ಗದಗ : ಸಪ್ಟೆಂಬರ್ 23: ಗದಗ ನಗರದಲ್ಲಿ ರವಿವಾರ ಸುರಿದ ಮಳೆಯಿಂದಾಗಿ ವಾರ್ಡ್ ನಂಬರ್ ನಾಲ್ಕರಲ್ಲಿ ವಾಸಿಸುತ್ತಿರುವ ಮನೆಗಳಿಗೆ ನೀರು ನುಗ್ಗಿ ತೊಂದರೆಯಾದ ಸ್ಥಳಕ್ಕೆ ನಗರ ಸಭೆ ಪೌರಾಯುಕ್ತ ಮಹೇಶ ಪೋತದಾರ ಅವರು ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು,
ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ನಗರ ಸಭೆಯ ಜೆಸಿಬಿ ಮೂಲಕ ಕಾರ್ಯನಿರ್ವಹಿಸಿ ಕ್ರಮ ಕೈಗೊಂಡರು.
ಮಳೆ ಬಂದಾಗ ತೊಂದರೆಯಾಗುವ ಮನೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಕ್ಕಿ ಸಹಾಯಕ ಆಯುಕ್ತ ಗಂಗಪ್ಪ, ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಂಡಿ ವಡ್ಡರ್, ಲೋಕೋಪಯೋಗಿ ಇಲಾಖೆಯ ಪಾಟೀಲ್ ,ಪರಿಸರ ಅಭಿಯಂತರದ ಆನಂದ ಬದಿ, ಆರೋಗ್ಯ ನಿರೀಕ್ಷಕ ಮಕಾನದಾರ್, ಖಔ ನದಾಫ್, , ಸಪಾಯಿ ಕರ್ಮಚಾರಿ ನಾಮನಿರ್ದೇಶಕ ಸದಸ್ಯರಾದ ರಮೇಶ್ ಕೋಳೂರು, ನಗರಸಭೆ,ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.