Wednesday, March 26, 2025
Google search engine
Homeಉದ್ಯೋಗಗದಗ : ರಾಜ್ಯ ಮಟ್ಟದ ಎಂ.ಟಿ.ಬಿ.ಸೈಕ್ಲಿಂಗ್ ಚಾಂಪಿಯನ್ ಶಿಫ್‌ನಲ್ಲಿ ಜಿಲ್ಲೆಯ ಸೈಕ್ಲಿಂಗ್ ಕ್ರೀಡಾಪಟುಗಳ ಸಾಧನೆ

ಗದಗ : ರಾಜ್ಯ ಮಟ್ಟದ ಎಂ.ಟಿ.ಬಿ.ಸೈಕ್ಲಿಂಗ್ ಚಾಂಪಿಯನ್ ಶಿಫ್‌ನಲ್ಲಿ ಜಿಲ್ಲೆಯ ಸೈಕ್ಲಿಂಗ್ ಕ್ರೀಡಾಪಟುಗಳ ಸಾಧನೆ

ಗದಗ ಜನೆವರಿ 1 : ದಿ : 27-12-2024 ರಿಂದ 29-12-2024 ರವರೆಗೆ ಬೆಂಗಳೂರಿನಲ್ಲಿ ನಡೆದ 19ನೇ ರಾಜ್ಯ ಮಟ್ಟದ ಎಂ.ಟಿ.ಬಿ ಸೈಕ್ಲಿಂಗ್ ಚಾಂಪಿಯನ್ಶಿಫ್ನಲ್ಲಿ U/14, Cross Country Time Trial ನಲ್ಲಿ ಗದಗ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯದ ಬಾಲಕಿಯರಾದ ಪ್ರಿಯಾಂಕಾ ಬೆಳ್ಳಿ ಪದಕ ಸೌಂದರ್ಯ ಕಂಚಿನ ಪದಕ ಹಾಗೂ ಬಾಗ್ಯಾ ಮೇಲ್ಮನಿ ಇವರು 5ನೇ ಸ್ಥಾನ ಗಳಿಸಿ ವಿಜೇತರಾಗಿರುತ್ತಾರೆ. ಹಾಗೂ ಬಾಲಕರ ವಿಭಾಗದಲ್ಲಿ ಹನುಮಂತ ಕಲಿ, ಬೆಳ್ಳಿ ಪದಕ ಶಿವಾನಂದ ಬಂಡಿ 4ನೇ ಸ್ಥಾನ ಗಳಿಸಿರುತ್ತಾರೆ.

U/16, Cross Country Time Trial ನಲ್ಲಿ ಬಾಲಕಿಯರ ವಿಭಾಗದಲ್ಲಿ ಭಾರತಿ ಭಜಂತ್ರಿ 5ನೇ ಸ್ಥಾನ ಹಾಗೂ ಪಲ್ಲವಿ ಕುರಿ 6ನೇ ಸ್ಥಾನ ಗಳಿಸಿರುತ್ತಾರೆ. U/18, Cross Country Time Trial ನಲ್ಲಿ ಪವಿತ್ರಾ ಕುರ್ತಕೋಟಿ, ಚಿನ್ನದ ಪದಕ ಗಳಿಸಿರುತ್ತಾರೆ.

ಕ್ರೀಡಾ ವಸತಿ ನಿಲಯದ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಹಾಗೂ ತರಬೇತುದಾರರಿಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋಧ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಕೆ. ಪಾಟೀಲ, ಜಿಲ್ಲಾಧಿಕಾರಿ ಗೋವಿಂದರಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್. ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಸಿದ್ದಲಿಂಗೇಶ್ವರ ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ: ಶರಣು ಐ ಗೋಗೇರಿ, ಜಿಲ್ಲಾ ಅಮೆಚ್ಯೂರ ಸೈಕ್ಲಿಂಗ್ ಅಸೋಸಿಯೇಶನ್ ಪದಾಧಿಕಾರಿಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ತಾಲೂಕು ಮಟ್ಟದ ನರೇಗಾ ಕಾಯಕ ಬಂಧುಗಳ ತರಬೇತಿ  ಗದಗ ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ್ ಪದವಿ ಪ್ರಧಾನ ಸಮಾರಂಭ ೨೦೨೫ ಗದಗ : ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ ಗದಗ : ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ ಗದಗ : ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಗದಗ : ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್ ಗದಗ : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಪ್ರಕರಣ : ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ  ಗದಗ : ಅಪಘಾತ: ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌! ಗದಗ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ