Thursday, September 19, 2024
Google search engine
Homeಗದಗಗದಗ : ಪ್ರಜಾಪ್ರಭುತ್ವ ನೀತಿ ಜಾರಿಗೊಳಿಸಿ ವಕ್ಫ್ ಕಾಯ್ದೆಯ ಪ್ರಕಾರ ಚುನಾವಣೆ ಘೋಷಿಸಿ

ಗದಗ : ಪ್ರಜಾಪ್ರಭುತ್ವ ನೀತಿ ಜಾರಿಗೊಳಿಸಿ ವಕ್ಫ್ ಕಾಯ್ದೆಯ ಪ್ರಕಾರ ಚುನಾವಣೆ ಘೋಷಿಸಿ

ಗದಗ ಆಗಷ್ಟ ೭: ಇಂದು ಅಂಜುಮನ್ ಏ , ಇಸ್ಲಾಂ ಸಂಸ್ಥೆಯ ಚುನಾವಣೆ ಘೋಷಿಸಬೇಕೆಂದು ಆಗ್ರಹಿಸಿ ಗದಗ ಬೆಟಗೇರಿ ಅವಳಿ ನಗರದ ಸುಮಾರು 40 ಜಮಾತ್ ದ ವತಿಯಿಂದ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಿದರು.

ಗದಗ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಆಡಳಿತ ಅವಧಿ ಜನೇವರಿ ತಿಂಗಳಲ್ಲಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸಬೇಕೆಂದು ಗದಗ ಬೆಟಗೇರಿ ಅವಳಿ ನಗರದ ಸುಮಾರು 40 ಜಮಾತ್ ಗಳು ಕೂಡಿಕೊಂಡು ಟಿಪ್ಪು ಸುಲ್ತಾನ್ ಸರ್ಕಲ್ ದಿಂದ ಜೈ ಘೋಷಣೆ ಕೂಗುತ್ತ ಗದಗ ಜಿಲ್ಲಾ ವಕ್ಫ್ ಬೋರ್ಡ್ ಕಚೇರಿವರೆಗೆ ಪಾದಯಾತ್ರೆ ಕೈಗೊಂಡರು.

ಗದಗ – ಬೆಟಗೇರಿ ಅವಳಿ ನಗರದ ಜಮಾತಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಅವಳಿ ನಗರದ ಮುಸ್ಲಿಂ ಬಾಂಧವರು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಚುನಾವಣೆ ಅನಿವಾರ್ಯವಾಗಿದೆ . ಈಗಾಗಲೇ ಕಳೆದ ವರ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮೊಟಕುಗೊಳಿಸುವ ನಿಟ್ಟಿನಲ್ಲಿ ಚುನಾವಣೆ ನಡೆಸದೆ ಅಧಿಕಾರ ಅನುಭವಿಸುತ್ತಿರುವ ಸಂಸ್ಥೆ ಮುಖಂಡರಿಗೆ ಪ್ರಜಾಪ್ರಭುತ್ವ ನೀತಿ ಜಾರಿಗೊಳಿಸಿ ವಕ್ಫ್ ಕಾಯ್ದೆಯ ಪ್ರಕಾರ ಚುನಾವಣೆ ಘೋಷಿಸಬೇಕೆಂದು 7 ದಿನಗಳ ಗಡುವು ನೀಡುತ್ತಿದ್ದು . ಅಂಜುಮನ್ ಇಸ್ಲಾಂ ಸಂಸ್ಥೆಗೆ ಕೂಡಲೇ ಚುನಾವಣೆಯನ್ನು ಘೋಷಣೆ ಮಾಡಲು ಗದಗ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಾಷಸಾಬ ಮಲ್ಲಸಮುದ್ರ ಗದಗ ಬೆಟಗೇರಿ ಅವಳಿ ನಗರದ ಅಂಜುಮನ್ ಏ , ಇಸ್ಲಾಂ ಸಂಸ್ಥೆಯ ಚುನಾವಣೆ ಕಳೆದ 15 ವರ್ಷಗಳಿಂದ ಆಗಿರುವುದಿಲ್ಲ . ಕಾರಣ ಸಮಾಜದ ಮುಸ್ಲಿಂ ಸಮುದಾಯದ ಅಭಿವೃದ್ಧಿ ಕುಂಠಿತಗೊಂಡಿರುತ್ತದೆ . ಈ ಹಿಂದೆ ಚುನಾವಣೆ ಮಾಡುವ ನೆಪದಲ್ಲಿ ಕಳೆದ 8 ವರ್ಷಗಳ ಹಿಂದೆ ಅಡ್ಯಾಕ್ ಕಮೀಟಿ ರಾಜ್ಯ ವಕ್ಫ್ ಬೋರ್ಡ್‌ನಿಂದ ಆದೇಶ ಪಡೆದು ತದ ನಂತರ 3 ವರ್ಷದ ಅವಧಿಗಳ ವರೆಗೆ ಅಂಜುಮನ್ ಆಡಳಿತ ಮಂಡಳಿಯಾಗಿ ಆದೇಶ ಪಡೆದಿರುತ್ತಾರೆ . ಮತ್ತು ಮುಸ್ಲಿಂ ಸಮುದಾಯದ ಜನರ ಗಮನಕ್ಕೆ ಸದರಿ ವಿಷಯವು ಬಂದಿರುವುದಿಲ್ಲ . ಅಲ್ಲದೇ ಈಗಿರುವ ಅಂಜುಮನ್ ಆಡಳಿತ ಅವಧಿ ಜನೇವರಿ ತಿಂಗಳಲ್ಲಿ ಮುಗಿದರೂ ಜಿಲ್ಲಾ ವಕ್ಫ್ ಬೋರ್ಡ್‌ ಫಾರಂ ನಂ : 42 ಹಾಗೂ ಸಂಪೂರ್ಣ ಅವಶ್ಯಕವಿರುವ ದಾಖಲೆಗಳನ್ನು ಪೂರೈಸದೆ ಅಂಜುಮನ್ ಏ , ಇಸ್ಲಾಂ ಸಂಸ್ಥೆಯ ಕೆಲ ಪದಾಧಿಕಾರಿಗಳು ಹಾಗೂ ಅಧ್ಯಕ್ಷರು ಅಧಿಕಾರವಿಲ್ಲದೇ ಅಭಿವೃದ್ಧಿ ಮಾಡುತ್ತೇವೆ ಎಂದು ಪತ್ರಿಕಾಗೋಷ್ಠಿ ಮಾಡಿರುವುದು ವಕ್ಫ್ ನಿಯಮಾವಳಿಗಳ ಪ್ರಕಾರ ಉಲ್ಲಂಘನೆಯಾಗಿದ್ದು ಖಂಡನೀಯ ಎಂದು ಹೇಳಿದರು.

ಮನವಿ ಸ್ವೀಕರಿಸಿ ಮಾತನಾಡಿದ ಗದಗ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾದ ಜಿ ಎಮ್ ದಂಡಿನ ಫಾರಂ ನಂ 42 ಹಾಗೂ ಸಂಪೂರ್ಣ ಅವಶ್ಯಕ ದಾಖಲೆಗಳನ್ನು ಈ ಹಿಂದಿನ ಕಮೀಟಿಯವರು ಪೂರೈಸಿದ್ದಾರೆ. ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರು ಹೇಳಿದರು.

ಈ ಸಂದರ್ಭದಲ್ಲಿ ಮಸಜ್ಜೀದ ಎ ಇಸ್ಮಾಯಲ್, ಅಬೂಬಕರ ಮಜ್ಜೀದ, ಬೆಟಗೇರಿ ಗದಗ ರಹೆಮಾನಶಾವಲಿ ದರ್ಗಾ ಮತ್ತು ಮಸಜೀದ ಕಮೀಟಿ, ಅಲ್ ಅರಪಾತ ಜಮಾತ ಟ್ರಸ್ಟ್, ಯಾಸೀರ ಏಜ್ಯುಕೇಶನಲ್ ಆ್ಯಂಡ್ ಸೋಸಿಯಲ್ ವೆಲ್‌ಫೇರ್ ಟ್ರಸ್ಟ್ ಯಾಸೀರ ಮಸಜೀದ ಮುಸ್ಲಿಂ ಜಮಾತ, ಮಸಜೀದ ಎ ರಹತ, ನೂರಾನಿ ಮಸ್ಜೀದ ಮುಸ್ಲಿಂ ಜಮಾತ, ಖಾನಬಾಗ ಮುಸ್ಲಿಂ ಜಮಾತ, ಅಕ್ಷಾ ಮಜೀದ ಜಮಾತ್, ಮುಬಾರಕ ಮಸಜೀದ, ಇಸ್ಲಾಮಿಯಾ ಜಮಾತ್, ನೌಜವಾನ ಯಂಗ್ ಕಮೀಟಿ, ರಹಮನಿಯಾ ಮಜ್ಜೀದ ಜಮಾತ್, ಅಲ್ಲಾ ನರಗರಡಿ ಮುಸ್ಲಿಂ ಜಮಾತ್, ಅಹದ್ ಜಮಾತ, ನಿಜಾಮುದ್ದೀನ ಜಮಾತ, ಮುಕ್ತುಮ್ ಮಜ್ಜೀದ್, ಈ ಎಲ್ಲ ಜಮಾತಿನವರು ಮತ್ತು ಈ ಹೋರಾಟದಲ್ಲಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ವಿದ್ಯುತ್ ನಿಲುಗಡೆ ಗದಗ : ಪ್ರಜೆಗಳೇ ಪ್ರಭುಗಳು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಿ : ಸಚಿವ ಎಚ್.ಕೆ.ಪಾಟೀಲ ಗದಗ : ಜನರ ಆರೋಗ್ಯ ಕಾಪಾಡಲು ಸ್ವಚ್ಚತೆ ನಮ್ಮ ಮೊದಲ ಕರ್ತವ್ಯ : ಕೀರ್ತಿ, ಪಾಟೀಲ್ ರೋಣ : ಗ್ರಾಮ ಸುಂದರವಾಗಿ ಕಾಣಲು ಸ್ವಚ್ಚತೆ ಮೊದಲ ಆದ್ಯತೆ ಆಗಿರಲಿ : ತಾಪಂ ಇಓ ಮಂಜುಳಾ ಹಕಾರಿ.. ಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು ಕಡ್ಡಾಯ ಗದಗ : ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಗದಗ : ಭೋವಿ ಸಮಾಜದ ತಾಲೂಕ ಅಧ್ಯಕ್ಷ ರಾಜು ಕಳ್ಳಿ ಅವರಿಗೆ ಸನ್ಮಾನ ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು