ಅಡವಿಸೋಮಾಪೂರ : ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಲೋಕಾರ್ಪಣೆ, ಕಳಸಾರೋಹಣ ಹಾಗೂ ಸಾಮೂಹಿಕ ವಿವಾಹಗಳ ಕಾರ್ಯಕ್ರಮವು ಫೆ.೩ ರಂದು ಜರುಗಲಿದೆ.
ಫೆ. ೩ ರಂದು ಬೆಳಿಗ್ಗೆ ೫ ಘಂ ಮಲ್ಲಿಕಾರ್ಜುನ ಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ, ನಂತರ ಗ್ರಾಮದ ಶ್ರೀ ಮೇಲಗಿರಿಯಪ್ಪಜ್ಜನ ಮಠದಿಂದ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮಲ್ಲಿಕಾರ್ಜುನಮಠಕ್ಕೆ ಕುಂಬಮೇಳವು ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಕಳಸಾರೋಹಣ ಜರುಗುವುದು.
೧೦.೩೦ ಕ್ಕೆ ಧರ್ಮಸಭೆ ತುಲಾಬಾರ ಹಾಗೂ ದಾನಿಗಳಿಗೆ ಸನ್ಮಾನ ೧೨.೩೦ ಕ್ಕೆ ಸಾಮೂಹಿಕ ವಿವಾಹಗಳು ನಡೆಯಲಿವೆ.ನಂತರ ಮುಧುಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ೨೩ ನೇ ತುಲಾಭಾರ ಕಾರ್ಯಕ್ರಮ ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಮಹಾಸ್ವಾಮಿಗಳು, ಮಣಕವಾಡದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ದಿವ್ಯಸಾನಿಧ್ಯವಹಿಸುವರು. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ವಹಿಸುವರು. ಶಿವಶರಣೆ ನೀಲಮ್ಮತಾಯಿ ಅಧ್ಯಕ್ಷತೆ ವಹಿಸುವರು. ಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ದಲಿಂಗಯ್ಯ ಗೋಲಗಿರಿಮಠ, ಕೆ ಎ ಬಳಿಗೇರ, ಸುಬಾನಂದ ಸ್ವಾಮೀಜಿ, ಗುರುಶಾಂತಯ್ಯ ಜಾನಕೋಟಿಮಠ, ಪ್ರಭುಸ್ವಾಮಿ ಹಳೇಮಠ, ಸಿದ್ದಯ್ಯಸ್ವಾಮಿ, ಎಸ್ ಆರ್ ರಡ್ಡಿ, ಎಚ್ ಎಫ್ ನದಾಫ, ಪ್ರಲ್ಹಾದ ಹೊಸಳ್ಳಿ, ಪಂಚಯ್ಯ ಶಾಸ್ತಿçಗಳು, ಕನಕಪ್ಪ ತಳವಾರ, ರುದ್ರಗೌಡ ಅಖಂಡಿ, ವೆಂಕಟೇಶ ತಳಕಲ್ಲ ಸೇರಿದಂತೆ ಮುಂತಾದವರು ಉಪಸ್ಥಿತರಿರುವರು.