27.4 C
New York
Saturday, May 17, 2025

Buy now

spot_img

ಗದಗ : ಬೆಟಗೇರಿ ಘಟಕದ KSRTC ಬಸ್ ಗಳ ಡೀಸೆಲ್ ಕಳ್ಳತನ !

ಗದಗ : ಬೆಟಗೇರಿ ಕೆ.ಎಸ್.‌ಆರ್.ಟಿ.ಸಿ. ಬಸ್ ಡಿಪೋದಲ್ಲಿ ಪಾರ್ಕಿಂಗ್ ಮಾಡಿದ್ದ ಬಸ್ ಗಳಲ್ಲಿನ ಡೀಸೆಲ್ ಕಳ್ಳತನವಾಗಿರುವ ಘಟನೆ ನಡೆದಿದೆ.

ಡಿ. 19 ರ ಗುರುವಾರ ರಾತ್ರಿ‌ ಈ ಕಳ್ಳತನ ನಡೆದಿದ್ದು, ಬಸ್ ಗಳನ್ನು ರಾತ್ರಿ ವೇಳೆ ಪಾರ್ಕ್‌ ಮಾಡುವಾಗ ಡೀಸೆಲ್ ಟ್ಯಾಂಕನ್ನು ತುಂಬಿಸಿ ಇಡಲಾಗಿತ್ತು.ಆದರೆ ಬೆಳಿಗ್ಗೆ ಚಾಲಕ ಬಂದು ನೋಡಿದಾಗ ಡೀಸೆಲ್ ಕಳ್ಳತನ ವಾಗಿರುವುದು ತಿಳಿದು ಬಂದಿದೆ.

ಬೆಟಗೇರಿ ಡಿಪೋದಲ್ಲಿನ ಬಸ್‌ ನಿಂದ 200 ಲೀ., 135 ಲೀ. ಹಾಗೂ 186 ಲೀ. ಡೀಸೆಲ್ ಕಳ್ಳತನವಾಗಿದ್ದೆ, ಒಟ್ಟು 3 ಬಸ್ ಗಳಲ್ಲಿ 44,806 ರೂ. ಗಳ ಒಟ್ಟು 521 ಲೀ. ಡೀಸೆಲ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. 

ಈ ಘಟಕದಲ್ಲಿ ಯಾವುದೇ‌ ಸಿಸಿ ಕ್ಯಾಮರಾಗಳು ಇಲ್ಲದಿರುವುದು ಕೆ.ಎಸ್.‌ಆರ್.ಟಿ.ಸಿ. ಘಟಕದ ಭದ್ರತಾ‌ ಲೋಪಕ್ಕೆ ಸಾಕ್ಷಿಯಾಗಿದೆ.

ಕಳ್ಳತನದ ಪ್ರಕರಣದ ಕುರಿತಂತೆ ಬೆಟಗೇರಿ ಘಟಕದ ವ್ಯವಸ್ಥಾಪಕ ರಾಜಶೇಖರ ಧನ್ಯಾಳ ಅವರು ಡಿ. 22ರಂದು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬೆಟಗೇರಿ ಪೊಲೀಸರು ಪ್ರಕರಣ‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
“ಅಮೃತ-ಸುರಭಿ ಯೋಜನೆ” ಹೈನೋದ್ಯಮದ ಅಭಿವೃದ್ಧಿಗೆ ಹೊಸ ಆಶಾಕಿರಣ ಗದಗ  : ತುರ್ತು ಪರಿಸ್ಥಿತಿ ನಿರ್ವಹಣೆಗೆ ಅಣುಕು ಪ್ರದರ್ಶನ ಸಹಕಾರಿ ಗದಗ : ಆನ್‌ಲೈನ್ ಮೂಲಕ ಐ.ಟಿ.ಐ ಪ್ರವೇಶಕ್ಕೆ ಅರ್ಜಿ ಆಹ್ವಾನ ಗದಗ : ಗಂಜೇಂದ್ರಗಡದಲ್ಲಿ  ಬೀದಿನಾಯಿಗಳ ದಾಳಿಗೆ  ಮಹಿಳೆ ಸಾವು.! ಗದಗ : ಯುದ್ಧ ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧರಾಗಲು ಜಿಲ್ಲಾಧಿಕಾರಿ ಕರೆ ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ