ಗದಗ : ನವೆಂಬರ್ 6: ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ತುಂಗಭದ್ರಾ ನದಿ ಸೇತುವೆಯ ಮೇಲಿಂದ ಅದೇ ತಾಲೂಕಿನ ಮಕ್ತುಂಪುರ ಗ್ರಾಮದ ವ್ಯಕ್ತಿ ಮಂಜುನಾಥ ಅರಕೇರಿ ತನ್ನ 2 ಮಕ್ಕಳು ಹಾಗೂ ಅಳಿಯನ ಮಗನನ್ನು ನದಿಗೆ ಎಸೆದು ತಾನು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಉಪವಿಭಾಗಾಧಿಕಾರಿ ಗಂಗಪ್ಪ, ಮುಂಡರಗಿ ತಹಶೀಲ್ದಾರ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಯಾಚರಣೆಯನ್ನು ಚುರುಕುಗೊಳಿಸಿ ಆದಷ್ಟು ಬೇಗ ಶವ ಹೊರತೆಗೆಯಲು ತಿಳಿಸಿದರು.