Monday, February 17, 2025
Google search engine
Homeಆರೋಗ್ಯಗದಗ : ಯಶಸ್ವಿನಿ ಯೋಜನೆಯಡಿ ಸದಸ್ಯರನ್ನು ನೊಂದಾಯಿಸಲು ಅವಕಾಶ

ಗದಗ : ಯಶಸ್ವಿನಿ ಯೋಜನೆಯಡಿ ಸದಸ್ಯರನ್ನು ನೊಂದಾಯಿಸಲು ಅವಕಾಶ

ಗದಗ ಜನೆವರಿ 21: ಸರ್ಕಾರವು 2024-25 ನೇ ಸಾಲಿಗೆ ಸಹಕಾರ ಇಲಾಖೆಯಿಂದ ಯಶಸ್ವೀನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಿ ಆದೇಶೀಸಿರುತ್ತದೆ. ಯಶಸ್ವಿನಿ ಯೋಜನೆಯಡಿಯಲ್ಲಿ ಸದಸ್ಯರನ್ನು ಹೊಸದಾಗಿ ನೊಂದಾಯಿಸಲು ಮತ್ತು ಕಳೆದ ಸಾಲಿನಲ್ಲಿ ನೊಂದಾಯಿಸಿದ ಸದಸ್ಯರನ್ನು ನವೀಕರಿಸಲು ಅವಕಾಶವಿದ್ದು ದಿನಾಂಕ: 01-12-2024 ರಿಂದ 31-01-2025 ರವರೆಗೆ ಅವಧಿ ಇರುತ್ತದೆ. ಕಾರಣ ಸಹಕಾರ ಸಂಘ/ಸೌಹಾರ್ದ ಸಹಕಾರಿಗಳು/ಸಹಕಾರ ಬ್ಯಾಂಕುಗಳು ಮತ್ತು ಗ್ರಾಮೀಣ ಸ್ವ-ಸಹಾಯ ಗುಂಪುಗಳಲ್ಲಿರುವ ಸದಸ್ಯರು ಕನಿಷ್ಠ 03 ತಿಂಗಳುಗಳ ಮುಂಚೆ ಸದಸ್ಯತ್ವವನ್ನು ಹೊಂದಿರಬೇಕು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಸದಸ್ಯರಿಗೆ ನೊಂದಾಯಿಸಲು ಉಚಿತವಾಗಿರುತ್ತದೆ.

 ಕೂಡಲೇ ಯಶಸ್ವಿನಿ ಯೋಜನೆಯಡಿಯಲ್ಲಿ ಹೊಸದಾಗಿ ನೊಂದಾಯಿಸಲು ಮತ್ತು ಕಳೆದ ಸಾಲಿನಲ್ಲಿ ಈ ಯೋಜನೆಯಡಿ ನೊಂದಾಯಿಸಿದ್ದ ಸದಸ್ಯರನ್ನು ನವೀಕರಿಸಿ ಸದರಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವದು. ಹೆಚ್ಚಿನ ಮಾಹಿತಿಗಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ-125 ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಎ.ಪಿ.ಎಂ.ಸಿ. ಯಾರ್ಡ, ಎಸ್.ಬಿ.ಆಯ್ ಮುಖ್ಯ ಶಾಖೆ ಎದುರಿಗೆ, ಗದಗ ದೂರವಾಣಿ ಸಂಖ್ಯೆ-08372-238598, ಹಾಗೂ ತಾಲೂಕಾ ಸಹಕಾರ ಅಭಿವೃದ್ದಿ ಅಧಿಕಾರಿ, ನರಗುಂದ-8660099227, ಶಿರಹಟ್ಟಿ-9739247088, ರೋಣ-9538198110, ಮುಂಡರಗಿ-8088386791, ಗದಗ-9945187724 ಇವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭ ಗದಗ : ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರ ಪ್ರವಾಸ ಕಾರ್ಯಕ್ರಮ ಗದಗ : ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ ಪ್ರವಾಸ ಗದಗ : ಬೆಟಗೇರಿಯ  ಬಡ್ಡಿ ದಂಧೆಕೋರನ  ಖಜಾನೆ ಭೇದಿಸಿದ  ಗದಗ ಪೊಲೀಸರು ! ಮೈಕ್ರೋ ಫೈನಾನ್ಸ್ ಕಿರುಕುಳ ಬ್ರೇಕ್: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಗದಗ : ತುಂಗಾಭದ್ರಾ ನದಿಯ ಅಕ್ರಮ ಮರಳು ಲೂಟಿಕೋರರಿಗೆ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟ ಜಿಲ್ಲಾಧಿಕಾರಿ.! ಗದಗ : ಸೈಬರ್ ಅಪರಾಧಗಳ ಸುರಕ್ಷಾ ಸಲಹೆಗಳನ್ನು ಪಾಲಿಸಿ ಸೈಬರ್ ವಂಚಿಕರಿಂದ ಎಚ್ಚರವಾಗಿರಿ ಗದಗ : ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಗದಗ : ಜೀತ ಪದ್ಧತಿ ಒಂದು ಅಪರಾಧ : ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಗದಗ : ಅಂತೂರ ಗ್ರಾಮ ಪಂಚಾಯಿತಿಗೆ ರಾಜ್ಯ ಮಟ್ಟದ ಅತ್ಯುತ್ತಮ ಗ್ರಾಮ ಪಂಚಾಯತ ಪುರಸ್ಕಾರ.