ಗದಗ: ಜಿಲ್ಲೆಯಲ್ಲಿ ಮೂವರು ಮಕ್ಕಳ ಜೊತೆಗೆ ತುಂಗಾ ಭದ್ರಾ ನದಿಗೆ ಹಾರಿದ ವ್ಯಕ್ತಿ, ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತುಂಗಾ ಭದ್ರಾ ನದಿಯಲ್ಲಿ ಓರ್ವ ಮಗುವಿನ ಶವ ಪತ್ತೆಯಾಗಿದೆ.
ಮಂಗಳವಾರ ಸಂಜೆ ಮಕ್ಕಳಾದ 4 ವರ್ಷದ ಪವನ್, 6 ವರ್ಷದ ಧನ್ಯಾ ಹಾಗೂ ಅಳಿಯನ ಮಗನಾದ 3 ವರ್ಷದ ವೇದಾಂತ ಜೊತೆಗೆ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದ ಅದರಲ್ಲಿ 3 ವರ್ಷದ ವೇದಾಂತ ಡಂಬಳ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆಯಿಂದ ಅಗ್ನಿ ಶಾಮಕ ದಳ ಹಾಗೂ ಸ್ಥಳೀಯ ಮೀನುಗಾರರು ಶೋಧ ಕಾರ್ಯ ನಡೆಯಿತು. ಸಂಜೆ ಹೊತ್ತಿಗೆ ವೇದಾಂತ ಡಂಬಳ ಎಂಬ ಮೂರು ವರ್ಷದ ಮಗುವಿನ ಶವ ದೇಹ ಪತ್ತೆಯಾಗಿದೆ. ಇನ್ನೂ ಇಬ್ಬರು ಮಕ್ಕಳು ಹಾಗೂ ಮಂಜುನಾಥ ಗಾಗಿ ಶೋಧ ಕಾರ್ಯ ಮುಂದುವರೆದಿದೆ.