30.3 C
New York
Tuesday, July 15, 2025

Buy now

spot_img

ಗದಗ : ಅನಾಮಧೇಯ ಮಹಿಳೆ ಸಾವು : ವಾರಸುದಾರರ ಪತ್ತೆಗೆ ಮನವಿ

ಗದಗ/ ಕೊಪ್ಪಳ : ದಿನಾಂಕ:೩೦-೧೨-೨೦೨೪ ರಂದು ಮುನಿರಾಬಾದ್ ರೈಲ್ವೆ ನಿಲ್ದಾಣದಲ್ಲಿ ಒಬ್ಬ ಅಪರಿಚಿತ ಹೆಂಗಸು ವಯಾ ಸುಮಾರು ೪೦ ವರ್ಷದವಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ದಿನಾಂಕ:೩೦-೧೨-೨೦೨೪ ರಂದು ೦೬:೪೪ ಪಿ.ಎಮ್ ಗಂಟೆಗೆ ಮೃತಪಟ್ಟಿದ್ದು. ಈ ಸಂಬಂಧವಾಗಿ ಗದಗ ರೇಲ್ವೆ ಪೊಲೀಸ ಠಾಣೆ ಯುಡಿಆರ್ ನಂಬರ ೭೨/೨೦೨೪ ಕಲಂ ೧೯೪ ಬಿ.ಎನ್.ಎಸ್.ಎಸ್ ಪ್ರಕರಣದಲ್ಲಿ ದಾಖಲಾಗಿ ತನಿಖೆಯಲ್ಲಿರುತ್ತದೆ.

 ಮೃತಳ ಚಹರೆ ಪಟ್ಟಿಯ ವಿವರ:- 

ವಯಾ ಸುಮಾರ ೪೦-೪೫ ವರ್ಷ, ಸಾದಾಗಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ತಲೆಯಲ್ಲಿ ಸುಮಾರು ೦೮-೧೦ ಇಂಚು ಕಪ್ಪು ಕೂದಲು, ಎಡಗೈ ಮೇಲೆ ರೇಣು ಅಂತಾ ಅಚ್ಚೆ ಹಾಕಿಸಿರುತ್ತಾಳೆ. ನೋಡಲು ಜೋಗಮ್ಮನ ಹಾಗೆ ಕಾಣುತ್ತಾಳೆ.

  ಬಟ್ಟೆ ಬರೆಗಳ ವಿವರ :- ಮೃತಳ ಮೈಮೇಲೆ ಒಂದು ಚಾಕಲೇಟ ಕಲರಿನ ಜಂಪರ, ಒಂದು ಹಸಿರು ಕಲರಿನ ಲಂಗ, ಕಾಲಲ್ಲಿ ಕಾಲುಂಗರ ಧರಿಸಿರುತ್ತಾಳೆ.  

ಒಂದು ವೇಳೆ ಸದರಿ ಮೃತಳ ಪತ್ತೆ ಆದಲ್ಲಿ ಗದಗ ರೈಲ್ವೇ ಪೊಲೀಸ್ ಠಾಣೆಯ ದೂರವಾಣಿ ನಂ(೦೮೩೭೨-೨೭೮೭೪೪ ಅಥವಾ ಮೊ.ನಂ.(-೯೪೮೦೮೦೨೧೨೮ ಅಥವಾ ಇಮೇಲ್ gadagrly@ksp.gov.in ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ (೦೮೦- ೨೨೮೭೧೨೯೧ ನೇದ್ದಕ್ಕೆ ತಿಳಿಸಲು ಕೋರಿಕೊಂಡಿರುತ್ತಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news