Sunday, November 10, 2024
Google search engine
Homeಗದಗಗದಗನಲ್ಲಿ ಘರ್ಜಿಸಿದ ಅಹಿಂದಾ ನಾಯಕರು

ಗದಗನಲ್ಲಿ ಘರ್ಜಿಸಿದ ಅಹಿಂದಾ ನಾಯಕರು

ಗದಗ ೧೦: ರಾಜ್ಯದಲ್ಲಿ ಪ್ರಪ್ರಥಮವಾಗಿ ಅಹಿಂದಾ ಘಟಕ ಪ್ರಾರಂಭೋತ್ಸವ ಕಾರ್ಯಕ್ರಮ ಮುಖ್ಯ ಅತಿಥಿಗಳಾದ ರಾಜ್ಯಾಧ್ಯಕ್ಷರಾದ ಪ್ರಭುಲಿಂಗ ದೊಡ್ಡಿನಿÀ, ಸಿ. ಎಂ. ಕರಡಿಕೊಪ್ಪ ರಾಜ್ಯ ಕಾರ್ಯಾಧ್ಯಕ್ಷರು, ಬಿ. ಡಿ. ಮೇಚಣ್ಣವರ ರಾಜ್ಯ ಉಪಾಧ್ಯಕ್ಷರು, ಮುತ್ತಣ್ಣ ಶಿವಳ್ಳಿ ಧಾರವಾಡ ಜಿಲ್ಲಾಧ್ಯಕ್ಷರು. ರಾಜ್ಯ ಸಂಘಟನಾ ಕಾರ್ಯದರ್ಶಿ ವಿಲಾಸ ಕೊಪ್ಪಳ (ವಕೀಲರುÀ), ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷರು ಶ್ರೀಮತಿ ಭಾಗ್ಯ ಬಾಬಣ್ಣವರ, ಗದಗ ಜಿಲ್ಲಾಧ್ಯಕ್ಷ ಸುರೇಶ ಬೀರಣ್ಣವರ, ಜಿಲ್ಲಾ ಕಾರ್ಯದರ್ಶಿ ಜೋಸೆಫ್ ಉದೋಜಿ, ಗದಗ ತಾಲೂಕ ಪ್ರಚಾರ ಸಮಿತಿ ಅಧ್ಯಕ್ಷ ದರ್ಶನ ಕೊರಸ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಲಕ್ಷö್ಮಣ ಹಳ್ಳಿಕೇರಿ, ಗದಗ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಅನಿತಾ ಬಾಗಲಕೋಟ, ಶ್ರೀಮತಿ ಕವಿತಾ ಕಾಶಪ್ಪನವರ, ಶ್ರೀಮತಿ ರೇಖಾ ಬಿ. ಜಡಿಯವರ, ಶ್ರೀಮತಿ ಜಯಶ್ರೀ ಎನ್. ಕುರಿಯವರ, ಸುರೇಖಾ ಕುರಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯದಲ್ಲಿನ ದೀನ, ದಲಿತರ, ಬಡವರ, ಮಹಿಳೆಯರ ಕೆಳ ಸಮುದಾಯಗಳ ಹಕ್ಕು, ಸಾಮಾಜಿಕ ಭದ್ರತೆ, ಸಾಮಾಜಿಕ ನ್ಯಾಯ, ರಾಜಕೀಯ ಮೀಸಲಾತಿಗಳನ್ನು ಹಕ್ಕೊತ್ತಾಯಗಳನ್ನು ಕೊಡಿಸುವ ಶಕ್ತಿ ಅಹಿಂದ.

ಅಹಿಂದ ರಾಜ್ಯ ಒಕ್ಕೂಟ ಎರಡನೇ ನಾಯಕರನ್ನು ಹುಟ್ಟಿ ಹಾಕುವ ಕಾರ್ಖಾನೆ, ಕೆಲವೇ ವರ್ಷಗಳಲ್ಲಿ ಅಹಿಂದಾ ಒಕ್ಕೂಟವು ರಾಜ್ಯದ ಬೃಹತ್ ಅಹಿಂದ ಕುಟುಂಬವಾಗಿ ಹೊರಹೊಮ್ಮಿದ್ದು ನಾವೆಲ್ಲಾ ಒಂದೇ ಧ್ವನಿಯಾಗಿ ಅರ್ಥೈಸಿಕೊಂಡು ಸಮೂಹಗಳು ಒಂದಾಗಿವೆ ಎಂದು ಸಿ. ಎಂ. ಕರಡಿಕೊಪ್ಪ ಹೇಳಿದರು.

ಕರ್ನಾಟಕ ಅಹಿಂದ ಒಕ್ಕೂಟ ರೂಪರೇಷೆಗಳನ್ನು ಸಿದ್ಧಪಡಿಸಿ ಅಹಿಂದ ವರ್ಗಗಳ ನಾಯಕತ್ವ ಮತ್ತು ನಾಯಕರುಗಳನ್ನು ಒಗ್ಗೂಡಿಸಿ ರಾಜ್ಯದ ಹಾಗೂ ರಾಜಕೀಯ ಇತಿಹಾಸದ ಮೂಲಕ ತಿಳಿದುಕೊಂಡು ಬಹುಸಂಖ್ಯಾತರ ದರ್ಪ, ದೌರ್ಜನ್ಯ, ದಬ್ಬಾಳಿಕೆಯಿಂದ ಕೇವಲ ೧೦% ಜನಸಂಖ್ಯೆ ಜಾತಿ ಆಧಾರದ ಮೇಲೆ ಜನ ಆಡಳಿತ ನಡೆಸಿದ್ದಾರೆ. ಈ ತಡೆಯುವ ಶಕ್ತಿ ಅಹಿಂದ ಒಕ್ಕೂಟಕ್ಕೆ ಇದೆ ಎಂದು ಬಿ. ಡಿ. ಮೇಚೆಣ್ಣವರ ಮಾತನಾಡಿದರು.

ಅಹಿಂದ ನಾಯಕರಾದ ಧಾರವಾಡ ಜಿಲ್ಲಾಧ್ಯಕ್ಷರಾದ ಮುತ್ತಣ್ಣ ಶಿವಳ್ಳಿ ಮಾತನಾಡಿ ಅಹಿಂದ ವರ್ಗಗಳ ಇತಿಹಾಸದ ಮೂಲ ೧೨ನೇ ಶತಮಾನದಲ್ಲಿ ನಡೆದ ಘಟನೆಗಳ ಬಗ್ಗೆ ಹಾಗೂ ಬಹುಸಂಖ್ಯಾತರು ಜಾತಿ ಆಧಾರದ ಮೇಲೆ ನಾಲ್ಕು ವರ್ಣ ವ್ಯವಸ್ಥೆ ಮಾಡಿ ಅಹಿಂದ ವರ್ಗಗಳ ತುಳಿಯುವುದರ ವಿರುದ್ಧ ಅಂದು ಬಸವಣ್ಣನವರ ಧ್ವನಿ ಎತ್ತಿದ್ದರು ಸರ್ವರೂ ಸಮಾನರು ಎಂದು ಅಹಿಂದಾ ವರ್ಗಗಳನ್ನು ಒಗ್ಗೂಡಿಸಿ ಲಿಂಗಧಾರಣೆಯ ಮೂಲಕ ದೇವರು ನನ್ನಲ್ಲಿ ಇದ್ದಾನೆ ಎಂದು ತಿಳಿಸಿದರು ಮತ್ತು ಸ್ವಾತಂತ್ರö್ಯ ನಂತರದ ಅಹಿಂದ ವರ್ಗಗಳ, ಸಮುದಾಯಗಳ ಹಕ್ಕು ಮತ್ತು ಸ್ವಾತಂತ್ರö್ಯ, ಮೀಸಲಾತಿ, ಮಹಿಳಾ ರಾಜಕೀಯ ಮೀಸಲಾತಿ, ನೀಡಲು ಡಾ. ಬಾಬಾಸಾಹೇಬ ಅಂಬೇಡ್ಕರವರ ಸಂವಿಧಾನ ರಚನೆಯ ಮಹತ್ವದ ಮುನ್ನೂಡಿಯನ್ನು ಬರೆದಿದ್ದಾರೆ. ಅವರ ಹಾದಿಯಲ್ಲಿ ನಾವು ನಡೆಯೋಣ ಎಂದು ಅಹಿಂದ ಸಂಘಟನೆಗಳ ಒಗ್ಗಟ್ಟಿನಿಂದ ಮುನ್ನಡೆಯೋಣ ಎಂಬ ಸಂಕಲ್ಪದೊAದಿಗೆ ಬರುವ ದಿನಮಾನಗಳಲ್ಲಿ ಅಹಿಂದ ಒಕ್ಕೂಟವನ್ನು ಎನ್ನಷ್ಟು ಬಲಿಪಡಿಸೋಣ ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅಹಿಂದಾ ಸಮುದಾಯಗಳ ಅಭಿವೃದ್ಧಿಗೆ ಶ್ರಮಸೋಣ ಎಂದು ಕರೆ ನೀಡಿದರು. ಅಹಿಂದ ನಾಯಕರಾದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹುಟ್ಟಹಬ್ಬ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಅಹಿಂದ ರತ್ನ ಪ್ರಶಸ್ತಿ ಕಾರ್ಯಕ್ರಮವನ್ನು ಬರುವ ಅಗಸ್ಟ್ ತಿಂಗಳಲ್ಲಿ ೪-೫ ಲಕ್ಷ ಜನತೆಯನ್ನು ಸೇರಿಸಿ ಅಹಿಂದಾ ಬೃಹತ್ ಸಮಾವೇಶವನ್ನು ಮಾಡಲಾಗುವುದು ಎಂದು ತಾವೆಲ್ಲಾ ತನು, ಮನ, ಧನದಿಂದ ಸ್ವಪ್ರೇರಿತವಾಗಿ ಈ ಸಮಾವೇಶದಲ್ಲಿ ಭಾಗಿಯಾಗಿ ವಿನಂತಿಸಿಕೊAಡರು.

ಅಹಿAದಾ ನಾಯಕರಾದ ವಿಲಾಸ ಕೊಪ್ಪಳ ಮಾತನಾಡಿ ಅಹಿಂದಾ ಸಂಘಟನೆ ರಾಜ್ಯಾದ್ಯಂತ ಸಂಘಟನೆ ಬಲಗೊಳ್ಳಬೇಕು. ಮತ್ತು ಮುಂಬರುವ ದಿನಗಳಲ್ಲಿ ಬಲಾಡ್ಯ ರಾಜಕೀಯ ಶಕ್ತಿಯಾಗಿ ಬೆಳೆಯಬೇಕು. ಅಹಿಂದಾ ಜನರು ಯುವ ನಾಯಕರಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೈಲಾರಪ್ಪ ಕೊಟ್ಟೆಪ್ಪನವರ, ವಿನಾಯಕ ಕೌಜಗೇರಿ, ಆನಂದ ಹಂಡಿ, ಹನಮಂತಪ್ಪ ಸರಾಸುರಿ, ಹಜರೇಸಾಬ ಲಕ್ಷೆö್ಮÃಶ್ವರ, ತನ್ವರಅಹ್ಮದ ಮುಳಗುಂದ, ಬಸವರಾಜ ಬೆಳ್ಳಿಕಟ್ಟಿ, ತಿಪ್ಪಣ್ಣ ಕುರಿ, ರವೀಂದ್ರ ರೋಣದ, ವೀರಪ್ಪ ತಳವಾರ, ಎಫ್. ವಾಯ್. ಕುರಿ, ರಾಜು ಕನಿಕಿಕೊಪ್ಪ, ಸಿ. ಬಿ. ಹಟ್ಟಿ, ಅಬುಬಕರ್ ಚೌಥಾಯ, ಆದಿಲ್ ರಾಯಚೂರ, ಎ.ಎಲ್. ಲಕ್ಕುಂಡಿ, ಡಾ. ಶ್ರೀಧರ ಡಿ.ಎಚ್. ಡಾ. ನಿಂಗಪ್ಪ ಶಿವಪ್ಪನವರ, ಕಲ್ಲಪ್ಪ ಮುಕ್ಕಣ್ಣವರ, ಅಬ್ದುಲ್ ನಮಾಜಿ, ಎಸ್. ಎಚ್. ವಡ್ಡರ, ಬಿ.ಬಿ. ಪಲ್ಲೇದ, ಮುತ್ತುರಾಜ ಬಾವಿಮನಿ, ಜಿ. ಆರ್. ಇಂಗಳಗಿ, ದೇವಪ್ಪ ಕಬ್ಬೇರಿ, ಬಸವರಾಜ ಹೊಸಮನಿ, ಸತೀಶ ಹಮಲಗಿ, ಮುದಕಪ್ಪ ಹಳ್ಳಿಗುಡಿ, ವೀರಣ್ಣ ಸಂಗಳದ, ಗಂಗಾಚಿತ್ರಣ್ಣವರ, ಮತ್ತು ಉಳಿದ ಗದಗ ಜಿಲ್ಲಾ ಅಹಿಂದಾ ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಮಾನವೀಯತೆ ಮೆರೆದ ಹೊಳೆಆಲೂರ ಸ್ವಾಭಿಮಾನಿ ಕರವೇ ಕಾರ್ಯಕರ್ತರು  ಗದಗ : ವಿವಿಧ ಅರ್ಜಿ ಆಹ್ವಾನ ಗದಗ : ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶಾತಿಗೆ ಅವಕಾಶ ಗದಗ : ನವೆಂಬರ್ 15 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಮತ್ತು ಸಾರ್ವಜನಿಕ ಅಹವಾಲು ಸ್ವೀಕಾರ ಗದಗ : ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರತಿ ಕ್ವಿಂಟಲ್ ಸಾಮಾನ್ಯ ಭತ್ತಕ್ಕೆ ರೂ 2,300 ಬೆಲೆ ನಿಗದಿ ಗದಗ : ಜಿಗಳೂರು ಕೆರೆಯ ನೀರನ್ನು ಸಮರ್ಪಕ ಸರಬರಾಜು, ನಿರ್ವಹಣೆಗೆ ಸೂಚನೆ ಗದಗ : ಸಕಾಲ ಯೋಜನೆಯ ಪ್ರಗತಿ ಪರಿಶೀಲನೆ ಸಭೆ : ಸಕಾಲ ಅರ್ಜಿಗಳ ವಿಲೇವಾರಿ ತೃಪ್ತಿದಾಯಕವಿರಲಿ ಗದಗ : ಗದಗ ಎಸ್ಪಿ ಬಿ.ಎಸ್. ನೇಮಗೌಡ ಹೆಸರಿನಲ್ಲಿ ಫೇಕ್ ಫೇಸ್‌ಬುಕ್‌ ಐಡಿ ಕ್ರಿಯೆಟ್ ಮಾಡಿ ವಂಚನೆಗೆ ಯತ್ನ  ಗದಗ : ಮೂವರು ಮಕ್ಕಳೊಂದಿಗೆ ತುಂಗಾಭದ್ರಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ! ಪ್ರಕರಣ : ಒಂದು ಮಗುವಿನ ಶವ ಪತ್ತೆ ! ಗದಗ : ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ : ಕಾರ್ಯಾಚರಣೆ ಚುರುಕುಗೊಳಿಸಲು ಸೂಚನೆ