ಗದಗ : “ಆರೋಗ್ಯದಿಂದಿರಲು ಸಾತ್ವಿಕ ಆಹಾರ ಸೇವನೆ ಮುಖ್ಯ” : ಡಾ. ಗೋಪಿನಾಥ್ ಕುರುಡೇಕರ್

ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಆರೋಗ್ಯ ಕಾರ್ಯಕ್ರಮ 

ಗದಗ : ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಆರೋಗ್ಯ ಕರ‍್ಯಕ್ರಮದಲ್ಲಿ ಆಗಮಿಸಿದಂತಹ ಗದುಗಿನ ಡಾ. ಗೋಪಿನಾಥ್ ಬಾಬುರಾವ್ ಕುರುಡೇಕರ್ ಮಾತನಾಡುತ್ತಾ ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯವೇ ಮಹಾಭಾಗ್ಯ ಆರೋಗ್ಯಕ್ಕೆ ಮೊದಲ ಆದ್ಯತೆಯನ್ನು ಕೊಡಬೇಕು. ಈ ಶಾಲೆಯ ಶಿಸ್ತು ಸ್ವಚ್ಛತೆ ಮತ್ತು ಆರೋಗ್ಯವಂತ ಮಕ್ಕಳನ್ನು ನೋಡಿ ತುಂಬಾ ಸಂತೋಷವಾಯಿತು. ಶಾಲಾ ಬಸ್ಗಳ ಹಿಂಭಾಗದಲ್ಲಿ ಬರೆದಿರುವ “ ಒಳಗಡೆ ಅಮೂಲ್ಯವಾದ ಮುತ್ತು ರತ್ನಗಳಿವೆ ಸುರಕ್ಷಿತವಾದ ಅಂತರವಿರಲಿ” ಎನ್ನುವ ಬರಹ ಓದಿ ಮನಸ್ಸಿಗೆ ಸಂತಸವೆನಿಸಿತು. ಒಳಗೆ ಬಂದು ಇಲ್ಲಿಯ ಪಿರಮಿಡ್ ಗಳನ್ನು ನೋಡಿದಾಗ ಇಲ್ಲಿ ಓದುತ್ತಿರುವ ಮಕ್ಕಳು ಅದೃಷ್ಟವಂತರಂದೆನಿಸಿತು. ಓದು ತಲೆಗೆ ಹತ್ತದಿರುವ ಮಕ್ಕಳು ಅಲ್ಲಿ ಹೋಗಿ ಸ್ವಲ್ಪ ಹೊತ್ತು ಕುಳಿತು ಧ್ಯಾನ ಮಾಡಿದರೆ ಏಕಾಗ್ರತೆ ಬರುತ್ತದೆ. ಪಿರಾಮಿಡ್ ಗಳಲ್ಲಿ ಧನಾತ್ಮಕ ಶಕ್ತಿ ಇದ್ದು ಈ ಪಿರಾಮಿಡ್ ಗಳ ಎದುರುಗಡೆ ತುಳಸಿ ಗಿಡವನ್ನು ನೆಟ್ಟರೆ ಈ ಶಕ್ತಿ ಇನ್ನಷ್ಟು ಹೆಚ್ಚಾಗುತ್ತದೆ. ಒಂದು ನಿಗದಿತ ಮುದ್ರೆಯನ್ನ ಮಾಡಿಕೊಂಡು ಗಡಿಯಾರದ ರೀತಿ ಚಲನೆ ಹಾಗೂ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಚಲನೆ ಮಾಡಿದರೆ ಮ್ಯಾಗ್ನೆಟಿಕ್ ಎರ‍್ಜಿ ಉತ್ಪತ್ತಿ ಯಾಗುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬರೂ ಬೆಳಗ್ಗೆ ಎದ್ದಾಕ್ಷಣ ತಂದೆ ತಾಯಿ ಪಾದ ಮುಟ್ಟಿ ನಮಸ್ಕರಿಸಬೇಕು ನಾಳೆಯಿಂದಲೇ ಪಾಲಿಸಬೇಕೆಂದರು. ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲುಹಿದ ಮಾತಾ ಪಿತರಿಗೆ ಈ ಮೂಲಕವಾದರೂ ಗೌರವಿಸಿದಂತಾಗುತ್ತದೆ. ನಮ್ಮ ಮೂಲ ಸಂಸ್ಕಾರದ ಸಂಸ್ಕೃತಿಯನ್ನು ಮುಂದುವರಿಸಿದಂತಾಗುತ್ತದೆ. ತಂದೆ ತಾಯಿ ಮಕ್ಕಳು ತಪ್ಪು ಮಾಡಿದಾಗ ಬೆದರಿಸಲೂಬಹುದು ಆ ರ‍್ಹತೆ ಇರುವುದು ಅವರಿಗೆ ಮಾತ್ರ. ಹಾಗೆ ಅವರು ನಡೆದುಕೊಳ್ಳುವುದು ನಮ್ಮ ಮಕ್ಕಳು ಸಮಾಜದಲ್ಲಿ ಎಲ್ಲರಿಂದಲೂ ಗೌರವ ಪಡೆದುಕೊಳ್ಳುವ ವ್ಯಕ್ತಿಗಳಾಗಬೇಕು ಎಂಬ ಸದುದ್ದೇಶದಿಂದ ಅಷ್ಟಕ್ಕೆ ಸುಮ್ಮನಿರದೇ ತದನಂತರ ಹತ್ತಿರ ಬಂದು ತಲೆ ಸವರುತ್ತ ಸಮಾಧಾನ ಮಾಡಿ ಸಹನೆ ತಾಳ್ಮೆಯಿಂದ ಬುದ್ಧಿ ಮಾತನ್ನ ಹೇಳುತ್ತಾರೆ.

ಮುಂದುವರೆದು ಮಾತನಾಡುತ್ತಾ ನಾವು ನಮ್ಮ ಮಕ್ಕಳನ್ನು ಇನ್ನೊಬ್ಬರಿಗೆ ಹೋಲಿಕೆ ಮಾಡಿ ನೋಡಿ ಅವನು ಎಷ್ಟೊಂದು ಬುದ್ಧಿವಂತ ನೀನು ದಡ್ಡ ಎಂದು ಯಾವತ್ತೂ ಹೇಳಬೇಡಿರಿ. ಅಂತಹ ಮಾತುಗಳಿಂದ ಮಕ್ಕಳಲ್ಲಿ ಕೀಳರಿಮೆ ಭಾವನೆ ಮೂಡುತ್ತದೆ. ಆಗ ಅವರು ಅಷ್ಟಕ್ಕೆ ಸೀಮಿತರಾಗುತ್ತಾರೆ. ಬದಲಾಗಿ ನಿನಗೂ ಬುದ್ಧಿವಂತಿಕೆ ಇದೆ ಏಕಾಗ್ರತೆಯಿಂದ ಓದು ಬರಹ ನನಗಾಗಿ ನನ್ನ ಮುಂದಿನ ಸಂತಸದ ಜೀವನಕ್ಕಾಗಿ ಎಂದು ಅರಿತು ಓದು ಎಂದು ಹೇಳಿರಿ. ಒಟ್ಟಾರೆಯಾಗಿ ನಮ್ಮ ಮಾತು ಅವರಿಗೆ ಸ್ಪೂರ್ತಿದಾಯಕವಾಗಿರಲಿ ಎಂದು ಹೇಳುತ್ತಾ ಶಿಸ್ತು ಸಮಯ ಪಾಲನೆಯನ್ನು ಪ್ರತಿಯೊಬ್ಬ ಮಕ್ಕಳು ಪಾಲಿಸಿದರೆ ನಿಮ್ಮ ಬಗ್ಗೆ ಮನೆಯಲ್ಲಿ ಪಾಲಕರಿಗೂ ಶಾಲೆಯಲ್ಲಿ ಶಿಕ್ಷಕರಿಗೂ ಹಾಗೂ ಸಮಾಜದಲ್ಲಿಯೂ ನೀವು ಆರ‍್ಶ ವ್ಯಕ್ತಿಗಳಾಗುತ್ತೀರಿ. ನಿಮ್ಮ ಕುರಿತು ಎಲ್ಲರಿಗೂ ಗೌರವ ಹಾಗೂ ಧನಾತ್ಮಕ ಭಾವನೆ ಮೂಡುತ್ತದೆ.

ಅಂತಿಮವಾಗಿ ಆರೋಗ್ಯದಿಂದಿರಲು ಸಾತ್ವಿಕ ಆಹಾರ ಸೇವನೆ ಮುಖ್ಯ ತಾಜಾ ಹಣ್ಣು ಹಂಪಲು ತರಕಾರಿ ಮತ್ತು ಸೊಪ್ಪು ಹೆಚ್ಚು ಸೇವಿಸಬೇಕು. ನಾವು ನಮ್ಮ ಆರೋಗ್ಯವನ್ನು ಕಾಪಾಡಲು ದುಶ್ಚಟದಿಂದ ದೂರವಿದ್ದು ಸಾತ್ವಿಕ ಆಹಾರವನ್ನು ಸೇವಿಸಿದರೆ ಶೇಕಡ ೫೦ ಭಾಗ ಆಹಾರ ಪದ್ಧತಿಯಿಂದಲೇ ರೋಗ ಮುಕ್ತರಾಗಬಹುದು. ಇನ್ನೂ ಶೇಕಡಾ ೫೦ ಭಾಗ ನಮ್ಮ ದಿನಚರಿ ಯೋಗ ಧ್ಯಾನ ನಮ್ಮ ನಡೆನುಡಿ ನಾವು ಮಾಡುವ ಸತ್ಕರ‍್ಯಗಳಾದ ದಾನ ರ‍್ಮ ಮಾಡುವುದರಿಂದ ಆರೋಗ್ಯವಂತರಾಗಿರಲು ಸಾಧ್ಯ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಚಿಕ್ಕಟ್ಟಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್. ವೈ. ಚಿಕ್ಕಟ್ಟಿಯವರು ಆರೋಗ್ಯದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೈದ್ಯರಾದ ಶ್ರೀ ಗೋಪಿನಾಥ್ ಬಾಬುರಾವ್ ಕುರುಡೇಕರ್ ಅವರನ್ನು ಸನ್ಮಾನಿಸಲಾಯಿತು ಜೊತೆಗೆ ಉಪ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಸ್ಥಾವರಮಠ, ಆಡಳಿತಾಧಿಕಾರಿಗಳಾದ ಶ್ರೀಮತಿ ಕಲಾವತಿ ಕೆಂಚರಹಹುತ್, ಯೋಗ ಧ್ಯಾನ ಗುರುಗಳಾದ ಬೆಂಗಳೂರಿನ ಶ್ರೀ ಅನಿಲ್ ನಾಯಕ್, ಹಿರಿಯ ಶಿಕ್ಷಕರಾದ ಶ್ರೀ ವಿ. ಬಿ. ತಾಳಿಯವರು, ಉಪ ಮುಖ್ಯೋಪಾಧ್ಯಾಯನೀಯರಾದ ಶ್ರೀಮತಿ ರಿಯಾನ ಮುಲ್ಲಾ, ಸಂಸ್ಥೆಯ ಶಿಕ್ಷಕ ವೃಂದದವರು ಸಿಬ್ಬಂದಿ ರ‍್ಗದವರು ಮತ್ತು ಕಳಸಪ್ರಾಯರಾದ ಮಕ್ಕಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *