Monday, February 17, 2025
Google search engine
Homeಗದಗಗದಗ : ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸಕ ಮಾಲಿಕೆ ಕಾರ್ಯಕ್ರಮ

ಗದಗ : ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸಕ ಮಾಲಿಕೆ ಕಾರ್ಯಕ್ರಮ

ಗದಗ  ಜನೆವರಿ 22 : ಉನ್ನತ ಶಿಕ್ಷಣದಲ್ಲಿ ಕರ್ನಾಟಕ ಸರ್ಕಾರದ ಮಹಾಕಾಂಕ್ಷಿ ಯೋಜನೆಯಾದ “ಪ್ರೇರಣಾ ಮೆಂಟರ್ ಶಿಪ್ “ ಕಾರ್ಯಕ್ರಮದಡಿ ಸರ್ಕಾರಿ ಪಾಲಿಟೆಕ್ನಿಕ್, ಗದಗ ಸಂಸ್ಥೆಯಲ್ಲಿ ಬುಧವಾರ ವಿಷಯ ತಜ್ಞರಿಂದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸಕ ಮಾಲಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ತಜ್ಞರಾದ ಹುಬ್ಬಳ್ಳಿಯ ಪ್ರೋಫೆಸರ್ ಜಿ. ವಿ. ಡೋಣುರಮಠ ಇವರು ಸಾಫ್ಟ್ ಸ್ಕಿಲ್ಸ್ ಹಾಗೂ ವ್ಯಕ್ತಿತ್ವ ವಿಕಸನದ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಸದರಿ ಸರ್ಕಾರದ “ಪ್ರೇರಣಾ ಮೆಂಟರ್‌ಶಿಪ್ “ ಕಾರ್ಯಕ್ರಮದಡಿ ಪಠ್ಯವಿಷಯಗಳ ಜೊತೆಗೆ ಇತರೆ ವಿವಿಧ ಉಪಯುಕ್ತ ವಿಷಯಗಳನ್ನು ಅರಿತುಕೊಳ್ಳಲು ಸದರಿ ಯೋಜನೆಯು ತುಂಬಾ ಉಪಯೋಗವಾಗಿದೆ ಎಂದು ವಿದ್ಯಾರ್ಥಿಗಳು ಮೆಚ್ಚುಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಭರಮಪ್ಪ ಬಡಪ್ಳವರ ಇವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಭಾಗಾಧಿಕಾರಿ ಶ್ರೀಮತಿ ಜೈನಾಬಿ, ಕೊಟ್ರಗೌಡ, ಶಿವಾನಂದ ಪೂಜಾರ, ಶ್ರೀಮತಿ ಮಂಗಳಗೌರಮ್ಮ ಶಿವಸಿಂಪಿಗೇರ ಹಾಗೂ ಎಲ್ಲ ಬೋಧಕ ಸಿಬ್ಬಂದಿಗಳು ಹಾಜರಿದ್ದರು. ಶ್ರೀಮತಿ ಜಯಲಕ್ಷಿö್ಮÃ ಹರ್ಲಾಪೂರ ಸ್ವಾಗತಿಸಿದರು, ಶ್ರೀಮತಿ ವಿದ್ಯಾಶ್ರೀ ಹೂಗಾರ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭ ಗದಗ : ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರ ಪ್ರವಾಸ ಕಾರ್ಯಕ್ರಮ ಗದಗ : ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ ಪ್ರವಾಸ ಗದಗ : ಬೆಟಗೇರಿಯ  ಬಡ್ಡಿ ದಂಧೆಕೋರನ  ಖಜಾನೆ ಭೇದಿಸಿದ  ಗದಗ ಪೊಲೀಸರು ! ಮೈಕ್ರೋ ಫೈನಾನ್ಸ್ ಕಿರುಕುಳ ಬ್ರೇಕ್: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಗದಗ : ತುಂಗಾಭದ್ರಾ ನದಿಯ ಅಕ್ರಮ ಮರಳು ಲೂಟಿಕೋರರಿಗೆ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟ ಜಿಲ್ಲಾಧಿಕಾರಿ.! ಗದಗ : ಸೈಬರ್ ಅಪರಾಧಗಳ ಸುರಕ್ಷಾ ಸಲಹೆಗಳನ್ನು ಪಾಲಿಸಿ ಸೈಬರ್ ವಂಚಿಕರಿಂದ ಎಚ್ಚರವಾಗಿರಿ ಗದಗ : ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಗದಗ : ಜೀತ ಪದ್ಧತಿ ಒಂದು ಅಪರಾಧ : ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಗದಗ : ಅಂತೂರ ಗ್ರಾಮ ಪಂಚಾಯಿತಿಗೆ ರಾಜ್ಯ ಮಟ್ಟದ ಅತ್ಯುತ್ತಮ ಗ್ರಾಮ ಪಂಚಾಯತ ಪುರಸ್ಕಾರ.