ಗದಗ : ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬಣಗಾರ ಕಾಲೋನಿಯಲ್ಲಿ 15 ವರ್ಷದ ಬಾಲಕಿಯು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಇಬ್ಬರೂ ಯುವಕರು 15 ವರ್ಷದ ಬಾಲಕಿಯ ಬೆನ್ನು ಹಿಂದೆ ಬಿದ್ದು ನನ್ನನ್ನು ಪ್ರೀತಿಸು ಎಂದು ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿಯನ್ನು ಖುಷಿ (15) ಎಂದು ತಿಳಿದು ಬಂದಿದೆ
9ನೇ ತರಗತಿಯಲ್ಲಿ ಓದುತ್ತಿದ್ದಳು. ಅದೇ ಊರಿನ ಯುವಕರಾದ ಮುತ್ತುರಾಜ್ ಮ್ಯಾಗೇರಿ ಹಾಗೂ ಜುನೇದಸಾಬ್ ಕಂದಗಲ್ ಅವರ ಲವ್ ಕಿರುಕುಳದಿಂದ ಖುಷಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಇಬ್ಬರು ಸೇರಿ ಈ ಖುಷಿಯನ್ನು ಲವ್ ಮಾಡ್ತಿದ್ದರು. ಈ ವಿಷಯ ಗೊತ್ತಾಗಿ ಇಬ್ಬರಿಗೂ ತಾಕೀತು ಮಾಡಲಾಗಿತ್ತು. ಆದರೂ ಇಬ್ಬರು ಆಗಾಗ ಭೇಟಿಯಾಗಿ ಮಾತನಾಡಿ ಟಾರ್ಚರ್ ನೀಡುತ್ತಿದ್ದರು. ಈ ಟಾರ್ಚರ್‌ನಿಂದ ಬೇಸತ್ತು ಬಾಲಕಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ದೂರಿದ್ದಾರೆ. ಸದ್ಯ ಇಬ್ಬರು ಯುವಕರ ವಿರುದ್ಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.