Monday, February 17, 2025
Google search engine
Homeಆರೋಗ್ಯಗದಗ : ಬಿಸಿಯೂಟ ಸವಿದು ಗುಣಮಟ್ಟ ಪರಿಶೀಲಿಸಿದ ಜಿಪಂ ಸಿಇಓ ಭರತ್ ಎಸ್

ಗದಗ : ಬಿಸಿಯೂಟ ಸವಿದು ಗುಣಮಟ್ಟ ಪರಿಶೀಲಿಸಿದ ಜಿಪಂ ಸಿಇಓ ಭರತ್ ಎಸ್

ಗದಗ ಅಗಷ್ಟ8 : ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರು ಮುಂಡರಗಿ ತಾಲೂಕಿನ ಯಕ್ಲಾಸಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ದಿಢೀರ್ ಭೇಟಿ ನೀಡಿ ಮಧ್ಯಾಹ್ನದ ಬಿಸಿಯೂಟ ಸವಿದು ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲಿಸಿದರು.

ಡಂಬಳ, ಮೇವುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿದ್ದ ವಿವಿಧ ಕಾಮಗಾರಿಗಳ ಪರಿಶೀಲನೆಗೆ ಆಗಮಿಸಿದ್ದ ವೇಳೆ ಅವರು ವಿವಿಧ ಸರಕಾರಿ ಶಾಲೆಗಳಿಗೂ ದಿಢೀರ್ ಭೇಟಿ ನೀಡಿ ಬೋಧನಾ ಗುಣಮಟ್ಟ, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಅಡುಗೆ ಕೋಣೆಗಳಿಗೆ ಭೇಟಿ ನೀಡಿ ಸ್ವಚ್ಛತೆಯನ್ನು ಅವಲೋಕಿಸಿದರು.

ಇದೇ ವೇಳೆ ಅಡುಗೆ ಸಿಬ್ಬಂದಿಗಳೊಂದಿಗೆ ಮಾತನಾಡಿ ಬಿಸಿಯೂಟಕ್ಕೆ ಬಳಸುವ ತರಕಾರಿ, ಮಕ್ಕಳಿಗೆ ವಿತರಿಸುವ ಶೇಂಗಾ ಚಿಕ್ಕಿ, ಮೊಟ್ಟೆ, ಬಾಳೆಹಣ್ಣಿನ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಶಾಲಾ ಮಕ್ಕಳಿಗೆ ವಿತರಿಸಲಾಗುವ ಊಟದ ಕುರಿತು ಅಕ್ಷರ ದಾಸೋಹದ ಕೊಠಡಿಗಳಿಗೆ ಭೇಟಿ ನೀಡಿ ದವಸ ಧಾನ್ಯ, ತರಕಾರಿಗಳನ್ನು ಪರೀಕ್ಷಿಸಿದರು. ಸ್ವತಃ ಅನ್ನ, ಸಾಂಬಾರ್ ಮತ್ತು ಶೇಂಗಾ ಚಿಕ್ಕಿ ಸವಿದು ಬಿಸಿಯೂಟದ ಗುಣಮಟ್ಟ ಪರಿಶೀಲಿಸಿದರು.

ಯಕ್ಲಾಸಪೂರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ದಿಢೀರ್‌ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು. ಪ್ರತಿ ತಿಂಗಳು ಕಡ್ಡಾಯವಾಗಿ ಮಕ್ಕಳು, ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು. ಅನವಶ್ಯಕವಾಗಿ ಗೈರು ಹಾಜರಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಯಕ್ಲಾಸಪೂರ ಗ್ರಾಮಸ್ಥರ ಮನವಿಯ ಮೇರೆಗೆ ದುಸ್ಥಿತಿಯಲ್ಲಿರುವ ಗ್ರಾಮದ ಶಾಲಾ ಆವರಣದ ಕಂಪೌಂಡ್ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಪಿಡಿಓ ಗೆ ಸೂಚಿಸಿದರು.

ಇದಕ್ಕೂ ಮೊದಲು ಭೇಟಿ ನೀಡಿದ ಮೇವುಂಡಿಯ ಸರಕಾರಿ ಕಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಕೆಲ ಹೊತ್ತು ಪ್ರಶ್ನೋತ್ತರ ನಡೆಸಿದ ಅವರು, ಮೂಲಭೂತ ಸೌಕರ್ಯ ಹಾಗೂ ಇನ್ನಿತರೆ ಸೌಲಭ್ಯಗಳ ಕುರಿತು ಪ್ರಶ್ನೆ ಕೇಳಿ ವಿದ್ಯಾರ್ಥಿಗಳಿಂದಲೇ ಉತ್ತರ ಪಡೆದರು.

ಈ ವೇಳೆ ಎಡಿಪಿಸಿ ಕಿರಣಕುಮಾರ್, ಪಿಡಿಓ ಅಕ್ಕಮಹಾದೇವಿ, ಪ್ರಧಾನ ಶಿಕ್ಷಕಿ ಟಿ. ಇಮಾಂಬಿ, ಸಿಆರ್ ಪಿ ಎನ್.ಎಂ ಕುಕನೂರ, ಗ್ರಾಪಂ ಸದಸ್ಯರು, ಶಾಲಾ ಸುಧಾರಣಾ ಸಮಿತಿ ಸದಸ್ಯರು ಹಾಗೂ ತಾಪಂ, ಗ್ರಾಪಂ ಸಿಬ್ಬಂದಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭ ಗದಗ : ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರ ಪ್ರವಾಸ ಕಾರ್ಯಕ್ರಮ ಗದಗ : ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ ಪ್ರವಾಸ ಗದಗ : ಬೆಟಗೇರಿಯ  ಬಡ್ಡಿ ದಂಧೆಕೋರನ  ಖಜಾನೆ ಭೇದಿಸಿದ  ಗದಗ ಪೊಲೀಸರು ! ಮೈಕ್ರೋ ಫೈನಾನ್ಸ್ ಕಿರುಕುಳ ಬ್ರೇಕ್: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಗದಗ : ತುಂಗಾಭದ್ರಾ ನದಿಯ ಅಕ್ರಮ ಮರಳು ಲೂಟಿಕೋರರಿಗೆ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟ ಜಿಲ್ಲಾಧಿಕಾರಿ.! ಗದಗ : ಸೈಬರ್ ಅಪರಾಧಗಳ ಸುರಕ್ಷಾ ಸಲಹೆಗಳನ್ನು ಪಾಲಿಸಿ ಸೈಬರ್ ವಂಚಿಕರಿಂದ ಎಚ್ಚರವಾಗಿರಿ ಗದಗ : ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಗದಗ : ಜೀತ ಪದ್ಧತಿ ಒಂದು ಅಪರಾಧ : ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಗದಗ : ಅಂತೂರ ಗ್ರಾಮ ಪಂಚಾಯಿತಿಗೆ ರಾಜ್ಯ ಮಟ್ಟದ ಅತ್ಯುತ್ತಮ ಗ್ರಾಮ ಪಂಚಾಯತ ಪುರಸ್ಕಾರ.