ಗದಗ : ಗದಗ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಐಡಿ ಕ್ರಿಯೆಟ್ ಮಾಡಿ ವಂಚನೆ ಮಾಡಲು ಪ್ರಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸೈಬರ್ ವಂಚಕರು ಗದಗ ಎಸ್ಪಿ ಹೆಸರಿನಲ್ಲಿ ಫೇಕ್ ಫೇಸ್‌ಬುಕ್ ಐಡಿ ಕ್ರಿಯೆಟ್ ಮಾಡಿ ಮೆಸೆಂಜ್‌ರ ಖಾತೆ ಹಾಗೂ ವಾಟ್ಸಾಪ್ ಖಾತೆ ತೆರೆದು ಅವುಗಳಲ್ಲಿ ಗದಗ ಜಿಲ್ಲೆಯ ಎಸ್‌ಪಿ ರವರ ಫೊಟೋವನ್ನು ಡಿಪಿ ಹಾಗೂ ಪ್ರೋಫೈಲ್ ಪೋಟೊ ಆಗಿ ಇಟ್ಟುಕೊಂಡು ಆ ಮೂಲಕ ಬೇರೆ ಬೇರೆ ಕಾರಣಗಳನ್ನು ಹೇಳಿ ಸಾರ್ವಜನಿಕರಿಗೆ ವಂಚನೆ ಮಾಡುವ ಪ್ರಯತ್ನದಲ್ಲಿದ್ದು,
ಈ ಕುರಿತು ಗದಗ ಸಿಇಎನ್ ಪೊಲೀಸ್ ಠಾಣೆಯಲ್ಲಿ 71/2024 ಕಲಂ 66(ಡಿ)ಐ.ಟಿ ಆಯಕ್ಟ -2008 ಮತ್ತು 319(2) ಬಿಎನ್‌ಎಸ್ ನೇ ಪ್ರಕರಣದಲಿ ಫೇಕ್ ಫೇಸ್‌ಬುಕ್ ಐಡಿ ಮುಖಾಂತರ ವಂಚನೆ ಮಾಡಲು ಪ್ರಯತ್ನಿಸುತ್ತಿರುವ ಕುರಿತು ಪ್ರಕರಣ ದಾಖಲಾಗಿದೆ.
ಕಾರಣ ಯಾವುದೇ ಸಾರ್ವಜನಿಕರು ಮೋಸ ಹಾಗೂ ವಂಚನೆಗೆ ಒಳಗಾಗಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.