Thursday, September 19, 2024
Google search engine
Homeಉದ್ಯೋಗಗದಗ : ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ

ಗದಗ : ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ

ವಕ್ಫ ಬಿಲ್ -೨೦೨೪ ವಿರುದ್ಧ ಆಕ್ಷೇಪಣೆ ಸಲ್ಲಿಸಿ, ಜಂಟಿ ಪಾರ್ಲಿಮೆಂಟ್ ಸಮಿತಿಗೆ ಹಕ್ಕೋತ್ತಾಯ ಮಂಡಿಸಿದ – ಎಸ್.ಡಿ.ಪಿ.ಐ ಗದಗ ವಿಧಾನಸಭಾ ಕ್ಷೇತ್ರ ಸಮಿತಿ 

ಗದಗ ೧೩: ಎಸ್.ಡಿ.ಪಿ.ಐ. ಗದಗ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ದಿನಾಂಕ ೧೩/೦೯/೨೦೨೪ ರಂದು ಶುಕ್ರವಾರ ಮಧ್ಯಾಹ್ನ ೩-೩೦ ಗಂಟೆಗೆ ಗದಗ ನಗರದ ಗಾಂಧಿ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾಜದ ಹಿರಿಯರು, ಯುವಕರು, ಧಾರ್ಮಿಕ ಮುಖಂಡರು, ಸೇರಿ ವಕ್ಫ ತಿದ್ದುಪಡೆ ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷರಾದ ಬಿಲಾಲ ಗೋಕಾವಿಯವರು ವಕ್ಫ ಬಿಲ್-೨೦೨೪ ಮಸೂದೆ ಅಸಂವಿಧಾನಿಕ ಹಾಗೂ ಅಲ್ಪಸಂಖ್ಯಾತ ವಿರೋಧಿ ಬಿಲ್ ಇದಾಗಿದ್ದು ಇದನ್ನು ನಾವು ಎಂದಿಗೂ ಒಪ್ಪಿವುದಿಲ್ಲ ಎಂದು ಹೇಳಿದರು. ಅದೇ ರೀತಿ ಮುಸ್ಲಿಂ ಧರ್ಮಗುರುಗಳಾದ ಮೌಲಾನ್ ಶಮಶುದ್ದೀನ ಅಣ್ಣಿಗೇರಿ ಅವರು ಮಾತನಾಡಿ ವಕ್ಫ ಆಸ್ತಿ ಅಲ್ಲಾಹನ ಆಸ್ತಿ ಇದರಲ್ಲಿ ಸರ್ಕಾರದ ಮಧ್ಯಸ್ಥಿಕೆ ವಹಿಸುವುದು ಸರಿಯಲ್ಲ ಈ ಬಿಲ್ಲನ್ನು ನಾವು ಎಂದಿಗೂ ಒಪ್ಪುವುದಿಲ್ಲ, ಈ ಕರಾಳ ಕಾನೂನಿನ ವಿರುದ್ಧ ನಮ್ಮ ಸಮಾಜದ ಎಲ್ಲ ಯುವಕರು, ಧಾರ್ಮಿಕ ಮುಖಂಡರುಗಳು, ಸಮದಾಯದ ನಾಯಕರುಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಕರೆ ಕೊಟ್ಟರು. 

ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಅನ್ವರ ಬಾಗೇವಾಡಿ ಅವರು ಮಾತನಾಡಿ ವಕ್ಫ ಆಸ್ತಿಗಳ ಸಂರಕ್ಷಣೆ ಹಾಗೂ ವಕ್ಫ ಸುಧಾರಣೆಗಳ ಹೆಸರಿನಲ್ಲಿ ಇತ್ತೀಚಿಗೆ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ವಕ್ಫ ಬಿಲ್-೨೦೨೪ ತಂದಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿರುತ್ತದೆ. ಮುಸ್ಲಿಂ ಸಮುದಾಯದ ಕ್ಷೇಮಾಭಿವೃದ್ಧಿಗೆ ಇರುವ ವಕ್ಫ ಆಸ್ತಿಗಳನ್ನು ಕಸಿದುಕೊಳ್ಳುವ ಹುನ್ನಾರ ಬಿಜೆಪಿ ಪಕ್ಷದ ಹಿಡನ್ ಅಜೆಂಡ್‌ವಾಗಿರುತ್ತದೆ. ಹಾಲಿಯಲ್ಲಿರುವ ವಕ್ಫ ಕಾಯಿದೆಗೆ ಸರಿ ಸುಮಾರು ೪೦ ತಿದ್ದುಪಡಿಗಳನ್ನು ಮಾಡುವ ಮೂಲಕ ಇಡೀ ವಕ್ಫ ಕಾಯ್ದೆಯನ್ನೇ ನಾಶಗೊಳಿಸುವ ಈ ವಕ್ಫ ಬಿಲ್-೨೦೨೪ ತಂದಿರುವುದು ಇದು ಜಾತ್ಯಾತೀತ ಮೌಲ್ಯಗಳ ವಿರುದ್ಧವಾಗಿದೆ ಹಾಗೂ ತಾರತಮ್ಯಗಳೊಂದಿಗೆ ಕೂಡಿದೆ. ಆದುದರಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಈ ಬಿಲ್ ವಿರುದ್ಧ ತನ್ನ ವಿರೋಧ ವ್ಯಕ್ತಪಡಿಸುತ್ತದೆ. ಗೌರವಾನ್ವಿತ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರು, ಜಂಟಿ ಸಂಸದೀಯ ಸಮಿತಿ, ನವದೆಹಲಿ ಇವರಿಗೆ ಈ ಪ್ರತಿಭಟನೆ ಮೂಲಕ ಆಕ್ಷೇಪಣೆಗಳಲ್ಲಿ ಸಲ್ಲಿಸುತ್ತಿದೆ ಎಂದು ಎಸ್.ಡಿ.ಪಿ.ಐ ಗದಗ ಪ್ರಧಾನ ಕಾರ್ಯದರ್ಶಿಗಳಾದ ಅನ್ವರ ಬಾಗೇವಾಡಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಹಿದಾಯತುಲ್ಲಾ ಕಾಗದಗಾರ, ಮುಸ್ತಾಕ ಕಟ್ಟಿಮನಿ, ಅನ್ವರ ಮುಲ್ಲಾ, ಹಸನ್ ನಾಗನೂರ, ಸಮೀರ ಕೊಟ್ಟೂರು, ಮುಸ್ತಾಕ ಹೊಸಮನಿ, ಅಫ್ಪಾನ್ ತರಬ್ದಾರ, ಇಬ್ರಾಹಿಂ ಕುಂದರಪಿ, ಜಾಫರ ಅಹ್ಮದ, ನೌಶಾದ ಮುಲ್ಲಾ, ಇಸ್ಮಾಯಲ್ ಅಣ್ಣಿಗೇರಿ, ಸಾದಿಕ್, ಇರ್ಫಾನ್ ಗುಳಗುಂದಿ ಸೇರಿದಂತೆ ಅನೇಕ ಕಾರ್ಯಕರ್ತರು, ಗುರುಹಿರಿಯರು, ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ವಿದ್ಯುತ್ ನಿಲುಗಡೆ ಗದಗ : ಪ್ರಜೆಗಳೇ ಪ್ರಭುಗಳು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಿ : ಸಚಿವ ಎಚ್.ಕೆ.ಪಾಟೀಲ ಗದಗ : ಜನರ ಆರೋಗ್ಯ ಕಾಪಾಡಲು ಸ್ವಚ್ಚತೆ ನಮ್ಮ ಮೊದಲ ಕರ್ತವ್ಯ : ಕೀರ್ತಿ, ಪಾಟೀಲ್ ರೋಣ : ಗ್ರಾಮ ಸುಂದರವಾಗಿ ಕಾಣಲು ಸ್ವಚ್ಚತೆ ಮೊದಲ ಆದ್ಯತೆ ಆಗಿರಲಿ : ತಾಪಂ ಇಓ ಮಂಜುಳಾ ಹಕಾರಿ.. ಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು ಕಡ್ಡಾಯ ಗದಗ : ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಗದಗ : ಭೋವಿ ಸಮಾಜದ ತಾಲೂಕ ಅಧ್ಯಕ್ಷ ರಾಜು ಕಳ್ಳಿ ಅವರಿಗೆ ಸನ್ಮಾನ ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು