Monday, February 17, 2025
Google search engine
Homeಉದ್ಯೋಗGadag : ವ್ಯಕ್ತಿತ್ವ ವಿಕಸನ ನಿತ್ಯದ ಪ್ರಕ್ರಿಯೆಯಾಗಲಿ. 

Gadag : ವ್ಯಕ್ತಿತ್ವ ವಿಕಸನ ನಿತ್ಯದ ಪ್ರಕ್ರಿಯೆಯಾಗಲಿ. 

ಗದಗ : ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ಕೌಶಲ್ಯಗಳ ಮೂಲಕ ಮತ್ತೊಬ್ಬರನ್ನು ತಮ್ಮೆಡೆಗೆ ಆಕರ್ಷಿಸುವಂತಹ ವ್ಯಕ್ತಿತ್ವವನು ರೂಪಿಸಿಕೊಳ್ಳಬೇಕು, ವ್ಯಕ್ತಿತ್ವ ವಿಕಸನ ನಿತ್ಯದ ಪ್ರಕ್ರಿಯೆಯಾಗಲಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶ್ರೀ ಸಿ ಆರ್ ಮುಂಡರಗಿ ಹೇಳಿದರು.

ಗದಗ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಡಿ ಜಿ ವಿಕಸನ ಕಾರ್ಯಕ್ರಮದಡಿ ಇಂದು ಜಿಲ್ಲೆಯ ಗದಗ, ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ದಿನದ ವ್ಯಕ್ತಿತ್ವ ವಿಕಸನ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಮ್ ವಿ ಚಳಗೇರಿ ಯೋಜನಾ ನಿರ್ದೇಶಕರು ಜಿ. ಪಂ ಗದಗ, ಬಸವರಾಜ್ ಬಡಿಗೇರ್ ಜಿಲ್ಲಾ ಸಂಯೋಜಕರು ಗ್ರಾಮ ಡಿಜಿ ವಿಕಾಸನ, ಕಲ್ಮೇಶ ಯು ತರಬೇತಿದಾರರು, ಶರಣಪ್ಪ ಕಟ್ಟಿಮನಿ ಹಾಜರಿದ್ದರು. ಪ್ರಸ್ತುತ ಜಿಲ್ಲೆಯಲ್ಲಿ 95 ಗ್ರಾಮ ಪಂಚಾಯತ್ ಅರಿವು ಕೇಂದ್ರಗಳನ್ಸ್ನು ಗ್ರಾಮ ಡಿಜಿ ವಿಕಾಸನ ಕಾರ್ಯಕ್ರಮ ಶಿಕ್ಷಣ ಪೌಡೇಶನ ಅನುಷ್ಠಾನ ಮಾಡಿಲಾಗಿದ್ದು ವಿಶೇಷ. 

ವ್ಯಕ್ತಿತ್ವ ವಿಕಸನ ಎನ್ನುವುದು ನಿತ್ಯ ನಡೆಯುವಂತಹ ಪ್ರಕ್ರಿಯೆ, ಶಿಕ್ಷಣ, ಕ್ರೀಡೆ, ಚಿತ್ರಕಲೆ, ಸಂಗೀತ, ನಾಟಕ..ಹೀಗೆ ಪ್ರತಿ ಕ್ಷೇತ್ರದ ಚಟುವಟಿಕೆಯಲ್ಲೂ ನಿತ್ಯ ಭಾಗಿಯಾಗುವ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತಾ ಸಾಗಬೇಕು. ಆಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ, ಎಲ್ಲರೂ ನಿತ್ಯ ಒಂದೊಂದು ಗುಣಾತ್ಮಕ ಚಿಂತೆಯನ್ನು ಮೈಗೂಡಿಸಿಕೊಳ್ಳಬೇಕು, ಉತ್ತಮ ಆಲೋಚನೆಗಳಿಂದ ಜೀವನ ಯಾವುದೇ ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸಬಹುದು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣವೇ ಭದ್ರಬುನಾದಿಯಾಗಿದೆ ಇದು ಮನೆ ಹಾಗೂ ಸಮುದಾಯ ಹಂತದಲ್ಲಿ ಸುಭದ್ರವಾಗಿ ನಿರ್ಮಿಸಿದಾಗ ಎಲ್ಲರ ಭವಿಷ್ಯ ಉತ್ತಮವಾಗುತ್ತದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭ ಗದಗ : ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರ ಪ್ರವಾಸ ಕಾರ್ಯಕ್ರಮ ಗದಗ : ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ ಪ್ರವಾಸ ಗದಗ : ಬೆಟಗೇರಿಯ  ಬಡ್ಡಿ ದಂಧೆಕೋರನ  ಖಜಾನೆ ಭೇದಿಸಿದ  ಗದಗ ಪೊಲೀಸರು ! ಮೈಕ್ರೋ ಫೈನಾನ್ಸ್ ಕಿರುಕುಳ ಬ್ರೇಕ್: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಗದಗ : ತುಂಗಾಭದ್ರಾ ನದಿಯ ಅಕ್ರಮ ಮರಳು ಲೂಟಿಕೋರರಿಗೆ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟ ಜಿಲ್ಲಾಧಿಕಾರಿ.! ಗದಗ : ಸೈಬರ್ ಅಪರಾಧಗಳ ಸುರಕ್ಷಾ ಸಲಹೆಗಳನ್ನು ಪಾಲಿಸಿ ಸೈಬರ್ ವಂಚಿಕರಿಂದ ಎಚ್ಚರವಾಗಿರಿ ಗದಗ : ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಗದಗ : ಜೀತ ಪದ್ಧತಿ ಒಂದು ಅಪರಾಧ : ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಗದಗ : ಅಂತೂರ ಗ್ರಾಮ ಪಂಚಾಯಿತಿಗೆ ರಾಜ್ಯ ಮಟ್ಟದ ಅತ್ಯುತ್ತಮ ಗ್ರಾಮ ಪಂಚಾಯತ ಪುರಸ್ಕಾರ.