ಗದಗ ೦೭: ಗದಗ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ವತಿಯಿಂದ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರಾದ ಸತೀಶ ಜಾರಕೀಹೊಳಿಯವರಿಗೆ ಶಿರಹಟ್ಟಿಯ ಶ್ರೀ ಫಕೀರೇಶ್ವರ ಸ್ವಾಮಿಗಳಮಠದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಅಧ್ಯಕ್ಷರಾದ ಕೆ. ವ್ಹಿ. ಪಾಟೀಲರವರು ಸಚಿವರಾಗಿ ಮನವಿ ಸಲ್ಲಿಸಿ ಮಾತನಾಡಿ ಕಳೆದ ಒಂದು ವರ್ಷದಿಂದ ಗುತ್ತಿಗೆದಾರರ ಬಾಕಿ ಬಿಲ್ಲುಗಳು ಹಣ ಭರವಸೆ ಪತ್ರದ ಕೊರತೆಯಿಂದ ಸರಿಯಾಗಿ ಪಾವತಿ ಆಗುತ್ತಿಲ್ಲ. ಈ ಮೊದಲು ಪ್ರತಿ ತಿಂಗಳು ಹಣ ಬಿಡುಗಡೆಯಾಗಿ ನಮ್ಮ ಬಿಲ್ಲುಗಳು ಕಾಲಕಾಲಕ್ಕೆ ಭಾಗಶಃವಾದರೂ ಪಾವತಿ ಆಗುತ್ತಿತ್ತು. ಆದರೆ ಈಗ ಕಳೆದ ೧ ವರ್ಷದಿಂದ ೩ ತಿಂಗಳಿಗೆ ಒಮ್ಮೆರಂತೆ ಹಣ ಬಿಡುಗಡೆ ಆಗುತ್ತಿದ್ದು ಅದೂ ಸಹ ಶೇ. ೫% ರಷ್ಟು ಮಾತ್ರ ಬಿಡುಗಡೆ ಆಗುತ್ತಿರುವುದರಿಂದ ಅದರಂತೆ ನಮಗೂ ಸಹ ಬಿಲ್ಲುಗಳು ಭಾಗಶಃ ಪಾವತಿ ಆಗುತ್ತಿದೆ. ಇದರಿಂದ ಎಲ್ಲಾ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಬ್ಯಾಂಕ್ ಮೂಲಕ ಹಾಗೂ ಖಾಸಗಿ ಸಂಸ್ಥೆಯಿAದ ಹೆಚ್ಚಿನ ಬಡ್ಡಿ ನೀಡಿ ಹಣ ಹೊಂದಾಣಿಕೆ ಮಾಡಿಕೊಂಡು ಕೆಲಸವನ್ನು ನಿಗದಿತ ಸಮಯದಲ್ಲಿ ಮುಕ್ತಾಯ ಮಾಡಿದರೂ ಸಹ ನಮಗೆ ನಿಗದಿತ ಸಮಯದಲ್ಲಿ ಸಂಪೂರ್ಣ ಹಣ ಪಾವತಿ ಆಗದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ.
ಈಗ ಗದಗ ಲೋಕೋಪಯೋಗಿ ವಿಭಾಗ ಕಚೇರಿಯಲ್ಲಿ ಜುಲೈ -೨೦೨೪ ರ ಅಂತ್ಯಕ್ಕೆ ನಮ್ಮ ಎಲ್ಲಾ ಗುತ್ತಿಗೆದಾರರ ಎಲ್ಲಾ ಶೀರ್ಷಿಕೆಗಳಡಿ ಸೇರಿ ಸುಮಾರು ೧೭೦ ಕೋಟಿ ಬಾಕಿ ಇದ್ದು, ಗುತ್ತಿಗದಾರರಿಗೆ ಆರ್ಥಿಕವಾಗಿ ಬಹಳ ತೊಂದರೆಯಾಗಿದೆ. ಮಾನ್ಯ ಸಚಿವರು ಪ್ರತಿ ತಿಂಗಳು ಹಣ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚಿಸುವಂತೆ ಹಾಗೂ ಕನಿಷ್ಠ ಬಾಕಿ ಬಿಲ್ಲಿನ ಮೊತ್ತದ ಶೇ. ೫೦% ರಷ್ಟು ಬಿಡುಗಡೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಗದಗ ಜಿಲ್ಲಾ ಗುತ್ತಿಗೆದಾರ ಪರವಾಗಿ ವಿನಂತಿಸಿಕೊAಡರು.
ಈ ಸಂದರ್ಭದಲ್ಲಿ ಎಸ್. ಕೆ. ಪಾಟೀಲ, ಕೆ. ಎಸ್. ಹಾದಿಮನಿ, ಎನ್. ಸಿ. ಮಾಗಡಿ, ಎಂ.ಬಿ. ಅಂಗಡಿ, ರಮೇಶ ರಂಗಣ್ಣವರ, ಸಿ. ಜಿ. ಬಿರಾದಾರ, ಶಿವಾನಂದ ಕರೆಯಣ್ಣವರ, ಎಸ್. ಕೆ. ಮುತ್ತಿನಪೆಂಡಿಮಠ, ಬಸವರಾಜ ಶಿರಗುಂಪಿ, ವಾಯ್. ಎಫ್. ಬಳ್ಳಾರಿ, ಸೇರಿದಂತೆ ಇನ್ನೂ ಹಲವಾರು ಗುತ್ತಿಗೆದಾರರು ಉಪಸ್ಥಿತರಿದ್ದರು.