ಗದಗ ಸಪ್ಟೆಂಬರ್ 23: ಅಂಚೆ ಸೇವೆಗೆ ಸಂಬಂಧಿಸಿದಂತೆ ಸಪ್ಟೆಂಬರ್ 30 ರಂದು ಬೆಳಗ್ಗೆ 11.00 ಘಂಟೆಗೆ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ವಿಭಾಗೀಯ ಮಟ್ಟದ ಅಂಚೆ ಅದಾಲತ್ ನಡೆಯಲಿದೆ.
ಅಂಚೆ ಸೇವೆಗೆ ಸಂಬಂಧಪಟ್ಟ ದೂರು, ಸಲಹೆ, ಸೂಚನೆಗಳಿದ್ದರೆ ಸಪ್ಟೆಂಬರ್ 28ರ ಒಳಗಾಗಿ ನಗರದ ಎಪಿಎಂಸಿ ಯಾರ್ಡ್ನಲ್ಲಿರುವ ಅಂಚೆ ಅಧೀಕ್ಷಕರ ಕಛೇರಿಯ ವಿಳಾಸಕ್ಕೆ ಲಕೋಟೆಯಲ್ಲಿ (ಅಂಚೆ ಚೀಟಿಯನ್ನು ಲಗತ್ತಿಸದೆ) ದೂರು, ಸಲಹೆ, ಸೂಚನೆಗಳನ್ನು ಸಲ್ಲಿಸಬಹುದು, ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08372-277823 ಗೆ ಸಂಪರ್ಕಿಸಬಹುದು. ಎಂದು ಗದಗ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.