Wednesday, November 6, 2024
Google search engine
Homeಗದಗಗದಗ : ಹುಟ್ಟು ಹಬ್ಬದ ದಿನದಂದೇ ಶವವಾಗಿ ಪತ್ತೆಯಾದ ಬಾಲಕ

ಗದಗ : ಹುಟ್ಟು ಹಬ್ಬದ ದಿನದಂದೇ ಶವವಾಗಿ ಪತ್ತೆಯಾದ ಬಾಲಕ

ಗದಗ : ಗದಗದ ಕೊನೇರಿ ಹೊಂಡದಲ್ಲಿ ರವಿವಾರ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಬಾಲಕ ಪ್ರಥಮ್ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸೋಮವಾರ ಹೊರ ತೆಗೆದಿದ್ದಾರೆ.

ಭಾನುವಾರ ಮಧ್ಯಾಹ್ನ ಹೊಂಡದ ಮೆಟ್ಟಿಲುಗಳ ಮೇಲೆ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ವೇಳೆ ಪ್ರಥಮ್ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಆತನೊಂದಿಗೆ ಇದ್ದ ಇಬ್ಬರು ಬಾಲಕರು ಕಿರುಚಾಡಿ ಸ್ಥಳಿಯರಿಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ಯುವಕರ ತಂಡ ಹೊಂಡಕ್ಕೆ ಜಿಗಿದು ಬಾಲಕನ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಕೂಡ ಹುಡುಕಾಟ ನಡೆಸಿದ್ದಾರೆ,

ಆದರೆ ಹೊಂಡದಲ್ಲಿ ಕೆಸರು ತುಂಬಿದ್ದರಿಂದ ಬಾಲಕ ಪತ್ತೆಯಾಗಿರಲಿಲ್ಲ. ಸೋಮವಾರ ಸತತ ಕಾರ್ಯಾಚರಣೆ ನಡೆಸಿ ಮೃತದೇಹ ಹೊರ ತೆಗೆಯಲಾಗಿದೆ. ಸೆ. 30ರಂದು ಬಾಲಕ ಪ್ರಥಮ್ ಜನ್ಮದಿನ ಆಚರಿಸಲು ಅಜ್ಜಿ ಎರಡು ದಿನಗಳಿಂದ ತಯಾರಿ ನಡೆಸಿದ್ದರು. ಆದರೆ, ಜನ್ಮದಿನದಂದೇ ಪ್ರಥಮ್ ಶವವಾಗಿ ಪತ್ತೆಯಾಗಿದ್ದಾನೆ. ತಂದೆ, ತಾಯಿ ಕಳೆದುಕೊಂಡಿದ್ದ ಪ್ರಥಮ್ ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ. ಅಕಾಲಿಕವಾಗಿ ಮೊಮ್ಮಗನ ಸಾವಿನಿಂದ ಅಜ್ಜಿ ಆಕ್ರಂದನ ಮುಗಿಲು ಮುಟ್ಟಿದ್ದು, ಜನ ಕೂಡ ಕಂಬನಿ ಮಿಡಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಮೂವರು ಮಕ್ಕಳೊಂದಿಗೆ ತುಂಗಾಭದ್ರಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ! ಪ್ರಕರಣ : ಒಂದು ಮಗುವಿನ ಶವ ಪತ್ತೆ ! ಗದಗ : ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ : ಕಾರ್ಯಾಚರಣೆ ಚುರುಕುಗೊಳಿಸಲು ಸೂಚನೆ ಗದಗ : ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ವಿತರಣೆ ಗದಗ : ಬೈಕ್‌ ಸ್ಕಿಡ್ : ಬೈಕ್‌ ಸವಾರ ಸ್ಥಳದಲ್ಲೇ ಸಾವು ! ಗದಗ :  ಭೀಕರ ರಸ್ತೆ ಅಪಘಾತ : ಲಾರಿ-ಕಾರಿನ ನಡುವೆ ಅಪಘಾತ ದಂಪತಿ ಸ್ಥಳದಲ್ಲೇ ಸಾವು ! ಗದಗ : ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ತಂದೆ ಆತ್ಮಹತ್ಯೆ ! ಗದಗ : ಗ್ರಾ.ಪಂ.ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ /ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ : ವೇಳಾ ಪ... ತಾಲೂಕು ಕೃಷಿಕ ಸಮಾಜದ ಚುನಾವಣೆ ಪ್ರಕ್ರಿಯೆ ಗದಗ : ಗಜೇಂದ್ರಗಡ ತಹಶೀಲ್ದಾರಗೆ ನಿಂದನೆ, ಕರ್ತವ್ಯಕ್ಕೆ ಅಡ್ಡಿ : ಜಿಲ್ಲಾಧಿಕಾರಿಗಳಿಗೆ ಮನವಿ ಗದಗ : ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ