ಗದಗ ೧೪: ಗದಗ-ಬೆಟಗೇರಿ ಈದ್ ಮೀಲಾದ್ ಕಮಿಟಿಯಿಂದ ಮಹಮ್ಮದ್ ಪೈಗಂಬರ್ ಸಮಿತಿ ರಚಿಸಲಾಗಿದೆ. ಪ್ರತಿ ವರ್ಷ ಪೈಗಂಬರ್ ದಿನಾಚರಣೆಯನ್ನು ಸೆ. ೧೬ರಂದು ಈದ್ಗಾ ಮೈದಾನದಲ್ಲಿ ಅತ್ಯಂತ ಅರ್ಥ ಪೂರ್ಣವಾಗಿ ಆಚರಿಸಿಕೊಂಡು ಬಂದಿದ್ದೇವೆ. ಈ ಬಾರಿಯೂ ಅರ್ಥಪೂರ್ಣವಾಗಿ ಆಚರಿಸಲು ತಿರ್ಮಾನಿಸಲಾಗಿದೆ ಎಂದು ೨೦೨೪ರ ಗದಗ-ಬೆಟಗೇರಿ ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಬಾಷಾಸಾಬ್ ಮಲ್ಲಸಮುದ್ರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಿ ಉರ್ದು ಶಾಲೆಯ ಮಕ್ಕಳಿಗೆ ೫ ಸಾವಿರ ನೋಟ್ ಬುಕ್ ವಿತರಣೆ, ಮುಸಲ್ಮಾನ ಬಡ ಮಹಿಳೆಯರಿಗೆ ೨೫೦ ಸೀರೆಗಳು, ೧೫೦ ಮದರಸಾ ಮಕ್ಕಳಿಗೆ ಬಟ್ಟೆ ವಿತರಣೆ, ರಕ್ತ ತಪಾಸಣೆ, ಅನ್ನ ಸಂತರ್ಪಣೆ ಕಾರ್ಯಕ್ರಮ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಹಮ್ಮದ್ ಪೈಗಂಬರ್ ಲೋಕದಿಂದ ತ್ಯಜಿಸಿದ ದಿನವಾಗಿದ್ದು, ಇದೇ ದಿನ ಅವರ ಜನನ ಕೂಡ ಆಗಿರುತ್ತದೆ. ಈ ಹಿನ್ನಲೆಯಲ್ಲಿ ಪ್ರವಾದಿಗಳ ಜೀವನವನ್ನು ಸಮಾಜಕ್ಕೆ ತಿಳಿಸುವ ಉದ್ದೇಶವನ್ನು ನಮ್ಮ ಕಮಿಟಿ ಹೊಂದಿದ್ದು, ಪೈಗಂಬರ್ ಜಯಂತಿಯನ್ನು ಎಲ್ಲರೂ ಸೇರಿ ಆಚರಿಸೋಣ, ಪ್ರತಿ ಏರಿಯಾದಲ್ಲಿ ಅನ್ನ ಸಂತರ್ಪಣೆಯನ್ನು ಮುಸಲ್ಮಾನ ಬಾಂಧವರು ಆಯೋಜಿಸಲು ತಿರ್ಮಾನಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವಧರ್ಮದವರು ಸಹಾಕಾರ ನೀಡಬೇಕು ಎಂದು ವಿನಂತಿಸಿದರು.
ಮೌಲಾನಾ ಇನಾಯತುಲ್ಲಾ ಪಿರ್ಜಾದೆ ಅವರು ನೇತೃತ್ವ ವಹಿಸಿಕೊಳ್ಳಲಿದ್ದು, ಮುಪ್ತಿ ಶಬ್ಬಿರಅಹ್ಮದ ಬೂದ್ಲೇಖಾನ್ ಕಾರ್ಯಕ್ರಮದ ಪ್ರಾರ್ಥನೆ ಸಲ್ಲಿಸಲಿದ್ದಾರೆ. ದಿವ್ಯ ಸಾನಿಧ್ಯ ಜಗದ್ಗುರು ತೋಂಟದಾರ್ ಮಠದ ಪೀಠಾಧಿಪತಿ ಪರಮಪೂಜ್ಯ ಡಾ: ಸಿದ್ದರಾಮ ಮಹಾಸ್ವಾಮಿಜಿಗಳು ವಹಿಸಿಕೊಳ್ಳಲಿದ್ದು, ಮೌಲಾನ ನಿಜಾಮುದ್ದೀನ್ ಕಾಸ್ತಿ ಬೆಂಗಳೂರು ಇವರು ಪ್ರಾಸ್ತಾವಿಕ ನುಡಿ ಹೇಳಲಿದ್ದಾರೆ. ಮಹಮ್ಮದ ಇಸ್ಲಾಕ್ ಪುತ್ತೂರ ಸಾ। ಮಂಗಳೂರ ಅವರು ಪ್ರವಾದಿ ಮಮಹ್ಮದ್ ಪೈಗಂಬರ್ ಅವರ ಜೀವನ ಚರಿತ್ರೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಜೊತೆಗೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ: ಹೆಚ್. ಕೆ ಪಾಟೀವರು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುಸೂಪ್ ಕೊಟೂರ, ಶೌಕತ್ ಕಾತರಕಿ, ಆರೀಪ್ ಹುನಗುಂದ, ಕರಿಂಸಾಬ್ ಸುಳಗಾರ, ರಿಯಾಜಅಹ್ಮದ್ ಗುಡಿಸಲಮನಿ, ಅಕ್ಬರ್ ಅಲಿ ಅತ್ತರ್, ಶಬ್ಬರ್ ಧಾರವಾಡ, ಚಾಂದಸಾಬ್ ಕೊಟ್ಟೂರ, ಮಲ್ಲಿಕಜಾನ್ ಬಾಗಲಕೋಟಿ, ಸಮೀರ್ ಅಗಸನಹಳ್ಳಿ, ದಾದಾಪೀರ್ ಮುಂಡರಗಿ ಉಪಸ್ಥಿತರಿದ್ದರು.