ಗದಗ ಫೆ 11: ವಾಟ್ಸಪ್ ಮೂಲಕ ಬರುವ ಪಿ.ಎಂ ಕಿಸಾನ, ಬ್ಯಾಂಕ್ ಕೆ.ವೈ.ಸಿ ಅಪ್ ಡೆಟ್ & ವೆಡ್ಡಿಂಗ್ ಕಾರ್ಡ ಹೆಸರಿನಲ್ಲಿ ಬರುವ ಎ.ಪಿ.ಕೆ ಫೈಲ್ ಲಿಂಕ್ ಗಳನ್ನು ಡೌನಲೋಡ ಮಾಡಬೇಡಿ ಎಂದು ಸೈಬರ್ ಇನ್ಸಪೇಕ್ಟರ್ ಸಿದ್ದಾರೋಡ ಗಡಾದ ಅವರು ಹೇಳಿದರು.
ನಗರದ ಜಿಲ್ಲಾಡಳಿತದ ಭವನದ ಆಡಿಟೋರಿಯಂ ಹಾಲ್ ನಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಹಾಗು ಸಿ.ಇ.ಎನ್.ಕ್ರೆöÊಂ ಸಹಯೋಗದಲ್ಲಿ ಜರುಗಿದ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.
ಪೊಲೀಸ ಅಧಿಕಾರಿ, ಟೆಲಿಫೋನ್ ಅಧಿಕಾರಿ ಮತ್ತು ಪಾರ್ಸಲ್ / ಕೊರಿಯರ್ ಹೆಸರಿನಲ್ಲಿ ಕರೆಮಾಡಿ ಕಾನೂನು ಬಾಹಿರ ವಸ್ತುಗಳನ್ನು ಹೊರದೇಶಕ್ಕೆ ರವಾನೆ ಮಾಡಿದ್ದೀರಿ ಅದಕ್ಕಾಗಿ ನಿಮಗೆ ವಿಡಿಯೋ ಕಾಲ ಮೂಲಕ ವಿಚಾರಣೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೆದರಿಸಿ ಹಣ ಪಡೆದುಕೊಂಡು ವಂಚನೆ ಮಾಡುವವರ ಬಗ್ಗೆ ಎಚ್ಚರವಾಗಿರಿ, ಕಡಿಮೆ ಅವದಿಯಲ್ಲಿ ಟ್ರೇಡಿಂಗ್ ಮಾಡಿ ಹಣ ಡಬಲ್ ಮಾಡಿಕೋಡುವುದಾಗಿ ವಾಟ್ಸಪ್ ಹಾಗೂ ಟೆಲಿಗ್ರಾಮ್ ಮೂಲಕ ಬರುವ ಜಾಹಿರಾತುಗಳನ್ನು ನಂಬಿ ಟ್ರೇಡಿಂಗ್ ಮಾಡಲು ಹಣ ಹೂಡಿಕೆ ಮಾಡಬೇಡಿ,ಅಪರಿಚಿತರೊಂದಿಗೆ ನಿಮ್ಮ ಬ್ಯಾಂಕಿAಗ್ ಮಾಹಿತಿಗಳಾದ ಕಾರ್ಡ ನಂಬರ್, ಮುಕ್ತಾಯದ ಅವಧಿ, ಸಿವಿವಿ, ಓಟಿಪಿ ಯುಪಿಐ ಪಿನ್ ಮತ್ತು ಎಂ ಪಿನ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಎಂದು ಹೇಳಿದರು.
ಸೈಬರ್ ಪೊಲೀಸ್ ಎಂ ಎಸ್ ತಿಪ್ಪಾಪೂರ ಮಾತನಾಡಿ ಅಪರಿಚಿತ ಮೂಲದ ಎಸ್.ಎಂ.ಎಸ್, ವಾಟ್ಸಪ್ ಹಾಗೂ ಇತರ ಮೆಸೆಂಜರ್ ಗಳ ಮೂಲಕ ಸ್ವೀಕರಿಸುವ ಸಂದೇಶ, ಇ-ಮೇಲ್ ಗಳಲ್ಲಿನ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ, ಗೂಗಲ್ ನಲ್ಲಿ ಕಂಡುಬರುವ ಕಸ್ಟಮರ ಕೇರ್ ಸಂಪರ್ಕ ಸಂಖ್ಯೆ, ಇ-ಮೇಲ್ ವಿಳಾಸ ಇತ್ಯಾದಿಗಳನ್ನು ಬಳಸುವ ಮೊದಲು ನೈಜತೆ ಬಗ್ಗೆ ತಿಳಿಯಿರಿ, ಆನಲೈನ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಅನಧೀಕೃತ ಅಪ್ಲಿಕೇಶನ್ ಗಳನ್ನು ಬಳಸಬೇಡಿ. ಆನಲೈನ್ ಮೂಲಕ ಕೆಲಸ ಕೊಡಿಸುವುದಾಗಿ ಹಣದ ಬೇಡಿಕೆ ಇಟ್ಟಲ್ಲಿ ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಬೇಡಿ,ನಿಮ್ಮ ಬ್ಯಾಂಕ್ ಖಾತೆ, ಸಾಮಾಜಿಕ ಜಾಲತಾಣದ ಖಾತೆಗಳಿಗೆ ಕಠಿಣ ಪಾಸ್ ವರ್ಡಗಳನ್ನು ಬಳಸಿ, ಅಲ್ಲದೇ ಖಿತಿo ಈಚಿಛಿಣoಡಿ ಂuಣheಟಿಣiಛಿಚಿಣioಟಿ ಕೂಡ ಅಳವಡಿಸಿಕೊಳ್ಳಿ ಮಕ್ಕಳಿಗೆ ಸಂಭAಧಪಟ್ಟ ಲೈಂಗಿಕ / ಅಶ್ಲೀಲ ಚಿತ್ರ, ದೃಶ್ಯಾವಳಿಗಳನ್ನು ಆನಲೈನಲ್ಲಿ ಹುಡುಕುವುದು ಅಪರಾದ ಇಂತಹ ಅಶ್ಲೀಲ ಚಿತ್ರ ದೃಶ್ಯಾವಳಿಗಳು ಕಂಡುಬAದಲ್ಲಿ www.cybertipline.org ನೇದ್ದರ ಆನಲೈನ್ ಪೊರ್ಟಲನಲ್ಲಿ ಮಾಹಿತಿಯನ್ನು ಒದಗಿಸಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಸತೀಶ ಆನಂದ್ ಸಿಂಗ್ ದೊಡ್ಡಮನಿ,ಸೈಬರ್ ಪೊಲೀಸ್ ಠಾಣೆಯ ಸಿಬ್ಬಂಧಿ ಹಾಜರಿದ್ದರು