ಅರ್ಜಿ ಆಹ್ವಾನ
ಗದಗ ನವೆಂಬರ್ 8: 2021-22 ಶೇ 5% ಯೋಜನೆಯ ಅಂಗವಿಕಲರ ವಿಕಲಚೇತನರ ಫಲಾನುಭವಿಗಳಿಗೆ ಎಸ್.ಎಫ್.ಸಿ ಅನುದಾನದಡಿ ವಿಶೇಷ ಚೇತನರಿಗೆ ಅಂಗವೈಕಲ್ಯ/ ಪೊಲಿಯೋ ರೋಗಕ್ಕೆ ಒಳಪಟ್ಟವರಿಗೆ ಕೃತಕ ಪಾದ ಇತರೇ ಛೇದಿತ ಅವಯವಗಳ ಜೋಡಣೆಗೆ ವಾಸ್ತವಿಕ ಮೊತ್ತದ ಸಹಾಯಧನ ನೀಡುವ ಕುರಿತು ಅರ್ಜಿ ಆಹ್ವಾನಿಸಲಾಗಿದೆ. ಅಗತ್ಯ ದಾಖಲೆಗಳು ಹಾಗೂ ನಿಗದಿತ ಅರ್ಜಿಗಳೊಂದಿಗೆ ನವೆಂಬರ್ 26 ರೊಳಗಾಗಿ ಗದಗ ಬೆಟಗೇರಿ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಕಛೇರಿ ವೇಳೆಯಲ್ಲಿ ಗದಗ ಬೆಟಗೇರಿ ನಗರಸಭೆಯ ಕಾರ್ಯಾಲಯದ ಸಂಬAದಿಸಿದ ವಿಷಯ ನಿರ್ವಾಹಕರಿಗೆ ಸಂಪರ್ಕಿಸಬಹುದಾಗಿದೆ.ಈಗಾಗಲೇ ಸೌಲಭ್ಯ ಪಡೆದಂತಹ ಫಲಾನುಭವಿಗಳು ಅರ್ಹರಿರುವುದಿಲ್ಲಾ.
ಲಗತ್ತಿಸಬೇಕಾದ ದೃಢೀಕೃತ ದಾಖಲೆಗಳು: ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತ ಚೀಟಿ/ ಗುರುತಿನ ಚೀಟಿ/ ಆಧಾರ ಕಾರ್ಡ/ ರಹವಾಸಿ ಪತ್ರ ; ಸ್ವಯಂ ಉದ್ಯೋಗದ ಯೋಜನಾ ವರದಿ, ಪಾಸ್‌ಪೋರ್ಟ ಸೈಜ್ ಫೋಟೋ, ಚಾಲ್ತಿ ಬ್ಯಾಂಕ್ ಪಾಸ್ ಬುಕ್ ಪ್ರತಿ, ಅಂಗವಿಕಲರ ಯುಡಿಐಡಿ ಕಾರ್ಡ .
ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಗದಗ ನವೆಂಬರ್ 8: 2024-25 ನೇ ಸಾಲಿನ ಶೇ 24.10 % ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಲ್ಯಾಪ್‌ಟಾಪ್ ಖರೀದಿಸಲು ಸಹಾಯಧನ ನೀಡುವುದು, ನಗರಸಭೆ ಅನುದಾನದಡಿ ವ್ಯಕ್ತಿಗತ ಕಾರ್ಯಕ್ರಮಕ್ಕೆ ಸಹಾಯಧನ, 2024-25 ನೇ ಸಾಲಿನ ಶೇ 7.25 % ಯೋಜನೆಯಡಿಯಲ್ಲಿ ಇತರೆ ಬಡಜನಾಂಗದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಲ್ಯಾಪ್‌ಟಾಪ್ ಖರೀದಿಸಲು ಸಹಾಯಧನ , ಶೇ 5 % ಯೋಜನೆಯಡಿಯಲ್ಲಿ ಅಂಗವಿಕಲರ ವಿಕಲಚೇತನರ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಸಲು ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ನವೆಂಬರ್ 26 ಕೊನೆಯ ದಿನವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಗದಗ ಬೆಟಗೇರಿ ನಗರಸಭೆ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.
ವಿಕಲಚೇತನ ಸ್ನೇಹಿ ಸ್ಕೂಟರ್ ಖರೀದಿಸಿ ಪೂರೈಸಲು ಅರ್ಜಿ ಆಹ್ವಾನ
ಗದಗ ನವೆಂಬರ್ 8: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ( ಮುನ್ಸಿಪಾಲಿಟಿ) ಯೋಜನೆ ಹಂತ-4 ಶೇ 5 % ಯೋಜನೆಯ ಅಂಗವಿಕಲರ ವಿಕಲಚೇತನರ ಫಲಾನುಭವಿಗಳಿಗೆ ಗದಗ ಜಿಲ್ಲೆಯ ಗದಗ ನಗರಸಭೆ ವ್ಯಾಪ್ತಿಗೆ ಬರುವ ಅನುದಾನದಡಿ ವಿಕಲಚೇತನರ ಕ್ಷೇಮಾಭಿವೃದ್ಧಿ ಘಟಕದಡಿಯಲ್ಲಿ ವೈಯಕ್ತಿಕ ಕಾರ್ಯಕ್ರಮಗಳ ಅನುಷ್ಟಾನ ಸಂಬAಧಿಸಿದAತೆ ವಿಕಲಚೇತನ ಸ್ನೇಹಿ ಸ್ಕೂಟರ್ ಖರೀದಿಸಿ ಪೂರೈಸಲು ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿಗಳನ್ನು ನವೆಂಬರ್ 26 ರೊಳಗೆ ಗದಗ ಬೆಟಗೇರಿ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ.
20 ರಿಂದ 60 ವರ್ಷದೊಳಗಿನವರು ಮಾತ್ರ ಅರ್ಜಿ ಸಲ್ಲಿಸಬೇಕು. ಅಂಗವಿಕಲತೆಯ ಕುರಿತು ಗುರುತಿನ ಚೀಟಿ/ ಯು.ಡಿ.ಐ.ಡಿ. ಕಾರ್ಡ ( ದೈಹಿಕ 75 % ಕ್ಕಿಂತ ಹೆಚ್ಚು ಕಾಲು ಅಂಗವೈಕಲ್ಯತೆ ) ಹೊಂದಿದ ಅರ್ಜಿ ಮಾತ್ರ ಅರ್ಹರಾಗಿರುತ್ತಾರೆ. ಅರ್ಜಿಯೊಂದಿಗೆ ಅಂಗವಿಕಲತೆಯ ತೋರುವ 4 ಫೋಟೋಗಳನ್ನು ಲಗತ್ತಿಸಬೇಕು. ಸ್ಥಳೀಯ ಸಂಸ್ಥೆಗಳಿAದ ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳವರಿಂದ ಈ ಮೊದಲು ಯಂತ್ರ ಚಾಲಿತ ವಾಹನ ಪಡೆದಿಲ್ಲವೆಂದು ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ಗದಗ ಬೆಟಗೇರಿ ನಗರಸಭೆ ಕಾರ್ಯಾಲಯದ ಸಂಬAಧಿತ ವಿಷಯ ನಿರ್ವಾಹಕರನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.