Wednesday, March 26, 2025
Google search engine
Homeಉದ್ಯೋಗಗದಗ : ನಾಳೆ ಗದಗ ಬಂದ್ ಗೆ ಕರೆ...!

ಗದಗ : ನಾಳೆ ಗದಗ ಬಂದ್ ಗೆ ಕರೆ…!

ಗದಗ : ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಸಂಸತ್ ಕಲಾಪದಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕ‌ರ್ ಅವರ ಕುರಿತು ಅವಹೇಳನಕಾರಿ ಮಾತುಗಳನ್ನು ಖಂಡಿಸಿ ಗದುಗಿನ ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ 24 ರಂದು ಗದಗ ಬಂದ್ ಗೆ ಕರೆ ನೀಡಲಾಗಿದೆ.

ಅಮೀತ್ ಶಾ ಅವರ ಅಂಬೇಡ್ಕರ್ ಕುರಿತ ಹೇಳಿಕೆ ಇಡೀ ದೇಶದ ದಲಿತರ ಹಾಗೂ ಪ್ರಗತಿಪರರ ಭಾವನೆಗಳಿಗೆ ಧಕ್ಕೆಯಾಗಿದೆ.ಇದನ್ನು ಖಂಡಿಸಿ ಇದೇ 24 ಮಂಗಳವಾರದಂದು ಗದಗ ಬಂದ್ ಗೆ ಕರೆ ಕೊಟ್ಟಿದ್ದು ಈ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಸ್‌ ಸಂಚಾರದಲ್ಲಿ ಬದಲಾವಣೆ : ಗದಗ ಬಂದ್ ಹಿನ್ನಲೆಯಲ್ಲಿ ಮಂಗಳವಾರ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಸಾರಿಗೆ ಬಸ್‌ಗಳ ಸಂಚಾರದಲ್ಲಿ ಬದಲಾವಣೆ ಮಾಡಿ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಸಂಚರಿಸುವ ಮುಂಡರಗಿ- ಕೊಪ್ಪಳ ಮಾರ್ಗದ ಬಸ್‌ಗಳು ಮುಖ್ಯ ಬಸ್ ನಿಲ್ದಾಣಕ್ಕೆ ಬರದೇ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನವರೆಗೆ ಸಂಚರಿಸಲಿವೆ.

ರೋಣ, ಗಜೇಂದ್ರಗಡದಿಂದ ಗದಗಕ್ಕೆ ಬರುವ ಬಸ್‌ಗಳು ಬೆಟಗೇರಿ ಬಸ್‌ ನಿಲ್ದಾಣದವರೆಗೆ ಕಾರ್ಯಾಚರಿಸಲಿವೆ.

ಹುಬ್ಬಳ್ಳಿ, ಅಣ್ಣಿಗೇರಿಯಿಂದ ಗದಗಕ್ಕೆ ಬರುವ ಬಸ್‌ಗಳು ಕೆಇಬಿ ಕ್ರಾಸ್‌ವರೆಗೆ, ಲಕ್ಷ್ಮೀಶ್ವರ, ಶಿರಹಟ್ಟಿಯಿಂದ ಗದಗಕ್ಕೆ ಬರುವ ಬಸ್‌ಗಳು ದೋಭಿ ಘಾಟ್‌ವರೆಗೆ, ಹೊಂಬಳದಿಂದ ಗದಗಕ್ಕೆ ಬರುವ ಬಸ್‌ಗಳು ಹೊಂಬಳ ನಾಕಾವರೆಗೆ ಮತ್ತು ಸವಡಿ ಮತ್ತು ಹುಯಿಲಗೋಳದಿಂದ ಗದಗಕ್ಕೆ ಬರುವ ಬಸ್‌ಗಳು ರಾಣಾ ಪ್ರತಾಪ್ ಶಾಲೆವರೆಗೆ ಸಂಚರಿಸಲಿವೆ.

ಡಿ. 24ರಂದು ಮಂಗಳವಾರ ಬೆಳಿಗ್ಗೆ 6 ರಿಂದ ಬಂದ್‌ ಆರಂಭವಾಗಲಿದ್ದು, ಗಾಂಧಿ ಸರ್ಕಲ್‌ನಲ್ಲಿ ಬೆಳಿಗ್ಗೆ 11ಕ್ಕೆ ಬಹಿರಂಗ ಸಭೆ ಇರಲಿದೆ. ಅಂಗಡಿ ಮುಂಗಟ್ಟು ಮುಚ್ಚಲು ಒತ್ತಡವಿಲ್ಲ. ಸ್ವ ಇಚ್ಛೆಯಿಂದ ಬಂದ್‌ಗೆ ಸಹಕರಿಸಲಿ.

-ಶರೀಫ ಬಿಳೆಯಲಿ, ದ.ಸಂ.ಸ. ಮುಖಂಡ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ತಾಲೂಕು ಮಟ್ಟದ ನರೇಗಾ ಕಾಯಕ ಬಂಧುಗಳ ತರಬೇತಿ  ಗದಗ ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ್ ಪದವಿ ಪ್ರಧಾನ ಸಮಾರಂಭ ೨೦೨೫ ಗದಗ : ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ ಗದಗ : ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ ಗದಗ : ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಗದಗ : ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್ ಗದಗ : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಪ್ರಕರಣ : ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ  ಗದಗ : ಅಪಘಾತ: ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌! ಗದಗ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ