ಗದಗ : ಗದಗ ತಾಲೂಕಿನ ಜಂದಿ ಪೀರ ದರ್ಗಾ ಹತ್ತಿರ ಇರುವ ಕೊಠಡಿಯಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ಶನಿವಾರ ನಡೆದಿದೆ.
ನೇಣಿಗೆ ಶರಣಾದ ವ್ಯಕ್ತಿ ನಜೀರಬಾಷಾ ತಂದೆ ಹುಸೇನಸಾಬ ಗೋರಲೀಕೊಪ್ಪ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಾ : ಹಿರೇವಡಟ್ಟಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ವಯಸ್ಸು : 39 ವರ್ಷ ಎಂದು ಅಂದಾಜಿಸಲಾಗಿದೆ.
ಸಾಲ ಮಾಡಿ , ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ದಿ : 26-10/2024 ರಂದು ಶನಿವಾರ ಗದಗ ತಾಲೂಕಿನ ಜಂದಿ ಪೀರ ದರ್ಗಾ ಹತ್ತಿರ ಇರುವ ಉಗ್ರಾಣ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಪಿ,ಎಸ್,ಐ ಕೀರಣಕುಮಾರ, ಸಿಬ್ಬಂದಿಗಳಾದ, ಆರ್,ಎಮ್, ಉಪ್ಪಾರ್,ಎಮ್,ಐ,ಪಾಟೀಲ ಬೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.