ಗದಗ ೯: ಇಂದು ಹೊಳೆಆಲೂರಿನಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರೋಣ ತಾಲೂಕ ಅಧ್ಯಕ್ಷರ ಎಮ್ ಎಚ್ ನದಾಫ ಹಾಗೂ ಗದಗ ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ್ ಹಾದಿಮನಿರವರ ನೇತೃತ್ವದಲ್ಲಿ ಹೊಳೆಆಲೂರು ಗ್ರಾಮದ ರೈಲ್ವೆ ನಿಲ್ದಾಣದಲ್ಲಿ ಸತತವಾಗಿ ಎರಡು ತಿಂಗಳಿನಿAದ ಅನಾಥ ವಯೋವೃದ್ಧ ದಂಪತಿಗಳು ಹೊಳೆಆಲೂರಿನ ರೇಲ್ವೆ ನಿಲ್ದಾಣದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದು ಅದನ್ನು ಕಂಡು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಹಾಗೂ ಹೊಳೆಆಲೂರಿನ ಪೊಲೀಸ್ ಇಲಾಖೆ ಹಾಗೂ ಊರಿನ ಗ್ರಾಮಸ್ಥರು ವತಿಯಿಂದ ಅಂಗವಿಕಲ ಹಾಗೂ ನಾಗರಿಕ ಸಬಲೀಕರಣ ಅಧಿಕಾರಿಗಳಿಗೆ ವಿಷಯಗಳನ್ನು ತಿಳಿಸುವ ಮುಖಾಂತರ ಆ ಅನಾಥ ವಯೋವೃದ್ಧ ದಂಪತಿಗಳಿಗೆ ಆಶ್ರಯ ಹಾಗೂ ವಸತಿ ಊಟೋಪಚಾರ ಹಾಗೂ ಅವರಿಗೆ ಆಶ್ರಯ ನೀಡಬೇಕೆಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ರೋಣ ತಾಲೂಕ ವಿವಿದುದ್ದೋದೇಶಿ ಕಾರ್ಯಕರ್ತರಾದ ಬಸವರಾಜು ಓಲಿ ಹಾಗೂ ಹಿರಿಯ ನಾಗರಿಕರ ಯೋಜನೆ ಸಹಾಯಕಿ ವಿಜಯಲಕ್ಷ್ಮಿ ಕಟಕಟಿ ಅವರೊಂದಿಗೆ ಸಮಾಲೋಚನೆ ಮಾಡಿ ಕಳಿಸಲಾಯಿತು.
ಈ ಸಮಯದಲ್ಲಿ ಪೋಲಿಸ್ ಇಲಾಖೆಯ ಸಿಬ್ಬಂದಿಗಳಾದ ಎ.ಎಸ್.ಐ. ಬಸವರಾಜ್ ಹೊರಕೇರಿ, ಮಂಜುನಾಥ ಸುಣಗದ, ಶಿವರಾಜ್ ಮಮಟಗೇರಿ, ರೈಲ್ವೇ ಇಲಾಖೆಯ ಸಿಬ್ಬಂದಿಗಳಾದ ಯಮನೂರಪ್ಪ ಅಂಬಿಗೇರ, ಮಂಜುನಾಥ ಜಾಲಿಹಾಳ. ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಲಿಯಾಕತ್ ಅಂಗಡಿಗೇರಿ, ರಂಗಪ್ಪ, ಚಾಂದಸಾಬ ಮುಲ್ಲಾ, ನಿಂಗಪ್ಪ ಹಾದಿಮನಿ, ಕಾರ್ತಿಕ್ ಬಡಿಗೇರ, ಶಿವಪ್ಪ ಪರ್ಸನ್ನವರ, ಯಮನೂರ ನದಾಫ. ಪ್ರವೀಣ ದೊಡ್ಡಮನಿ, ಶಿವಾನಂದ್ ಬಿಲ್ಲಾರ. ಟಿಪ್ಪು ನದಾಫ, ಸಲೀಂ ಕಿತ್ತೂರ, ರಾಜೆಸಾಬ ಕೊತಬಾಳ, ಪರಶುರಾಮ ಲಮಾಣಿ, ವಿಜಯ್ ಮುಂದಿನಮನಿ, ಇನ್ನೂ ಅನೇಕ ಉಪಸ್ಥಿತರಿದ್ದರು.