ಗದಗ : ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 2024-25 ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಆಯ್ಕೆ ಸ್ರ‍್ಧೆಗಳನ್ನು ಸೆಪ್ಟಂಬರ 17 ರಿಂದ 20 ರವರೆಗೆ ಆಯೋಜಿಸಿದ್ದು, ಕ್ರೀಡಾಕೂಟದಲ್ಲಿ ಪುರುಷರು ಹಾಗೂ ಮಹಿಳೆಯರು ಭಾಗವಹಿಸಬಹುದಾಗಿದೆ.
ಶಿರಹಟ್ಟಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಶಿರಹಟ್ಟಿ ಶಹರದ ಎಫ್. ಎಂ. ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ದಿ:17-09-2024 ರಂದು ಬೆಳಿಗ್ಗೆ 09-00 ಗಂಟೆಗೆ, ಲಕ್ಷ್ಮೇಶ್ವರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಶ್ರೀ ಎಸ್.ಜೆ. ಎಫ್.ಸಿ. ಪ್ರೌಢಶಾಲಾ ಮೈದಾನ, ಯಳವತ್ತಿಯಲ್ಲಿ ದಿ: 18-09-2024 ರಂದು, ಗದಗ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ದಿ:19-09-2024 ರಂದು ಬೆಳಿಗ್ಗೆ 09-00 ಗಂಟೆಗೆ, ಗದಗ ಶಹರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ, ರೋಣ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ರೋಣ ಶಹರದ ದ್ರೋಣಾಚರ‍್ಯ ತಾಲೂಕು ಕ್ರೀಡಾಂಗಣದಲ್ಲಿ ದಿ: 20-09-2024 ರಂದು ಬೆಳಿಗ್ಗೆ 09-00 ಗಂಟೆಗೆ, ಗಜೆಂದ್ರಗಡ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಗಜೇಂದ್ರಗಡ ಶಹರದ ಎಸ್.ಎಂ. ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ದಿನಾಂಕ: 20-09-2024 ರಂದು ಬೆಳಿಗ್ಗೆ 09-00 ಗಂಟೆಗೆ, ಮುಂಡರಗಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಮುಂಡರಗಿ ಶಹರದ ಶ್ರೀ ಅನ್ನದಾನೇಶ್ವರ ತಾಲೂಕು ಕ್ರೀಡಾಂಗಣ ದಲ್ಲಿ ದಿ: 20-09-2024 ರಂದು ಬೆಳಿಗ್ಗೆ 09-00 ಗಂಟೆಗೆ ಹಾಗೂ ನರಗುಂದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ನರಗುಂದ ಶಹರದ ತಾಲೂಕು ಕ್ರೀಡಾಂಗಣ ದಲ್ಲಿ ದಿನಾಂಕ: 20-09-2024 ರಂದು ಬೆಳಿಗ್ಗೆ 09-00 ಗಂಟೆಗೆ ಆಯೋಜಿಸಲಾಗಿದೆ.
-:ದಸರಾ ಕ್ರೀಡಾ ಕೂಟದ ಸ್ರ‍್ಧೆಗಳ ವಿವರ:-
ಪುರುಷರಿಗೆ :- ಅಥ್ಲೆಟಿಕ್ಸ ಸ್ರ‍್ಧೆಗಳು :-100ಮೀ. 200ಮೀ, 400ಮೀ. 800ಮೀ. 1500ಮೀ. 5000,ಮೀ ಓಟ, 10000 ಮೀ.ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ ,ಟ್ರಿಪಲ್ ಜಂಪ್, ಜಾವಲಿನ ಎಸೆತ, ಡಿಸ್ಕಸ್ ಎಸೆತ, 110ಮೀ ರ‍್ಡಲ್ಸ್, 4*100 ಮೀ. ರಿಲೇ, 4*400 ಮೀ. ರಿಲೇ. ಗುಂಪು ಕ್ರೀಡೆಗಳು: ವ್ಹಾಲಿಬಾಲ್, ಕಬಡ್ಡಿ, ಖೋಖೋ ಮತ್ತು ಥ್ರೋಬಾಲ್
ಮಹಿಳೆಯರಿಗೆ: ಅಥ್ಲೆಟಿಕ್ಸ ಸ್ರ‍್ಧೆಗಳು :-100ಮೀ. 200ಮೀ, 400ಮೀ. 800ಮೀ. 1500ಮೀ. 3000,ಮೀ ಓಟ ಉದ್ದ ಜಿಗಿತ,ಎತ್ತರ ಜಿಗಿತ, ಗುಂಡು ಎಸೆತ ಟ್ರಿಪಲ್ ಜಂಪ್, ಜಾವಲಿನ ಎಸೆತ, ಡಿಸ್ಕಸ್ ಎಸೆತ, 100ಮೀ ರ‍್ಡಲ್ಸ್, 4*100 ಮೀ. ರಿಲೇ, 4*400 ಮೀ. ರಿಲೇ. ಗುಂಪು ಸ್ರ‍್ಧೆಗಳು:- ವಾಲಿಬಾಲ್, ಕಬಡ್ಡಿ, ಖೋ-ಖೋ ಮತ್ತು ಥ್ರೋಬಾಲ್.
ವೈಯಕ್ತಿಕ ಕ್ರೀಡೆಗಳಲ್ಲಿ ಪ್ರಥಮ, ದ್ವಿತೀಯ ಮತ್ತು ಗುಂಪು ಸ್ರ‍್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದ ತಂಡಗಳನ್ನು ಮಾತ್ರ ಜಿಲ್ಲಾ ಮಟ್ಟಕ್ಕೆ ನಿಯೋಜಿಸಲಾಗುವುದು.
ಕ್ರೀಡಾಕೂಟದಲ್ಲಿ ರಕ್ಷಣಾ ಪಡೆ, ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ರ‍್ಹರಲ್ಲ. ಒಬ್ಬ ಕ್ರೀಡಾಪಟು ಅಥವಾ ತಂಡ ಯಾವುದೇ ಜಿಲ್ಲೆಯಲ್ಲಿ ಒಂದು ಬಾರಿ ತಾಲೂಕು ಅಥವಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಂತರ ಬೇರೆ ಯಾವುದೇ ಜಿಲ್ಲೆಯ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಅಂತಹ ಪ್ರಕರಣವೇನಾದರೂ ದಾಖಲಾದಲ್ಲಿ ಅಥವಾ ಗಮನಕ್ಕೆ ಬಂದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಗದಗ ತಾಲೂಕಿನ ಯುವ ಜನ ಸೇವಾ ಮತ್ತು ಕ್ರೀಡಾಧಿಕಾರಿಗಳಾದ ಶ್ರೀ ಎಂ.ಎಸ್. ಕುಚಬಾಳ ಇವರ ಮೊಬೈಲ್ ಸಂ.9449814341, ಮುಂಡರಗಿ ತಾಲೂಕಿನ ಯುವ ಜನ ಸೇವಾ ಮತ್ತು ಕ್ರೀಡಾಧಿಕಾರಿಗಳಾದ ಶ್ರೀ ಹುಸೇನಸಾಬ.ಕೆ. ಇವರ ಮೊಬೈಲ್ ಸಂ. 9845796377, ನರಗುಂದ ತಾಲೂಕಿನ ಯುವ ಜನ ಸೇವಾ ಮತ್ತು ಕ್ರೀಡಾಧಿಕಾರಿಗಳಾದ ಶ್ರೀ ಎನ್.ಆರ್. ನಿಡಗುಂದಿ ಇವರ ಮೊಬೈಲ ನಂ. 9945256311, ರೋಣ ತಾಲೂಕಿನ ಯುವ ಜನ ಸೇವಾ ಮತ್ತು ಕ್ರೀಡಾಧಿಕಾರಿಗಳಾದ ಶ್ರೀ ಆರ್. ಎಸ್. ನರೇಗಲ್ಲ 9164412209, ಗಜೇಂದ್ರಗಡ ತಾಲೂಕು ಯುವ ಜನ ಸೇವಾ ಮತ್ತು ಕ್ರೀಡಾಧಿಕಾರಿಗಳಾದ ಶ್ರೀ ವಿ.ವಿ. ಈಟಿ, ಇವರ ಮೊಬೈಲ್ ನಂ. 6362723720, ಶಿರಹಟ್ಟಿ ತಾಲೂಕಿನ ಯುವ ಜನ ಸೇವಾ ಮತ್ತು ಕ್ರೀಡಾಧಿಕಾರಿಗಳಾದ ಶ್ರೀ ಎಂ.ಡಿ. ತಳ್ಳಳ್ಳಿ ಇವರ ಮೊಬೈಲ್ ನಂ.9449068741, ಲಕ್ಷ್ಮೇಶ್ವರ ತಾಲೂಕಿನ ಯುವ ಜನ ಸೇವಾ ಮತ್ತು ಕ್ರೀಡಾಧಿಕಾರಿಗಳಾದ ಶ್ರೀ ಚಂದ್ರು ಮೇಗಿಲಮನಿ ಇವರ ಮೊಬೈಲ್ ನಂ.8618320040 ಇವರನ್ನು ಸಂರ‍್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.