ಗದಗ : ಅನಾಮಧೇಯ ಮಹಿಳೆ ದಿನಾಂಕ 20-12-2024 ರಂದು 12-10 ಗಂಟೆಗೆ ಗದಗ ಜಿಲ್ಲಾ ಆಸ್ಪತ್ರೆಯ ಕ್ರಾಸ್ ಹತ್ತಿರ ಜಿಮ್ಸ್ ಆಸ್ಪತ್ರೆಗೆ ಹೋಗುವ ರಸ್ತೆ ಹತ್ತಿರ ಅಯ್ಯಂಗಾರ ಬೇಕರಿ ಹತ್ತಿರ ಡಿವೈಡರ್ ಮೇಲೆ ಯಾವುದೋ ಕಾಯಿಲೆಯಿಂದಲೋ, ಅನಾರೋಗ್ಯದಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೋ ಮೃತಪಟ್ಟಿದ್ದಾಳೆ.
ಸುಮಾರು 70 ರಿಂದ 75 ವರ್ಷ ವಯಸ್ಸಿನ, ಅನಾಮಧೇಯ ಮಹಿಳೆ. ಮೈಮೇಲೆ ಕೆಂಪು, ನೀಲಿ. ಹಳದಿ ಮಿಶ್ರಿತ ಚೆಕ್ಷ ರೀತಿಯ ನೈಟಿ ಧರಿಸಿದ್ದು. ಎತ್ತರ ಸುಮಾರು 4.1 ಅಡಿ. ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ತೆಳ್ಳನೆಯ ಮೈಕಟ್ಟು, ಅಗಲವಾದ ಹಣೆ. ಮುಖದ ಚರ್ಮಕ್ಕೆ ಸುಕ್ಕು ಇದ್ದು. ಬಿಳಿ ಕೂದಲು ಈ ಚೆಹರೆ ಪಟ್ಟಿ ಇರುತ್ತದೆ.
ಈ ಕುರಿತು ವರದಿ ನೀಡಿದ್ದನ್ನು ಸ್ವೀಕರಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ ಈ ಬಗ್ಗೆ ಗದಗ ಗ್ರಾಮೀಣ ಠಾಣೆಯಲ್ಲಿ ಯು.ಡಿ ನಂ-65/2024 ಕಲಂ 194 ಬಿ.ಎನ.ಎಸ್.ಎಸ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತಳ ವಾರಸುದರರ, ವಿಳಾಸ,ಪತ್ತೆಯಾದಲ್ಲಿ ಗದಗ ಗ್ರಾಮೀಣ ಪೋಲಿಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.