ಗದಗ ಅಕ್ಟೋಬರ್ 22: ಗದಗ ಜಿಲ್ಲೆಯಲ್ಲಿ ಬಹುತೇಕ ಕಡೆ ಧಾರಾಕಾರ ಮಳೆಯಾಗಿದ್ದು, ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ರೈತರು ಬಿತ್ತನೆಗೆ ಅವಸರ ಮಾಡದೇ, ಬಿತ್ತಿದ ಮತ್ತು ಇನ್ನೂ ಬಿತ್ತಬೇಕಾದ ಹೊಲಗಳಲ್ಲಿ ನಿಂತಿರುವ ನೀರನ್ನು ಹೊರ ಹಾಕಬೇಕು. ಮಣ್ಣಿನಲ್ಲಿ ಅತಿಯಾದ ತೇವಾಂಶವಿದ್ದಲ್ಲಿ ಬಿತ್ತುವುದನ್ನು ಮುಂದೂಡಬೇಕು. ಬಿತ್ತುವ ಎಲ್ಲಾ ಬೀಜಗಳನ್ನು ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತಬೇಕು.
ಹತ್ತಿ, ಮೆಣಸಿನಗಿಡ, ಕಡಲೆ ಬೆಳೆಗಳಲ್ಲಿ ಹೆಚ್ಚಿನ ತೇವಾಂಶದಿAದ ಬುಡ ಕೊಳೆ ಬಾಧೆ ತಡೆಯಲು 3ಗ್ರಾಂ/ಲೀ ಕರ‍್ಬೆಂಡೈಜಿಮ್ ಬೆರೆಸಿದ ದ್ರಾವಣವನ್ನು ಬಾಧಿತ ಮತ್ತು ಸುತ್ತಲಿನ ಬೆಳೆಯ ಬುಡಕ್ಕೆ ಸುರಿಯಬೇಕು. ಕುಸುಬೆ ಬಿತ್ತುವ ಮುನ್ನ ಪ್ರತಿ ಕೆ.ಜಿ.ಬೀಜಕ್ಕೆ ಶೇ.2ರ ಕ್ಯಾಲ್ಸಿಯಂ ಕ್ಲೋರೈಡ್‌ನ್ನು ಬೆರೆಸಿ ತಯಾರಿಸಿದ ದ್ರಾವಣದಲ್ಲಿ 8 ತಾಸುಗಳವರೆಗೆ ನೆನೆಸಿ, ನೆರಳಿನಲ್ಲಿ ಒಣಗಿಸಿ, ಬಿತ್ತನೆ ಮಾಡಬೇಕು.
ಹತ್ತಿ ಬೆಳೆಯಲ್ಲಿ ಪೋಷಕಾಂಶ (ಪ್ರತಿ ಲೀ.ನೀರಿನಲ್ಲಿ 6 ಗ್ರಾಂ. 0:52:34 ಮತ್ತು 4 ಗ್ರಾಂ. 19:19:19 ಎನ್.ಪಿ.ಕೆ.) ಮತ್ತು ಶಿಲೀಂಧ್ರನಾಶಕ(ಟಿಲ್ಟ್@ 1 ಮಿ.ಲೀ/ಲೀ) ಸಿಂಪರಣೆ ಮಾಡಬೇಕು. ಎಲೆ ಕೆಂಪಾಗುವುದನ್ನು ನಿಯಂತ್ರಿಸಲು ಪ್ರತಿ ಲೀಟರ ನೀರಿಗೆ 10 ಗ್ರಾಂ. ಮ್ಯಾಗ್ನೀಶಿಯಂ ಸಲ್ಫೇಟ್ ಬೆರೆಸಿ ಸಿಂಪಡಿಸಬೇಕು. ಗುಲಾಬಿ ಕಾಯಿಕೊರಕ ಬಾಧೆ ನಿಯಂತ್ರಿಸಲು ಕೊರಾಜೆನ್(0.4ಮಿ.ಲೀ./ಲೀ) ಅಥವಾ ಡೆಲಿಗೇಟ್(0.8-0.9ಮಿ.ಲೀ./ಲೀ) ಬಳಸಬಹುದು. ಹತ್ತಿಯಲ್ಲಿ ರಸ ಹೀರುವ ಕೀಟಗಳ ನಿಯಂತ್ರಣಕ್ಕಾಗಿ 0.3 ಗ್ರಾಂ, ಫ್ಲೋನೊಕಾಮಿಡ್ 50% Wಉ ಅಥವಾ 0.3ಗ್ರಾಂ. ಡೈನೋಟ್ಪೂö್ಯರಾನ್ 20% Sಉ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬಿಳಿನೊಣಗಳ ನಿರ್ವಹಣೆಗೆ 2.0 ಮಿ.ಲೀ ಡೈಫೆಂತಿಯುರಾನ್ 30% + ಪೈರಿಪ್ರಾಕ್ಷಿಫೆನ್ 8% ಎಸ್.ಇ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ತೊಗರಿಯಲ್ಲಿ ಕಾಯಿ ಕೊರಕದ ನಿರ್ವಹಣೆಗಾಗಿ ಪ್ರತಿ ಗಿಡದಲ್ಲಿ ಒಂದಕ್ಕಿAತ ಹೆಚ್ಚು ತತ್ತಿಗಳು ಕಂಡು ಬಂದಲ್ಲಿ, ಪ್ರತಿ ಲೀಟರ ನೀರಿನಲ್ಲಿ ತತ್ತಿ ನಾಶಕಗಳಾದ ಪ್ರೊಪೆನೊಫಾಸ್ 50 ಇ.ಸಿ.@2ಮಿ.ಲೀ./ಲೀ ಬೆರೆಸಿ ಸಿಂಪಡಿಸಬೇಕು.
ಹಿAಗಾರಿ ಜೋಳದಲ್ಲಿ ಹೆಚ್ಚಿನÀ ತೇವಾಂಶದಿAದ ಸುಳಿ ತಿಗಣೆ ಬಾಧೆ ಕಂಡು ಬಂದಲ್ಲಿ, ನೀರಿನಲ್ಲಿ ಕರಗುವ 19:19:19(ಎನ್.ಪಿ.ಕೆ.)@5ಗ್ರಾಂ, ಲಘು ಪೋಷÀಕಾಂಶ ಮತ್ತು ಇಮಾಮೆಕ್ಟಿನ್ ಬೆಂಜೋಯೇಟ್@0.5ಗ್ರಾA. ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯೊಳಗೆ ಮತ್ತು ಸಮಗ್ರವಾಗಿ ಚೆನ್ನಾಗಿ ಸಿಂಪರಣೆ ಮಾಡಬೇಕು.
ಬೆಳೆಗಳ ನಿಯಮಿತ ಪರಿವೀಕ್ಷಣೆ ಕೈಗೊಂಡು, ಕಾಲಕಾಲಕ್ಕೆ ಬೇಕಾಗುವ ಸಸ್ಯ ಸಂರಕ್ಷಣಾ ಕ್ರಮಗಳನ್ನು ಹಾಗೂ ಬೆಳೆಗಳಿಗೆ ಬೇಕಾದ ಪೋಷಕಾಂಶ ನಿರ್ವಹಣೆಯನ್ನು ಕೈಗೊಳ್ಳಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.