ್ಞತೆಯನ್ನು ಅರ್ಪಿಸಿದರು. ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ಎಲ್ಲಾ ಕಾರ್ಯದರ್ಶಿಗಳಿಗೆ ವಿದ್ಯಾದಾನ ಸಮಿತಿಯ ಅಧ್ಹಕ್ಷರಾದ ಡಿ.ಬಿ.ಹುಯಿಲಗೋಳ, ಕಾರ್ಯದರ್ಶಿಗಳಾದ ಶ್ರೀನಿವಾಸ ಹುಯಿಲಗೋಳರವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *