ಗದಗ ಜನೆವರಿ 20 : ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ನಾಯಿಗಳ ಮಾಲೀಕರಿಗೆ ತಿಳಿಯಪಡಿಸುವುದೇನೆಂದರೆ ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವುದಾಗಿ ಹಾಗೂ ಅದರಿಂದ ಅವಘಡಗಳು ಹಾಗೂ ಅಪಾಯಗಳು ಜರುಗುತ್ತಿದ್ದು ಈ ಕುರಿತು ನಗರಸಭೆ ಕಾರ್ಯಾಲಯಕ್ಕೆ ಸಾಕಷ್ಟು ಸಾರ್ವಜನಿಕ ದೂರುಗಳು ಸ್ವೀಕೃತವಾಗಿವೆ.
ಬೀದಿ ನಾಯಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಬೀದಿ ನಾಯಿಗಳನ್ನು ಹಿಡಿದು ಂಃಅ ಮತ್ತು ಂಖಗಿ ಸಂತಾನ ಹರಣ ಚಿಕಿತ್ಸೆ ಮತ್ತು ಆಂಟಿ ರೇಬಿಸ್ ವ್ಯಾಕ್ಸಿನೇಷನ್ ಹಾಕುವ ಕಾರ್ಯವನ್ನು ಕೈಗೊಳ್ಳಲು ನಗರಸಭೆ ಠರಾವು ದಿನಾಂಕ:-05-08-2024ರ ಪ್ರಕಾರ ತೀರ್ಮಾನಿಸಲಾಗಿದ್ದು ಅದರಂತೆ ದಿನಾಂಕ:-22-01-2025 ರಿಂದ ಗದಗ-ಬೆಟಗೇರಿ ನಗರಸಭೆ ವತಿಯಿಂದ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ಪ್ರಾರಭಿಸಲಾಗಿದೆ.
ಒಂದು ವೇಳೆ ನಾಯಿಗಳ ಮಾಲೀಕರು ತಮ್ಮ ಸಾಕಿದ ನಾಯಿಗಳನ್ನು ಬೀದಿಯಲ್ಲಿ ಬಿಟ್ಟ ಪಕ್ಷದಲ್ಲಿ ಸಾಕಿದ ನಾಯಿಗಳನ್ನು ಜನೆವರಿ 23 ರೊಳಗಾಗಿ ತಮ್ಮ ತಾಬಾಕ್ಕೆ ಕಟ್ಟಿಹಾಕಿಕೊಳ್ಳತಕ್ಕದ್ದು. ತಪ್ಪಿದ್ದಲ್ಲಿ ಮುಂದೆ ಆಗು-ಹೋಗುವ ಹಾನಿಗಳಿಗೆ ಗದಗ-ಬೆಟಗೇರಿ ನಗರಸಭೆ ಜವಬ್ದಾರಿಯಾಗಿರುವುದಿಲ್ಲ ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.