ಗದಗ : ಕರ್ನಾಟಕ ರಾಜ್ಯ ವಿಭಾಗಕ್ಕೆ ಗದಗ ನಗರದ ಸಾಮಾಜಿಕ ಕಾರ್ಯಕರ್ತ ಹಾಗೂ ಚಿತ್ರ ನಿರ್ದೇಶಕ ರಾ ದೇ ಕಾರಭಾರಿ ಇವರನ್ನು ಕರ್ನಾಟಕ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ದಿಲೀಪ್ ಕುಮಾರ್ H R ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಸನ್ಮಾನ್ಯ ಶ್ರೀ ಸೊಲೊಮನ್ ಕುರೇನ್ ಇವರು ಇಂದು ಬೆಂಗಳೂರು ನಾಗರಭಾವಿಯ Indian Film Makers Association (IFMA) ನಲ್ಲಿ ನಡೆದ ಬೋರ್ಡ್ ಮೀಟಿಂಗ್ ನಲ್ಲಿ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ.
Indian Film Makers Association (IFMA) ಚಲನಚಿತ್ರ ರಂಗದಲ್ಲಿ ವಿಶೇಷ ಚಾಪನ್ನೂ ಮೂಡಿಸಿಕೊಂಡ ಸಂಸ್ಥೆ ಈಗಾಗಲೇ ಕರ್ನಾಟಕ ರಾಜ್ಯ ಸೇರಿದಂತೆ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ನವದೆಹಲಿ, ಓಡಿಸಾ, ತಮಿಳುನಾಡು, ತೆಲಂಗಾಣ, ರಾಜಸ್ಥಾನ, ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಅಸ್ತಿತ್ವ ಹೊಂದಿದ್ದು. ರಾಷ್ಟ್ರೀಯ ಚಲನಚಿತ್ರ ಮಂಡಳಿಯ ಸ್ಥಾನಕ್ಕೆ ತಲುಪಿದ್ದು.
ಚಲನಚಿತ್ರ ರಂಗದಲ್ಲಿ ಬೆಳಕಿಗೆ ಬಾರದ ಪ್ರತಿಭೆಗಳು ಸಾಕಷ್ಟು ಸಂಖ್ಯೆಯಲ್ಲಿ ಎಲೆಮರೆಯ ಕಾಯಿಯಂತಿರುವ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಜೊತೆಗೆ ಚಿತ್ರ ಅವಕಾಶ ವಂಚಿತರನ್ನು ಒಗ್ಗೂಡಿಸಿ ಅವರ ಬೆನ್ನೆಲುಬಾಗಿ ನಿಲ್ಲುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದ್ದು ಇಡಿ ಚಲನಚಿತ್ರ ಇತಿಹಾಸದಲ್ಲಿಯೇ ದುಬಾರಿ ಬೆಲೆಗೆ ಕಡಿವಾಣ ಹಾಕಿ ಬಡ ಕಲಾವಿದರಿಗೆ ಹಾಗೂ ಚಿತ್ರರಂಗದ ಕನಸುಗಾರರಿಗೆ ಆಸರೆ ಆಗಿರುವ ಸಂಸ್ಥೆಯ ನಿಯಮಗಳ ಅಡಿಯಲ್ಲಿ ಕರ್ನಾಟಕ ರಾಜ್ಯದ ಚಿತ್ರ ಪ್ರೇಮಿಗಳ ಏಳ್ಗೆಗಾಗಿ ಮಾನ್ಯ ಹಿರಿಯರಾದ Indian Film Makers Association (IFMA) ಅಡಿಯಲ್ಲಿ ಪ್ರಾಮಾಣಿಕವಾಗಿ ನನ್ನ ಸೇವೆ ಸಲ್ಲಿಸುತ್ತೇನೆ ಎಂದು ಅಧಿಕಾರ ವಹಿಸಿಕೊಂಡ ರಾ ದೇ ಕಾರಭಾರಿ ಪತ್ರಿಕಾ ಪ್ರಕಟಣೆಯ ಮೂಲಕ ಮಾನ್ಯ IFMA ಗುರು ಹಿರಿಯರಿಗೆ ನಮಸ್ಕರಿಸುತ್ತಾರೆ ಚಿಕ್ಕವನಿಗೆ ದೊಡ್ಡ ಜವಾಬ್ದಾರಿಯನ್ನು ನೀಡಿದ್ದೀರಿ ತಾವು ನೀಡಿದ ಜವಾಬ್ದಾರಿಯನ್ನು ಶಿರಸಾವಹಿಸಿ ಪಾಲಿಸುತ್ತೇನೆ ಎಂದು ಪ್ರಮಾಣ ಮಾಡುತ್ತಾ. ರಾಜ್ಯಾದ್ಯಂತ ಚಲನಚಿತ್ರ ದಿಗ್ಗಜರು ಈ ಉತ್ಸಾಹ ತುಂಬಿದ ಚಿತ್ರ ಪ್ರೇಮಿಗೆ ಆಶೀರ್ವಾದವನ್ನು ನೀಡಬೇಕೆಂದು ಈ ಮೂಲಕ ಕಾಲಕಲಿಯಾಗಿ ಪ್ರಾರ್ಥಿಸುತ್ತೇನೆ.
ರಾಜ್ಯದ ತುಂಬಾ ತುಂಬಿಕೊಂಡಿರುವ ಉತ್ಸಾಹಿ ಪ್ರತಿಭೆಗಳು, ಚಿತ್ರದ ಕನಸು ತುಂಬಿಕೊಂಡ ಕನಸುಗಾರರು, ಮರಿಚಿಕೆಯಾಗಿರುವ ಪ್ರತಿಭಾವಂತರು, ಅವಕಾಶ ವಂಚಿತರು ನಮ್ಮ ಜೊತೆ ಸೇರಲು ಈ ಮೂಲಕ Indian Film Makers Association (IFMA) ಪರವಾಗಿ ಪ್ರಕಟಣೆ.
ರಾ ದೇ ಕಾರಭಾರಿ
ಕರ್ನಾಟಕ ರಾಜ್ಯ ಜಂಟಿ ಕಾರ್ಯದರ್ಶಿ