ಗದಗ ಜನೆವರಿ 15: ರಾಜ್ಯ ಸರ್ಕಾರವು ಸ್ಥಾಪಿಸಿರುವ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಅಟಲ್ ಬಿಹಾರಿ ವಾಜಪೇಯಿ / ಡಾ. ಬಿ.ಆರ್.ಅಂಬೇಡ್ಕರ್ / ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ 6 ರಿಂದ 10 ನೇ ತರಗತಿಯವರಿಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಶಾಲೆಗಳಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅಂದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರವೇಶ ಲಭ್ಯವಿದೆ. ಪೋಷಕರ ವಾರ್ಷಿಕ ಆದಾಯದ ಮಿತಿಯು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ರೂ. 2,50,000/- ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರೂ. 1,00,000/- ಇರುತ್ತದೆ. ಮೊರಾರ್ಜಿ ದೇಸಾಯಿ / ಅಟಲ್ ಬಿಹಾರಿ ವಾಜಪೇಯಿ / ಡಾ. ಬಿ.ಆರ್.ಅಂಬೇಡ್ಕರ್ / ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ ಶೇ.50% ಸೀಟುಗಳನ್ನು ಬಾಲಕಿಯರಿಗೆ, ಶೇ50% ಸೀಟುಗಳನ್ನು ಬಾಲಕರಿಗೆ ಕಾಯ್ದಿರಿಸಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಶೇ.100% ಸೀಟುಗಳು ಬಾಲಕಿಯರಿಗೆ ಲಭ್ಯವಿರುತ್ತದೆ.
ಗದಗ ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 15 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 2025-26ನೇ ಸಾಲಿನ 6ನೇ ತರಗತಿಗೆ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ 80 ವಿದ್ಯಾರ್ಥಿಗಳನ್ನು ಹಾಗೂ ಇನ್ನುಳಿದ ಎಲ್ಲಾ ವಸತಿ ಶಾಲೆಗಳಿಗೆ 50 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗುವುದು.
ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರುವ ಹಾಗೂ ಸರ್ಕಾರದಿಂದ ಅನುಮೋದಿಸಲ್ಪಟ್ಟ ಯಾವುದೇ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 09 ರಿಂದ 13 ವಯೋಮಾನದವರಾಗಿರುವ ಅರ್ಹ ಅಭ್ಯರ್ಥಿಗಳು ಈ ಪ್ರವೇಶ ಪರೀಕ್ಷೆಗೆ ಜನೆವರಿ 25 ರವರಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಫೆಬ್ರುವರಿ 15 ರ ಮಧ್ಯಾಹ್ನ 2-30 ರಿಂದ 04-30 ಘಂಟೆಯವರೆಗೆ ತಾಲ್ಲೂಕಾ ಕೇಂದ್ರಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುವುದು. ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುವ 100 ಅಂಕಗಳ ಪ್ರಶ್ನೆಪತ್ರಿಕೆಯನ್ನು ನೀಡಲಾಗುವುದು. ಉತ್ತರಗಳನ್ನು ಓ.ಎಮ್.ಆರ್. ಪದ್ದತಿಯಲ್ಲಿ ಉತ್ತರಿಸುವುದು.
2025-26ನೇ ಸಾಲಿನಲ್ಲಿ 6ನೇ ತರಗತಿಗೆ ದಾಖಲಾತಿ ಬಯಸುವ ಅಭ್ಯರ್ಥಿಗಳ ಪಾಲಕರು /ಪೋಷಕರು ಈ ಕೆಳಕಂಡ ದಾಖಲಾತಿಗಳೊಂದಿಗೆ ಹತ್ತಿರದ ಯಾವುದಾದರೊಂದು ವಸತಿ ಶಾಲೆಗಳಿಗೆ ಸಂಪರ್ಕಿಸಲು ತಿಳಿಸಿದೆ.
SATS ಸಂಖ್ಯೆ:- ಶಾಲಾ ಧೃಢಿಕರಣ ಪತ್ರ (ಎಸ್.ಎ.ಟಿ.ಎಸ್ & ಶಾಲಾ ಡೈಸ್ ಕೋಡ್ ನಮೂದಿಸಿರಬೇಕು),ಆಧಾರ ಕಾರ್ಡ, ಇತ್ತೀಚಿನ ಭಾವಚಿತ್ರ-2 ಹಾಗೂ ಚಾಲ್ತಿಯಲ್ಲಿರುವ ಪಾಲಕರ ದೂರವಾಣಿ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ., ಸ್ಥಳಿಯ ಅಭ್ಯರ್ಥಿ ಎಂದು ರುಜುವಾತು ಪಡಿಸಲು ಅಗತ್ಯವಾದ ಆಧಾರ ಕಾರ್ಡ / ರೇಷನ್ ಕಾರ್ಡ್ / ವಾಸಸ್ಥಳ ಪ್ರಮಾಣ ಪತ್ರ. ವಿಶೇಷ ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಪಡೆದ ಮೂಲ ದಾಖಲೆಗಳನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ವಸತಿ ಶಾಲೆಯ ಪ್ರಾಚಾರ್ಯರಿಗೆ ತೋರಿಸಬೇಕು ಮತ್ತು ಅವುಗಳ ಒಂದು ನಕಲು ಪ್ರತಿಯನ್ನು ಸಲ್ಲಿಸಬೇಕು.
ಪಾಲಕರು/ ಪೋಷಕರು ಗದಗ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಕ್ರೆöÊಸ್ ಸಂಘದ ವಸತಿ ಶಾಲೆಗಳ ವಿವರಗಳನ್ನು ಪಡೆದುಕೊಂಡು, ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು ಎಂಬುದನ್ನು ತೀರ್ಮಾನಿಸಿ ಆದ್ಯತಾ ಕ್ರಮದಲ್ಲಿ ನಮೂದಿಸಬೇಕು.
ಹೆಚ್ಚಿನ ವಿವರಗಳಿಗಾಗಿ ಪ್ರಾಧಿಕಾರದ ವೆಬ್‌ಸೈಟ್ https://cetonlie.karnataka.gov.in/kea/ ಹಾಗೂ ವಸತಿ ಶಾಲೆಗಳ ಪ್ರಾಂಶುಪಾಲರಿಗೆ ಸಂಪರ್ಕಿಸಬಹುದಾಗಿದೆ.