ಗದಗ : ಸಪ್ಟೆಂಬರ್ 10: 2024-25 ನೇ ಸಾಲಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಂದು ಪರಿಶಿಷ್ಟ ವರ್ಗದ ಜನಾಂಗದ ಏಳಿಗೆಗಾಗಿ ಶ್ರಮಿಸಿದ ವ್ಯಕ್ತಿಗಳಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ನಿರ್ಧರಿಸಿರುತ್ತದೆ. ಅಕ್ಟೋಬರ್ 17 ರಂದು ನಡೆಯುವ ಮಹರ್ಷಿ ವಾಲ್ಮೀಕಿ ಜಯಂತಿಯಂದು ಪ್ರಶಸ್ತಿಯನ್ನು ನೀಡಲು ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರಶಸ್ತಿಗೆ ಅರ್ಹ ವ್ಯಕ್ತಿಗಳನ್ನು ಆಯ್ಕೆಮಾಡಬೇಕಾಗಿದ್ದರಿಂದ ಸಮಾಜ ಸೇವೆ ಕೈಗೊಂಡ ಹಾಗೂ ಪರಿಶಿಷ್ಟ ಪಂಗಡದ ಜನಾಂಗದ ಏಳಿಗೆಗಾಗಿ ಶ್ರಮಿಸಿದ ಬಗ್ಗೆ ಛಾಯಾಚಿತ್ರ ಹಾಗೂ ದಾಖಲೆ ಸಮೇತವಾಗಿ ಅರ್ಜಿಯನ್ನು
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಛೇರಿ , ರೂ.ನಂ: 107. ಮೊದಲನೇ ಮಹಡಿ. ಜಿಲ್ಲಾಡಳಿತ ಭವನ. ಹುಬ್ಬಳ್ಳಿ ರೋಡ್ ಈ ಕಛೇರಿಗೆ ಸಪ್ಟೆಂಬರ್ 17 ರೊಳಗಾಗಿ ಖುದ್ದಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.