ಗದಗ ಫೆಬ್ರುವರಿ 20 : 2025-26 ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯ ಕೊರ್ಲಹಳ್ಳಿ ತಾ: ಮುಂಡರಗಿ ಹಾಗೂ ಆದರ್ಶ ವಿಶ್ವ ವಿದ್ಯಾಲಯ ಇಟಗಿ ತಾ: ರೋಣ ಇಲ್ಲಿ 6 ನೇ ತರಗತಿ ದಾಖಲಾತಿಯ ಪ್ರವೇಶ ಪರೀಕ್ಷೆಗೆ ಫೆಬ್ರುವರಿ 28 ರವರಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಗದಗ ಜಿಲ್ಲೆಯಲ್ಲಿ 5 ನೇ ತರಗತಿ ವ್ಯಾಸಂಗ ಮಾಡುತ್ತಿರುವ , ಪೋಷಕರು ತಾಲೂಕಿನಲ್ಲಿ ವಾಸವಿದ್ದಲ್ಲಿ ವಾಸಸ್ಥಳ ದೃಢೀಕರಣ ಪತ್ರ ಹೊಂದಿರುವ ಅರ್ಹ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ವಿದ್ಯಾಥಿಯು ಓದುತ್ತಿರುವ ಶಾಲೆಯ ಸ್ಯಾಟ್ ಸಂಖ್ಯೆ ವಿದ್ಯಾರ್ಥಿಯ ಭಾವಚಿತ್ರ , ವಿದ್ಯಾರ್ಥಿ ಓದುತ್ತಿರುವ ಶಾಲೆಯ ಮುಖ್ಯ ಶಿಕ್ಷಕರ ಮೊಬೈಲ್ ನಂಬರ್, ವಿದ್ಯಾರ್ಥಿಯ ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಪೋಷಕರ ಸರಿಯಾದ ಮೊಬೈಲ್ ನಂಬರ್, ವಾಸ ದೃಢೀಕರಣ ಪತ್ರ, ತಹಶೀಲ್ದಾರ ಅವರಿಂದ ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ಸಕ್ಷಮ ಪ್ರಾದಿಕಾರದಿಂದ ನೀಡಿರುವ ಪ್ರಮಾಣ ಪತ್ರ ಅರ್ಜಿ ಸಲ್ಲಿಸುವ ಸಮಯದಲ್ಲಿ ದಾಖಲಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿ ಕೆಪಿ ಸಾಲಿಮಠ ಮೊ.ಸಂ. 8762487691 ಸಂಪರ್ಕಿಸಬಹುದಾಗಿದೆ.